ಜಿಲ್ಲಾ ಸುದ್ದಿಗಳು
ಮಸ್ಕಿ
ಕೆರೆ ಒತ್ತುವರಿ ಮತ್ತು ಕೆರೆಯಲ್ಲಿ ಜರುಗುವ ಅನೈತಿಕ ಚಟುವಟಿಕೆಗಳ ಕುರಿತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯೂ ಮನವಿ ಪತ್ರವನ್ನು ಸಲ್ಲಿಸಿತು.ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮೆದಿಕಿನಾಳ ಗ್ರಾಮದ ಕೆರೆಯು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಈ ಕೆರೆಯಲ್ಲಿ ಪ್ರತಿ ವರ್ಷವೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕೆಲಸಗಳು ನಡೆಯುತ್ತಿವೆ. ಕೆರೆಯಲ್ಲಿ ಹೂಳೆತ್ತಿ ಪಕ್ಕದಲ್ಲೇ ಹಾಕುತ್ತಾರೆ. ಸಂಭಂದಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ರೀತಿಯ ಕ್ರಮ ಜರುಗಿಸಿರುವುದಿಲ್ಲ. ಹಾಗೇಯೇ ಕೆರೆಯ ಸುತ್ತಮುತ್ತಲಿನ ರೈತರು ಕೆರೆಯನ್ನು ಸಾಕಷ್ಟು ಒತ್ತುವರಿ ಮಾಡಿರುತ್ತಾರೆ ಆದ್ದರಿಂದ ಕೆರೆಯ ವ್ಯಾಪ್ತಿಯನ್ನು ಅಳತೆ ಮಾಡಿ ಅದ್ದುಬಸ್ತು ಮಾಡಿ. ಮಳೆಗಾಲದಲ್ಲಿ ಸಂಗ್ರಹವಾದ ನೀರು ಬತ್ತಿಹೋಗುತ್ತಿದ್ದು ಇದರಿಂದ ದನಕರು ಪ್ರಾಣಿ- ಪಕ್ಷಿಗಳಿಗೆ ನೀರಿನ ಅಭವಾವಾಗಿದೆ. ಕೆರೆಯ ಗೇಟನ್ನು ಸರಿಪಡಿಸಬೇಕು.ಕೆರೆಯಲ್ಲಿ ಬೆಳೆದ ಜಂಗಲ್ (ಬೇಲಿ)ಯನ್ನೂ ಕಟಾವು ಮಾಡಬೇಕು.ಕೆರೆಗೆ ಸ್ಥಳೀಯರನ್ನೇ ಕಾವಲುಗಾರರನ್ನಾಗಿ ನೇಮಕ ಮಾಡಬೇಕೆಂದು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸಣ್ಣ ನೀರಾವರಿ ಇಲಾಖೆ ಕುಷ್ಟಗಿ ಎಇಇ ಆದಂತಹ ರಘುನಾಥ್ ರವರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣವು ಮನವಿ ಪತ್ರ ನೀಡುವ ಮೂಲಕ ಒತ್ತಾಯಿಸಿದ್ದಾರೆ.ಇದೇ ಸಂದರ್ಭದಲ್ಲಿ.ಸಿದ್ದು ಮೇಟಿ ಕರವೇ ಗ್ರಾಮ ಘಟಕ ಅಧ್ಯಕ್ಷರು ಅಂತಾ ಸೇರಿಸಿ ಸರ್…ದೊಡ್ದ ಬಸವ ಆದೋನಿ,ಬಸವ ಹೂಗಾರ,ಬಸವಲಿಂಗ ಪರಡ್ಡಿ, ಮಲ್ಲಯ್ಯ ಹಡಪದ ಸೇರಿದಂತೆ ಕರವೇ ಶಿವರಾಮೇಗೌಡ ಬಣದ ಸದಸ್ಯರು ಇದ್ದರು.
Be the first to comment