ರಾಜ್ಯ ಸುದ್ದಿಗಳು
ದೇವನಹಳ್ಳಿ
ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್.ರವಿ ಪರವಾಗಿ ಹೆಚ್ಚು ಮತಗಳನ್ನು ಎಸ್.ರವಿ ಅವರ ಪರವಾಗಿ ಚುನಾಯಿತ ಸದಸ್ಯರುಗಳು ಬೆಂಬಲ ಸೂಚಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ವೆಂಕಟಸ್ವಾಮಿ ತಿಳಿಸಿದರು. ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾಪಂ ಆವರಣದಲ್ಲಿ ಚುನಾಯಿತ ಸದಸ್ಯರುಗಳು ಮತಹಾಕಿ ಹೊರಬಂದಾಗ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಾದ್ಯಂತ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೆಚ್ಚು ಇದ್ದಾರೆ. ಪಕ್ಷೇತರ ಸದಸ್ಯರು ಸಹ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷದ ಪರವಾಗಿರುವ ಅಭ್ಯರ್ಥಿ ಎಸ್.ರವಿ ಹೆಚ್ಚು ಬಹುಮತಗಳನ್ನು ಪಡೆಯುವುದರ ಮೂಲಕ ಜಯಶೀಲರಾಗುತ್ತಾರೆ ಎಂದು ಹೇಳಿದರು. ಈ ವೇಳೆಯಲ್ಲಿ ಜಿಪಂ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್, ಕನ್ನಮಂಗಲ ಗ್ರಾಪಂ ಅಧ್ಯಕ್ಷ ಕೆ.ಆರ್.ನಾಗೇಶ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ನಿವಿತಮಂಜುನಾಥ್, ಸದಸ್ಯರಾದ ಲಕ್ಷ್ಮೀಕಾಂತ್, ನರಸಿಂಹಮೂರ್ತಿ, ಮಂಜುನಾಥ್.ಎನ್, ಕೃಷ್ಣಯ್ಯ, ಅಂಬರೀಶ್, ಎಸ್.ಜಿ.ಮಂಜುನಾಥ್, ಸೋಮಶೇಖರ್, ರಶ್ಮೀ, ಪವಿತ್ರ, ಗೌರಮ್ಮ, ಎಸ್.ಜಿ.ವೆಂಕಟಸ್ವಾಮಿ, ವನಜಾಕ್ಷಮ್ಮ, ನೇತ್ರಾವತಿ, ಮೇಘನಾ, ನಂದಿನಿ ತ್ಯಾಗರಾಜ್, ಶಾಲಿನಿ, ಇದ್ದರು.
Be the first to comment