ರಾಜ್ಯ ಸುದ್ದಿಗಳು
ಅಂಬಿಗ್ ನ್ಯೂಸ್ ವಿಶೇಷ ವರದಿ:
ರೋಡಲಬಂಡಾ ಕ್ಯಾಂಪ್(ಯಾದಗಿರಿ):
ಮೇಲಾಧಿಕಾರಿಗಳೆ ಎಲ್ಲಿದ್ದಿರಾ…?
ರೋಡಲಬಂಡಾ ಸಸ್ಯ ಪಾಲನಾ ಕೇಂದ್ರದಲ್ಲಿ ಬುಧವಾರ ಬಿಜೆಪಿ ಮುಖಂಡರಿಂದ ತಾಪಂ ಹಾಗೂ ಜಿಪಂ ಚುನಾವಣಾ ಪೂರ್ವಭಾವಿ ಸಭೆಯನ್ನು ಆಯೋಜಿಸಿರುವ ಬಗ್ಗೆ ರೋಡಲಬಂಡಾ ಕ್ಯಾಂಪಿನ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡು ಅನಧಿಕೃತವಾಗಿ ನಡೆಸಿದ ಪೂರ್ವಭಾವಿ ಸಭೆಯ ಮುಖ್ಯಸ್ಥರ ವಿರುದ್ಧ ಹಾಗೂ ಸಭೆಯನ್ನು ನಡೆಸಲು ಬಿಟ್ಟ ಸ್ಥಳೀಯ ಅಧಿಕಾರಿಗಳ ವಿರುದ್ಧ ಕಾನೂನು ರೀತಿಯಾಗಿ ಕ್ರಮ ಕೈಗೊಳ್ಳಬೇಕಾಗಿರುವುದು ಜಿಲ್ಲೆಯ ಮೇಲಾಧಿಕಾರಿಗಳ ಕರ್ತವ್ಯವಾಗಿ.
ಮುಂಬರುವ ಜಿಲ್ಲಾ ಪಂಚಾಯತ ಹಾಗೂ ತಾಲೂಕ ಪಂಚಾಯತ ಚುನಾವಣಯಲ್ಲಿ ಕಸರತ್ತು ಮಾಡಲೇ ಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ಆನೆಹೊಸೂರ ಮಹಾಶಕ್ತಿ ಕೇಂದ್ರದಿಂದ ಲಿಂಗಸೂರು ಬಿಜೆಪಿ ಮಂಡಲದ ಪದಾಧಿಕಾರಿಗಳು ಅನಧಿಕೃತವಾಗಿ ಚುನಾವಣೆಯ ಪೂರ್ವಭಾವಿ ಸಭೆಯನ್ನು ಆಯೋಜಿಸಿ ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ.
೧)https://m.facebook.com/story.php?story_fbid=4918444704867972&id=100023711673775
https://m.facebook.com/story.php?story_fbid=4918444704867972&id=100023711673775
೨)https://m.facebook.com/story.php?story_fbid=846041436053372&id=100023711673775
https://m.facebook.com/story.php?story_fbid=846041436053372&id=100023711673775
ಕಾರ್ಯಕ್ರಮ ನೇರ ದೃಶ್ಯಾವಳಿಗಳು
ಇನ್ನೂ ಬಿಜೆಪಿ ಪಕ್ಷದ ಮುಖಂಡರು ನಾರಾಯಣಪೂರ ಜಲಾಶಯದ ಮುಂಭಾಗದ ರೋಡಲಬಂಡಾ ಕ್ಯಾಂಪ ಸಸ್ಯ ಪಾಲನಾ ಕೇಂದ್ರದಲ್ಲಿ ತಾಪಂ ಹಾಗು ಜಿಪಂ ಚುನಾವಣೆಯ ಪೂರ್ವಭಾವಿ ಸಭೆ ನಡೆಸಿದ್ದರೂ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇನ್ನೂ ಇದರ ಬಗ್ಗೆ ಕೆಲ ಸ್ಥಳೀಯ ಜನರು ಸಸ್ಯ ಪಾಲನಾ ಕೇಂದ್ರದಲ್ಲಿ ಯಾವುದೇ ರೀತಿಯ ಸಭೆ ಸಮಾರಂಭಗಳಿಗೂ ಅವಕಾಶವನ್ನು ನೀಡುತ್ತಿರಲಿಲ್ಲಾ. ಆದರೆ ಬಿಜೆಪಿ ಪಕ್ಷದವರಿಗೆ ಮಾತ್ರ ಚುನಾವಣೆಯ ಪೂರ್ವಭಾವಿ ಸಭೆ ನಡೆಸಲು ಬಿಟ್ಟಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಬಿಟ್ಟು ರಾಜಕೀಯ ಜನರೊಂದಿಗೆ ಶಾಮಿಲಾಗಿ ಇಂತಹ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಅನಧಿಕೃತ ಸ್ಥಳದಲ್ಲಿ ಅನಧಿಕೃತ ಸಮಾರಂಭ:
ಲಿಂಗಸೂರು ಮಂಡಲದ ಬಿಜೆಪಿ ಕಾರ್ಯಕರ್ತರಿಂದ ಆಯೋಜನೆ ಮಾಡಲಾದ ಚುನಾವಣೆಯ ಪೂರ್ವಭಾವಿ ಸಭೆಯನ್ನು ಅನಧಿಕೃತ ಸ್ಥಳದಲ್ಲಿ ಮಾಡಲಾಗಿದೆ. ಸಸ್ಯಪಾಲನಾ ಕೇಂದ್ರದಲ್ಲಿ ಇಂತಹ ಸಭೆ ಸಮಾರಂಬಗಳಿಗೆ ಅನುಮತಿ ನೀಡಿದ್ದು ಯಾರು…? ಅಲ್ಲದೇ ಬಿಜೆಪಿ ಪಕ್ಷದ ಮುಖಂಡರು ಸಭೆಯ ನಡೆಸುವುದನ್ನು ಮೊದಲೇ ಅಧಿಕಾರಿಗಳ ಗಮನಕ್ಕೆ ತರಲಾಗಿದೆಯೇ…? ಒಂದು ವೇಳೆ ಅಧಿಕಾರಿಗಳಿಗೆ ಬಿಜೆಪಿ ಪಕ್ಷದ ಮುಖಂಡರು ಸಭೆಯ ಬಗ್ಗೆ ತಿಳಿಸಿದ್ದರೂ ಅವರಿಗೆ ಸಸ್ಯಪಾಲನಾ ಕೇಂದ್ರದಲ್ಲಿ ಚುನಾವಣಾ ಪೂರ್ವಭಾವಿ ಸಭೆಯನ್ನು ನಡೆಸಲು ಅರಣ್ಯ ಅಧಿಕಾರಿಗಳು ಯಾವ ಆಧಾರದ ಮೇಲೆ ಅಥವಾ ಯಾರ ಸೂಚನೆ ಮರೆಗೆ ಚುನಾವಣೆಯ ಪೂರ್ವಭಾವಿ ಸಭೆಗೆ ಅನುಮತಿ ನೀಡಿದರು ಎನ್ನುವುದರ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ.
ಸಭೆಯ ನಂತರ ಭಾಣೂಟ:
ಬುಧವಾರ ನಡೆಸಿದ ತಾಪಂ ಹಾಗೂ ಜಿಪಂ ಚುನಾವಣೆಯ ಪೂರ್ವಭಾವಿ ಸಭೆಯ ನಂತರ ಸಭೆಗೆ ಆಗಮಿಸಿದ್ದ ಸರ್ವರಿಗೂ ಬಾಣೂಟವನ್ನು ಮಾಡಿಸಿದ್ದ ಬಿಜೆಪಿ ಮುಖಂಡರು ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಕಸರತ್ತು ನಡೆಸಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ. ಚುನಾವಣೆ ಪ್ರಜೆಗಳ ಮತದಾನದಿಂದ ಹೊರಬರುವ ಫಲಿತಾಂಶವಾಗಿದೆ. ಆದರೆ ಇದಕ್ಕಾಗಿ ಪೂರ್ವಭಾವಿ ಸಭೆ ನಡೆಸಿ ಸಭೆಯಲ್ಲಿ ಭಾಣೂಟ ಮಾಡಿಸುತ್ತಿರುವ ಬಿಜೆಪಿ ಮುಖಂಡರಿಗೆ ಯಾವಬ್ಬ ಅಧಿಕಾರಿಗಳೂ ಕ್ರಮಕ್ಕೆ ಮುಂದಾಗದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೆ ಹಾಳಾಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Be the first to comment