ಜಿಲ್ಲಾ ಸುದ್ದಿಗಳು
ಮಸ್ಕಿ:
ಪಟ್ಟಣದ ಗಾಂಧೀ ನಗರದಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆಸಲಾಗಿದ್ದ “ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವನ್ನು ಜಾರಿ ಗೊಳಿಸಬೇಕು” ಎಂಬುದರ ವಿಷಯವಾಗಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.
1976 ರಲ್ಲಿ ಆಗಿನ ಮುಖ್ಯಮಂತ್ರಿ ಆದಂತಹ ಡಿ ದೇವರಾಜ ಅರಸು ರವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಹೆಚ್ಚಿನ ಜಾತಿಗಳನ್ನು ಸೇರಿಸಿದರು. ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಮೂರು ಪಕ್ಷಗಳು ಕರ್ನಾಟಕದಲ್ಲಿ ಚುನಾವಣೆಯ ವೋಟ್ ಬ್ಯಾಂಕ್ ಗಾಗಿ ಅಷ್ಟೇ ನಮ್ಮ ಸಮುದಾಯಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಮೀಸಲಾತಿ ತೆಗೆಯುವ ಮತ್ತು ಮನುವಾದಿ ಯನ್ನು ಸ್ಥಾಪಿಸುವುದರ ನಡೆದಿದೆ. ಜನಸಂಖ್ಯೆಯ ಅನುಗುಣವಾಗಿ ಸಂಬಂಧಿಸಿದ ಜಾತಿಗೆ ಮೀಸಲಾತಿ ಹೆಚ್ಚಬೇಕು ಎಂದು ದೊಡ್ಡಪ್ಪ ಮುರಾರಿ ಹೇಳಿದರು.
ನಂತರ 28 ವರ್ಷಗಳಿಂದಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕುತಂತ್ರತನದಿಂದ ಇಂದಿಗೂ ನಾವು ಮೀಸಲಾತಿ ವಂಚಿತರಾಗಿದ್ದೇವೆ.ಆಯೋಗ ಜಾರಿಯಾಗದರ ಹಿಂದೆ ಸಮುದಾಯದ ಸಮಸ್ಯೆಯೋ..? ಅಥವಾ ರಾಜಕೀಯ ಪ್ರಭಾವಿಗಳ ಉನ್ನಾರವೋ..? ತಿಳಿಯದಾಗಿದೆ. ಎಂದು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಸಿ.ದಾನಪ್ಪ ನಿಲೋಗಲ್ ಸಾಹಿತಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಹಾಗೆಯೇ ಇತ್ತೀಚಿನ ದಿನಮಾನಗಳಲ್ಲಿ ನೋಡುವುದಾದರೆ ದಲಿತರ ಮೇಲಿನ ಹಲ್ಲೆ, ಅಸ್ಪೃಶ್ಯತೆ, ಮತ್ತು ಅತ್ಯಾಚಾರಮಾಡಿ ಕೊಲೆ ಮಾಡಿರುವಂತಹ ಘಟನೆಗಳನ್ನು ನಾವು ನೋಡಬಹುದು. ಅದು ಹೆಚ್ಚಾನೆಚ್ಚು ದಲಿತರ ಮೇಲೆಯೇ ನಡೆಯುತ್ತಿದೆ ಎಂದು ಬಾಲಸ್ವಾಮಿ ಜಿನ್ನಾಪೂರ ಆಕ್ರೋಶ ವ್ಯಕ್ತಪಡಿಸಿದರು. ನೆರೆದಿರುವ ಕೆಲವು ಮುಖಂಡರು ಸದಾಶಿವ ಆಯೋಗದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಇವರು ಕೊನೆಯದಾಗಿ ಸದಾಶಿವ ಆಯೋಗ ಜಾರಿ ಮಾಡುವ ಕುರಿತು ನಡಿಗೆ ಜಾಥಾ ಮತ್ತು ಮನವಿ ಪತ್ರವನ್ನು ನೀಡುವ ದಿನಾಂಕ :-18-10-2021 ರಂದು ನೀಡಲಾಗುವುದು.ಸಭೆಯಲ್ಲಿ ನೆರೆದ ಎಲ್ಲಾರ ಸರ್ವಾನುಮತದ ನಿರ್ಣಯದಂತೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಎಲ್ಲಾ ನಮ್ಮ ಹಿರಿಯರು ಮತ್ತು ಯುವಕರು ಸೇರಿದಂತೆ ಈ ನಮ್ಮ ಸದಾಶಿವ ಆಯೋಗದ ಜಾಥಾವನ್ನು ಯಶಸ್ವಿಗೊಳಿಸಬೇಕು ಎಂದು ಹನುಮಂತಪ್ಪ ವೆಂಕಟಾಪುರ ಇವರು ನೆರೆದ ಸಭೀಕರಿಗೆಲ್ಲ ಹೇಳಿದರು.
Be the first to comment