ಜಿಲ್ಲಾ ಸುದ್ದಿಗಳು
ಕುಮಟಾ:
ಬಯೋ ಡಿಸೇಲ್ ಹೆಸರಿನಲ್ಲಿ ಕಲಬೆರಕೆ ಡಿಸೇಲ್ ಜಿಲ್ಲೆಗೆ ಪೂರೈಕೆಯಾಗುತ್ತಿರುವ ಆರೋಪದ ಮೇರೆಗೆ ಜಿ.ಎಸ್.ಟಿ ಅಧಿಕಾರಿಗಳು ಕುಮಟಾಕ್ಕೆ ಆಗಮಿಸಿದ ಬಯೋ ಡಿಸೇಲ್ ಟ್ಯಾಂಕರ್‌ನ್ನು ತಡೆದು ಪರಿಶೀಲಿಸಿದ ಘಟನೆ ನಡೆದಿದೆ.
ಇತ್ತೀಚೆಗೆ ಉತ್ತರಕನ್ನಡ ಜಿಲ್ಲೆಗೆ ಪೂರೈಕೆಯಾಗುವ ಬಯೋ ಡಿಸೇಲ್ ಕಲಬೆರಕೆ ಆಗುತ್ತಿರುವ ಆರೋಪ ದಟ್ಟವಾಗಿ ಕೇಳಿಬರುತ್ತಿದೆ. ಈ ಬಗ್ಗೆ ಜಾಗೃತಗೊಂಡ ಸಂಬಂಧಪಟ್ಟ ಅಧಿಕಾರಿಗಳು ಬಯೋ ಡಿಸೇಲ್ ತುಂಬಿಕೊಂಡು ಬರುವ ಟ್ಯಾಂಕರ್‌ಗಳ ಪರಿಶೀಲನೆ ಮಾಡುತ್ತಿರುವುದು ಕಂಡುಬಂದಿದೆ.
ಕುಮಟಾದ ಅಳ್ವೇಕೋಡಿ ಸಮೀಪ ಬಯೋ ಡಿಸೇಲ್ ಸಾಗಿಸುತ್ತಿದ್ದ ಟ್ಯಾಂಕರ್‌ನ್ನು ತಡೆದ, ಜಿಎಸ್‌ಟಿ ಅಧಿಕಾರಿಗಳು ತೈಲ ಖರೀದಿಯ ಟ್ಯಾಕ್ಸ್ ಇನ್‌ವೈಸ್ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಟ್ಯಾಂಕರ್‌ನ್ನು ಪೊಲೀಸರ ವಶಕ್ಕೆ ನೀಡಿದ ಅಧಿಕಾರಿಗಳು, ಬಯೋ ಡಿಸೇಲ್‌ನ ಗುಣಮಟ್ಟ ಪರಿಶೀಲಿಸುವ ಕಾರ್ಯ ನಡೆದಿದೆ.
ಕುಮಟಾ ಪೊಲೀಸ್ ಠಾಣೆಗೆ ತಂದಿಡಲಾದ ವಾಹನದಲ್ಲಿದ್ದ ಡಿಸೇಲ್ ಅನ್ನು ವಾಣಿಜ್ಯ ತೆರಿಗೆ ಇಲಾಖೆ, ಆಹಾರ ಇಲಾಖೆ, ಮತ್ತು ಒ.ಎನ್.ಸಿ ಕೋ ಆರ್ಡಿನೇಟರ್ ನೇತೃತ್ವದಲ್ಲಿ ತಪಾಣೆಗೆಂದು ಲ್ಯಾಬ್‌ಗೆ ಕಳುಹಿಸಲಾಗಿದೆ. ಇನ್ನು ಹೊನ್ನಾವರ ತಾಲೂಕಿನ ಕೆಲವೆಡೆ ತಪಾಸಣೆ ನಡೆಸಲಾಗಿದೆ. ಹೊನ್ನಾವರ ತಾಲೂಕಿನ ಬಂಕ್‌ನಿಂದ ಕೂಡಾ ಡಿಸೇಲ್‌ನ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ.
Be the first to comment