ಜಿಲ್ಲಾ ಸುದ್ದಿಗಳು
ಭಟ್ಕಳ
ರಕ್ತದಾನ ಪವಿತ್ರ ದಾನವಾಗಿದ್ದು ಈ ಪವಿತ್ರ ಕಾರ್ಯದಲ್ಲಿ ಯುವಕ ಯುವತಿಯರು ತಮ್ಮನ್ನು ತಾವು ತೊಡಗಿಸಿಕೊಂಡು ಪರೋಕ್ಷವಾಗಿ ಜೀವರಕ್ಷಣೆಯ ಪುಣ್ಯ ಕಾರ್ಯ ಮಾಡಬೇಕೆಂದು ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ಕಾಜಿಯಾ ಮೊಹಮ್ಮದ್ ಮುಜಮ್ಮೀಲ್ ಕರೆನೀಡಿದರು.ಅವರು ಭಟ್ಕಳ: ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನ ಘಟಕ ಮತ್ತು ರೆಡ್ ರಿಬ್ಬನ್ ಘಟಕಗಳು ಜಂಟಿಯಾಗಿ ಹಮ್ಮಿಕೊಂಡ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಸರ್ಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿಯಾದ ಡಾ|| ಸವಿತಾ ಕಾಮತ ಶಾಲಾ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದು ಶ್ಲಾಘನೀಯ ಕಾರ್ಯ ಎಂದರು. ಬೇರೆ ಯಾವುದನ್ನಾದರೂ ನಾವು ಕೃತಕವಾಗಿ ಸೃಷ್ಟಿಸಬಹುದು, ಆದರೆ ರಕ್ತವನ್ನು ಹಾಗೆ ಸೃಷ್ಟಿಸಲು ಸಾಧ್ಯವಿಲ್ಲ. ಆ ಕಾರಣಕ್ಕಾಗಿ ರಕ್ತದ ಕೊರತೆ ನಮ್ಮನ್ನು ಕಾಡುತ್ತಲಿದೆ. ಇಂತಹ ಶಿಬಿರಗಳ ಮೂಲಕ ಆ ಕೊರತೆಯನ್ನು ನೀಗಬಹುದೆಂದು ಡಾ|| ಸವಿತಾ ಹೇಳಿದರು.ಇನ್ನೊಬ್ಬ ಅತಿಥಿಯಾದ ಉಡುಪಿಯ ಬ್ಲಡ್ ಬ್ಯಾಂಕಿನ ಅಧಿಕಾರಿಯೂ ಆದ ಡಾ|| ವೀಣಾ ಕುಮಾರಿ ರಕ್ತದಾನದ ಮಹತ್ವವನ್ನು ಹೇಳುವುದರ ಜೊತೆಗೆ ಯಾರು ಯಾರು ರಕ್ತದಾನಗೈಯಲು ಅರ್ಹರು ಮತ್ತು ಯಾರು ಯಾರು ಯಾವ ಯಾವ ಕಾರಣಗಳಿಗಾಗಿ ರಕ್ತದಾನ ಮಾಡಬಾರದೆಂಬುದನ್ನು ವಿವರಿಸಿದರು. ರಕ್ತವೆಂದರೆ ರಕ್ತ ಮಾತ್ರ, ಅದಕ್ಕೆ ಯಾವುದೇ ಜಾತಿ ಮತ ಧರ್ಮದ ಹಂಗಿಲ್ಲ ಎನ್ನುವುದರ ಮೂಲಕ ಮನುಷ್ಯರೆಲ್ಲ ಒಂದೇ ಎಂಬ ಸಂದೇಶವನ್ನು ಸೂಚ್ಯವಾಗಿ ನೀಡಿದರು.
ಪ್ರಸ್ತುತ ರಕ್ತದಾನ ಶಿಬಿರದಲ್ಲಿ ಕಾಲೇಜಿನ ಬಹಳಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಸಿಬ್ಬಂಧಿಗಳು ಸ್ವಯಂಪ್ರೇರಿತರಾಗಿ ರಕ್ತದಾನಗೈದರು. ಹೊರಗಿನವರೂ ಕೆಲವರು ಆಗಮಿಸಿ ಸ್ವ-ಇಚ್ಛೆಯಿಂದ ರಕ್ತದಾನ ನೀಡಿದ್ದು ವಿಶೇಷವಾಗಿತ್ತು. ಡಾ|| ವೀಣಾ ಕುಮಾರಿಯವರ ನೇತೃತ್ವದಲ್ಲಿ ಆಗಮಿಸಿದ ಉಡುಪಿಯ ರಕ್ತನಿಧಿ ಕೇಂದ್ರದ ಸಿಬ್ಬಂಧಿಗಳು ಅತ್ಯಂತ ಕಾಳಜಿಯಿಂದ ಅಚ್ಚುಕಟ್ಟಾಗಿ ರಕ್ತವನ್ನು ಸಂಗ್ರಹಿಸುವ ಕೆಲಸವನ್ನು ಮಾಡಿದರು. ಕಾಲೇಜಿನ ಎನ್ನೆಸ್ಸೆಸ್ ಘಟಕ, ರೆಡ್‌ರಿಬ್ಬನ್ ಘಟಕ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ಸ್ವಯಂ ಸೇವಕರು ಈ ಕಾರ್ಯದಲ್ಲಿ ನೆರವು ನೀಡಿದರು.ಸಭಾ ಕಾರ್ಯಕ್ರಮದ ಮೊದಲಿಗೆ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಮುಸ್ತಾಕ್ ಕೆ. ಶೇಖ ಸರ್ವರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಪ್ರೊ. ಗಾನಿಮ್ ಮತ್ತು ಪ್ರೊ. ಸಾಜೀರ್ ಹುಸೇನ್ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಿರ್ವಹಿಸಿದರು.
Be the first to comment