ಹರಿಹರ ಪೊಲೀಸ್ ಇಲಾಖೆಯಿಂದ ಭ್ರಷ್ಟಾಚಾರ.? ಶಾಸಕ ಎಸ್ ರಾಮಪ್ಪ ಗಂಭೀರ ಆರೋಪ.

ವರದಿ.ಪ್ರಕಾಶ್ ಮಂದಾರ

ಜಿಲ್ಲಾ ಸುದ್ದಿಗಳು 

ಹರಿಹರ

ಮಧ್ಯ ಕರ್ನಾಟಕದ ಹೆಬ್ಬಾಗಿಲು ಎಂದೇ ಇಡೀ ರಾಜ್ಯಾದ್ಯಂತ ಹೆಸರಾಗಿರುವ ಹರಿಹರ ತಾಲ್ಲೂಕು ಇತ್ತೀಚಿನ ದಿನದಲ್ಲಿ ಹಲವು ವಿವಾದಗಳ ಹೇಳಿಕೆಯಿಂದ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ.**ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರ ಸಮ್ಮುಖದಲ್ಲಿ ಕೋವಿಡ್ ಮೂರನೇ ಅಲೆ ನಿಯಂತ್ರಿಸುವ ಸಲುವಾಗಿ ಕರೆದಿದ್ದ ಶಾಸಕಾಂಗ ಹಾಗೂ ಕಾರ್ಯಾಂಗದ ಸದಸ್ಯರ ಸಮಕ್ಷಮದಲ್ಲಿ ಹರಿಹರದ ಚುನಾಯಿತ ಪ್ರತಿನಿಧಿ ಶಾಸಕ ಎಸ್ ರಾಮಪ್ಪ ನವರು ತಾಲ್ಲೂಕಿನ ಪೊಲೀಸ್ ಇಲಾಖೆಯ ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.*

CHETAN KENDULI

*ಹರಿಹರ ನಗರ,ಗ್ರಾಮಾಂತರ ಹಾಗೂ ಮೆಲೆಬೆನ್ನೂರು ಪೋಲಿಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಾಲ್ಲೂಕಿನ ಬಡ,ಮದ್ಯಮ ಅಮಾಯಕ,ಮುಗ್ಧ ರೈತ, ಕಾರ್ಮಿಕ ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ .ಅವರ ಕೃಷಿ ಚಟುವಟಿಕೆಯ ವಾಹನಗಳನ್ನು ತಡೆಯುವುದು, ಅನಾವಶ್ಯಕವಾಗಿ ಬೈಕ್ಗಳನ್ನು ಹಿಡಿಯುವುದು ಹೀಗೆ ನಾನಾ ರೀತಿಯಲ್ಲಿ ತೊಂದರೆಗಳನ್ನು ನೀಡಿ ತಾಲ್ಲೂಕಿನ ಮುಗ್ಧ ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಬಹಿರಂಗವಾಗಿ ಹರಿಹರ ಪೊಲೀಸ್ ಠಾಣಾಧಿಕಾರಿಗಳ ಕಾರ್ಯ ವೈಕರಿ ಸಂಬಂಧಿಸಿದಂತೆ ಶಾಸಕರು ಗಂಭೀರ ಆರೋಪ ಮಾಡಿದ್ದರು.**ಹರಿಹರ ಶಾಸಕರ ಈ ಆರೋಪ ಇದು ಮೊದಲಲ್ಲ, ಈ ಹಿಂದೆಯೂ ಸಹ ತಾಲ್ಲೂಕಿನ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಪೊಲೀಸರು ಶಾಮೀಲಾಗಿದ್ದಾರೆ ಎಂದು ಸಹ ಆರೋಪ ಮಾಡಿದ್ದರು .1ಹೆಜ್ಜೆ ಮುಂದೆ ಎನ್ನುವಂತೆ ಶಾಸಕರ ಬೆಂಬಲಿಗರು ರಾಜನಹಳ್ಳಿ ಗ್ರಾಮದಲ್ಲಿ ಮರಳು ತುಂಬಿದ ಲಾರಿಯನ್ನು ಸರಿಸುಮಾರು ರಾತ್ರಿ 12 ಗಂಟೆಗೆ ತೆಡೆದು ನಿಲ್ಲಿಸುವ ಮೂಲಕ ತಾಲ್ಲೂಕಿನ ಪೊಲೀಸ್ ಅಧಿಕಾರಿಗಳ ನೈಜ ಮುಖವನ್ನು ರಾಜ್ಯದ ಜನರ ಮುಂದೆ ಬೆತ್ತಲುಗೊಳಿಸಿದ್ದರು.*

