ಜಿಲ್ಲಾ ಸುದ್ದಿಗಳು
ಹೊನ್ನಾವರ
ತಾಲೂಕಿನ ಎರಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸದಸ್ಯರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೇದ ಉಪಚುನಾವಣಾ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಚಂದಾವರ ಗ್ರಾಮ ಪಂಚಾಯತ್ ಹೊದಿಕೆ ವಾರ್ಡಿನಿಂದ ಅಣ್ಣಪ್ಪ ನಾಯ್ಕ ಹಾಗೂ ಮುಗ್ವಾ ಗ್ರಾಮ ಪಂಚಾಯತ್ ಬಂಕನಹಿತ್ಲು ವಾರ್ಡಿನಿಂದ ನಾಗೇಶ್ ಆಯ್ಕೆಯಾಗಿದ್ದಾರೆ.ಚಂದಾವರ ಹೊದಿಕೆ ವಾರ್ಡ್ನಲ್ಲಿ 646 ಮತದಾರರಿದ್ದು, 532 ಮತ ಚಲಾವಣೆಯಾಗಿತ್ತು. 248 ಮತವನ್ನು ಅಣ್ಣಪ್ಪ ನಾಯ್ಕ ಪಡೆಯುವ ಮೂಲಕ ಗೆದ್ದಿದ್ದಾರೆ. ಸ್ಪರ್ಧೆಯಲ್ಲಿದ್ದ ಮಂಜುನಾಥ್ ನಾಯ್ಕ 116, ಗಣೇಶ್ ನಾಯ್ಕ 87, ಅವಿನಾಶ್ ನಾಯ್ಕ 36, ನಾಗರತ್ನ ನಾಯ್ಕ 26, ಜನಾರ್ಧನ ನಾಯ್ಕ 13 ಮತ ಪಡೆದಿದ್ದಾರೆ.
ಮುಗ್ವಾ ಬಂಕನಹಿತ್ಲು ವಾರ್ಡ್ನಲ್ಲಿ 1064 ಮತದಾರರಿದ್ದು 623 ಮತ ಚಲಾವಣೆಯಾಗಿತ್ತು. ಪೈಪೋಟಿಯ ನಡುವೆ 276 ಮತವನ್ನು ನಾಗೇಶ್ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಮಹಾಲಕ್ಷೀ ನಾಯ್ಕ 183 ಹಾಗೂ ಗಣೇಶ ಗೌಡ 154 ಮತ ಪಡೆದಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅಧಿಕಾರಿಗಳು ಪ್ರಮಾಣ ಪತ್ರ ವಿತರಿಸಿದರು.
ಮಿನಿ ವಿಧಾನಸೌಧದಲ್ಲಿ ನಡೆದ ಮತ ಎಣಿಕೆಯ ಸಂದರ್ಭದಲ್ಲಿ ತಹಶೀಲ್ದಾರ್ ನಾಗರಾಜ್ ನಾಯ್ಕ ಡ್, ಚುನಾವಣಾ ಅಧಿಕಾರಿಗಳಾದ ಕೃಷ್ಣಾನಂದ ಕೆ, ವಸಂತ್ ಅಡಿಗುಂಡಿ, ದುಂಡಪ್ಪ ಅಮರಿ, ಎಲ್.ಜಿ.ಭಟ್, ಕೇಶವ ಸುಧೀಶ್ ನಾಯ್ಕ, ಸುನೀಲ್ ಕುಮಾರ್, ಪೋಲೀಸ್, ಕಂದಾಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು .
Be the first to comment