ಭಟ್ಕಳದಲ್ಲಿ ನೂತನವಾಗಿ ಬುಡೋಕಕಾನ ಕರಾಟೆ ಶಿಕ್ಶಣ ಘಟಕ ಉದ್ಘಾಟನೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಭಟ್ಕಳ್

ಭಟ್ಕಳ ತಾಲೂಕಿನಲ್ಲಿ ಆತ್ಮರಕ್ಷಣೆಯ ಕಲೆಯಾದ ಕರಾಟೆ ಶಿಕ್ಷಣವನ್ನು ಭೋದಿಸುವ ಪ್ರಸಿದ್ದ ಸಂಸ್ಥೆಯಾದ ಬುಡೋಕಾನ್ ಕರಾಟೆ ಶಿಕ್ಷಣ ಸಂಸ್ಥೆಯ ಭಟ್ಕಳ ಘಟಕವನ್ನು ಉದ್ಯಮಿ ಈಶ್ವರ ನಾಯ್ಕ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಕರಾಟೆಯಿಂದ ಕೇವಲ ಆತ್ಮರಕ್ಷಣೆಯಷ್ಟೆ ಅಲ್ಲ ಇದರಿಂದ ಮಾನಸಿಕ ಸ್ಥರ‍್ಯವೂ ಹೆಚ್ಚುತ್ತದೆ. ಶರೀರವೂ ಸದೃಢವಾಗುತ್ತದೆ. ಕರಾಟೆ ಕಲಿತರೆ ತಾವು ಮಾತ್ರವಲ್ಲದೇ ಅಪಾಯದಲ್ಲಿರುವ ಇತರರನ್ನೂ ರಕ್ಷಿಸಲು ಸಾಧ್ಯವಾಗುತ್ತದೆ, ಕರಾಟೆ ನಮ್ಮ ಮನೊದೈರ್ಯವನ್ನು ಹೆಚ್ಚಿಸುತ್ತದೆ

CHETAN KENDULI

ಆರೋಗ್ಯವಂತರನ್ನಾಗಿಸುತ್ತದೆ ಆತ್ಮರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದರು,ಈ ಸಂದರ್ಬದಲ್ಲಿ ಇತ್ತೀಚೆಗೆ ನಿಧನ ಹೊಂದಿದ ರಾಜ್ಯ ಕರಾಟೆ ಶಿಕ್ಷಕ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ನಿತ್ಯಾನಂದ ಕೆಮ್ಮಣ್ ಅವರ ಆತ್ಮಕ್ಕೆ ಶಾಂತಿಸಿಗಲೆoದು ಮೌನಾಚರಣೆಯನ್ನು ಮಾಡಿ ಶ್ರದ್ದಾಂಜಲಿ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಬೋಡೊಕಾನ್ ಕರಾಟೆ ಶಾಲೆ ಭಟ್ಕಳ ಇದರ ಗೌರವಾಧ್ಯಕ್ಷರಾದ ಈಶ್ವರ ನಾಯ್ಕ, ರಾಜ್ಯಾಧ್ಯಕ್ಷ ಮಹ್ಮದ್ ನದೀಮ್ ಹಿರಿಯ ಶಿಕ್ಷಕ ದೇವಪ್ಪಾ ನಾಯ್ಕ ಸಂಸ್ಥೆಯ ಕಾನೂನು ಸಲಹೆಗಾರಾದ ಸುರೇಶ ನಾಯ್ಕ ಕೊಣೆಮನೆ, ಮಹಾಪೋಷಕರಾದ ವಸಂತ ಮತ್ತು ಭವಾನಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಹ್ಮದ್ ನದೀಮ್ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಬೆಳ್ಮಣ್ ರಾಜ್ಯ ಸಂಘದ ಖಜಾಂಚಿ ರವಿ ಸಾಲಿಯಾನ್ , ರಾಜ್ಯದ ಉಪಾಧ್ಯಕ್ಷ ವಿಶಾಲ್ ನಾಯ್ಕ ಉ.ಕ ಕರಾಟೆ ಮತ್ತು ಸ್ಪೋಟ್ಸನ ಜಿಲ್ಲಾಧ್ಯಕ್ಷ ದಯಾ ನಾಯ್ಕ ಪ್ರವಿಣ್ ಕಣ್ಣನ್ , ನಾಗಪ್ಪ ನಾಯ್ಕ, ವೆಂಕಟೇಶ ಮೊಗೇರ್, ಅಶೋಕ ನಾಯ್ಕ, ನಾರಾಯಣ ನಾಯ್ಕ, ಪ್ರಭಾಕರ್ ಗೌಡ, ಹೆಮಂತ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿದರು.

Be the first to comment

Leave a Reply

Your email address will not be published.


*