ಈಜು ಕಲಿಯಲು ಹೋಗಿ ಆಕಸ್ಮಿಕವಾಗಿ ಪಿ.ಯು.ಸಿ. ವಿದ್ಯಾರ್ಥಿ ಸಾವು… !

ವರದಿ: ಸುಚಿತ್ರಾ ನಾಯ್ಕ, ಹೊನ್ನಾವರ

ಜಿಲ್ಲಾ ಸುದ್ದಿಗಳು

ಶಿರಸಿ:

CHETAN KENDULI

ತಾಲೂಕಿನ ಕೆಂಗ್ರೆ ಹೊಳೆಯಲ್ಲಿ ಸ್ನೇಹಿತರೊಂದಿಗೆ ಈಜು ಕಲಿಯಲು ಹೋಗಿ ಆಕಸ್ಮಿಕವಾಗಿ ನೀರಿನ ಸುಳಿಗೆ ಸಿಲುಕಿ ಪಿ.ಯು.ಸಿ. ವಿದ್ಯಾರ್ಥಿಯೋರ್ವ ಸಾವು ಕಂಡ ಘಟನೆ ತಾಲೂಕಿನ ಕೆಂಗ್ರೆ ಹೊಳೆಯಲ್ಲಿ ಗುರುವಾರ ಸಂಜೆ ನಡೆದಿದೆ.

ಲಖನ್ ಗಜಾನನ ಶಿಂಧೆ (೧೬) ಎಂಬ ವಿದ್ಯಾರ್ಥಿಯೇ ಸಾವು ಕಂಡ ದುರ್ದೈವಿಯಾಗಿದ್ದಾನೆ. ಈತ ಗುರುವಾರ ಮಧ್ಯಾಹ್ನ ತಾಲೂಕಿನ ಕೆಂಗ್ರೆ ಹೊಳೆಯಲ್ಲಿ ಸ್ನೇಹಿತರೊಂದಿಗೆ ಈಜು ಕಲಿಯಲು ಹೋಗಿ ಆಕಸ್ಮಿಕವಾಗಿ ನೀರಿನ ಸುಳಿಗೆ ಸಿಲುಕಿದ್ದ. ಹೊರಬರಲಾಗದೆ ಆತ ನೀರಿನಲ್ಲಿಯೇ ಸಾವು ಕಂಡಿದ್ದ. ಆತನ ಶವವನ್ನು ಹೊರ ತೆಗೆಯಲು ಸಾಧ್ಯವಾಗದೇ ಇದ್ದಾಗ ಅಲ್ಲಿದ್ದ ಸ್ನೇಹಿತರು ಪೊಲೀಸರಿಗೆ ದೂರವಾಣಿ ಮೂಲಕ ತಿಳಿಸಿದ್ದರು.

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಅಗ್ನಿಶಾಮಕ ದಳ ಹಾಗು ಸ್ಥಳೀಯ ನುರಿತ ಈಜುಗಾರರ ಸಹಾಯದೊಂದಿಗೆ ಶವವನ್ನು ಸಂಜೆ ಸುಮಾರು ೭ ಗಂಟೆಯ ವೇಳೆಗೆ ಹೊರ ತೆಗೆದಿದ್ದಾರೆ. ವಿದ್ಯಾರ್ಥಿಯು ಶಿರಸಿ ಮಾರಿಕಾಂಬಾ ಕಾಲೇಜಿನಲ್ಲಿ ಪಿ.ಯು.ಸಿ. ಓದುತ್ತಿದ್ದಾನೆ ಎಂದು ತಿಳಿದಿದೆ.

ಸ್ಥಳಕ್ಕೆ ಡಿ.ವಾಯ್.ಎಸ್.ಪಿ. ರವಿ ಡಿ. ನಾಯ್ಕ, ಸಿ.ಪಿ.ಐ. ರಾಮಚಂದ್ರ ನಾಯಕ, ಪಿ.ಎಸ್.ಐ. ಈರಯ್ಯ ಆಗಮಿಸಿ ಸ್ಥಳ ಪರಿಶೀಲಿಸಿದ್ದು, ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Be the first to comment

Leave a Reply

Your email address will not be published.


*