*ಹೀಗೆ ಹರಿಹರದ ಶಾಸಕರು ತಾಲ್ಲೂಕಿನ ಪೋಲಿಸರಿಂದ ಜನ ಸಾಮಾನ್ಯರಿಗೆ ಆಗುತ್ತಿರುವ ಕಿರುಕುಳಕ್ಕೆ ಸಂಬಂಧಿಸಿದಂತೆ ಈ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದಾರೆ ಆದರೆ ಸಂಬಂಧಿಸಿದ ಮೇಲಧಿಕಾರಿಗಳು ಮಾತ್ರ ಶಾಸಕರ ಮಾತಿಗೆ ಮನ್ನಣೆ ನೀಡಿ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಕ್ರಮಕೈಗೊಳ್ಳುವಲ್ಲಿ ಮೀನಾಮೇಷ ಏಣಿಸುತ್ತಿರುವುದು ಮಾತ್ರ ವಿಪರ್ಯಾಸ.**ಈಗ ಜಿಲ್ಲೆಗೆ ಬಂದಿರುವ ಖಡಕ್ ಪೋಲಿಸ್ ವರಿಷ್ಠಾಧಿಕಾರಿ ಎಸ್ ಬಿ ರಿಷ್ಯಂತ್ ಅವರು ಶಾಸಕರ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಹರಿಹರ ಪೊಲೀಸ್ ಠಾಣಾಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿ ಮುಂದಾಗುತ್ತಾರೆ ಕಾದು ನೋಡಬೇಕಾಗಿದೆ.*

*ತಾಲ್ಲೂಕಿನಲ್ಲಿ ಈ ರೀತಿ ಪೊಲೀಸ್ ಇಲಾಖೆಯಿಂದ ಭ್ರಷ್ಟಾಚಾರ ನಡೆಯಲು ಮೂಲ ಕಾರಣ ಕೆಳಹಂತದ ಪೊಲೀಸ್ ಸಿಬ್ಬಂದಿಗಳು ಒಂದೇ ಕಡೆ ಹಲವು ವರ್ಷಗಳಿಂದ ವರ್ಗಾವಣೆ ಗೊಳ್ಳದೆ ಕಾರ್ಯನಿರ್ವಹಿಸುತ್ತಿರುವುದು.ಇದರಿಂದ ತಾಲ್ಲೂಕಿನ ಅಕ್ರಮ ಚಟುವಟಿಕೆಗಳ ಸಂಪೂರ್ಣ ಮಾಹಿತಿ ಕೆಳಹಂತದ ಪೊಲೀಸ್ ಸಿಬ್ಬಂದಿಗಳಿಗೆ ತಿಳಿದಿರುತ್ತದೆ ಯಾವ ಜಾಗದಲ್ಲಿ ಯಾವ ಅಕ್ರಮ ಚಟುವಟಿಕೆಗಳು ಯಾವ ಮಟ್ಟದಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ಅವರಿಗೆ ಇದ್ದೇ ಇರುತ್ತದೆ. ಇವರು ವರ್ಗಾವಣೆಯಾಗಿ ಬಂದ ಮೇಲಧಿಕಾರಿಗಳ ಕರ್ತವ್ಯ ನಿಷ್ಠೆಯನ್ನು ಗಮನಿಸಿ ಅವರಲ್ಲಿ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ .ಬಂದ ಅಧಿಕಾರಿ ಪ್ರಾಮಾಣಿಕನಾಗಿದ್ದರೆ ಅಕ್ರಮ ಚಟುವಟಿಕೆಗಳು ನಿಯಂತ್ರಣಕ್ಕೆ ಬರುತ್ತವೆ. ಅವರು ಅಕ್ರಮ ಚಟುವಟಿಕೆ ಪುಷ್ಟಿ ನೀಡುವಂಥವರಾಗಿದ್ದರೆ ಚಟುವಟಿಕೆಗಳು ನಿಯಂತ್ರಣಕ್ಕೆ ಬಾರದೆ ಭ್ರಷ್ಟಾಚಾರ ತಾಂಡವವಾಡುತ್ತದೆ.**ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಜನಸ್ನೇಹಿ ಪೊಲೀಸ್ ಠಾಣೆಗಳ ಆಗಬೇಕಾದರೆ ಕೂಡಲೇ ಪೋಲಿಸ್ ವರಿಷ್ಠಾಧಿಕಾರಿಗಳು ಕಮಲ್ ಪಂಥ್ ಅವರ ಹಾದಿಯನ್ನು ಹಿಡಿಯುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು ಆ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಂದಾಗಬೇಕು ಎಂಬುದು ನಮ್ಮ ಪತ್ರಿಕೆಯ ಆಶಯ.

Be the first to comment

Leave a Reply

Your email address will not be published.


*