ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಭಟ್ಕಳದಲ್ಲಿ ಸರಳವಾಗಿ ನಡೆದ ಮಾರಿ ಜಾತ್ರೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಭಟ್ಕಳ

ಮಂಗಳವಾರದಂದು ರಾತ್ರಿ ಮಾರಿ ದೇವಿ ಮೂರ್ತಿಯ ತಯಾರಕ ವಿಶ್ವಕರ್ಮ ಸಮಾಜದವರಿಂದ ವಿಶೇಷ ಪೂಜೆಯ ಬಳಿಕ ನಂತರ ಮಾರಿ ದೇವಿಯ ಮೂರ್ತಿಯನ್ನು ಮುಂಜಾನೆ ಮೆರವಣಿಗೆಯ ಮೂಲಕ ಕರೆದೊಯ್ಯಲಾಗಿದ್ದು ಕೊರೋನಾ ಕರಿನೆರಳ ನಡುವೆ ನಿಗದಿತ ಸಂಖ್ಯೆಯ ಭಕ್ತರು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳ ಸಹಕಾರದಿಂದ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.ಜಿಲ್ಲೆಯಲ್ಲಿಯೇ ಅತ್ಯಂತ ವಿಜೃಂಬಣೆಯಿಂದ ಅದ್ದೂರಿಯಾಗಿ ನಡೆಯುವ ಮಾರಿ ಜಾತ್ರೆಗಳಲ್ಲಿ ಭಟ್ಕಳ ತಾಲೂಕಿನ ಮಾರಿ ಜಾತ್ರೆಯು ಸಹ ಒಂದು. ಸುಮಾರು ೨೫ ವರ್ಷಗಳ ಹಿಂದೆ ಮಾರಿಜಾತ್ರೆ ಸಂಪೂರ್ಣವಾಗಿ ಗ್ರಾಮದೇವತೆಯ ಉತ್ಸವವಾಗಿದ್ದು, ಹಿಂದುಳಿದವರ ಹಾಗೂ ಪರಿಶಿಷ್ಠ ಜಾತಿ ಪಂಗಡದವರ ಮುಂದಾಳತ್ವದಲ್ಲಿ ನಡೆಯುತಿದ್ದ ವಿಶಿಷ್ಠ ಜಾತ್ರೆಯಾಗಿತ್ತು.

CHETAN KENDULI

ಬುಧವಾರದಂದು ಮುಂಜಾನೆ ಕರೆತರಲಾದ ಮಾರಿದೇವಿಯ ಮೂರ್ತಿಯನ್ನು ಮಾರಿಕಾಂಬಾ ದೇವಿಯ ಎದುರಿನ ಪ್ರಾಂಗಣದ ಗರ್ಭಗುಡಿಯ ಹೊರಗಡೆ ಮಾರಿದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು., ಕೊರೋನಾ ಮುಂಜಾಗ್ರತಾ ಕ್ರಮಗಳೊಂದಿಗೆ ಸಂಪ್ರದಾಯದಂತೆ ಸರಳವಾಗಿ ಮೊದಲ ದಿನದ ಜಾತ್ರೋತ್ಸವ ನಡೆಸಲಾಯಿತು.ಕೊರೋನಾ ಹಿನ್ನೆಲೆ ೨ ದಿನಗಳ ಕಾಲ ನಡೆಯುವ ಮಾರಿ ಹಬ್ಬವನ್ನು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಸರಳವಾಗಿ ಆಚರಿಸಲಾಗುತ್ತಿದ್ದು. ಭಕ್ತರು ಶ್ರೀ ದೇವಿಯ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.

ಎರಡು ದಿವಸ ನಡೆಯುವ ಈ ಜಾತ್ರೆಯಲ್ಲಿ ಬುಧವಾರ ಮೊದಲನೇ ದಿವಸ ಪರ ಊರಿನವರು ಮನೆಯಲ್ಲಿ ಹಬ್ಬ ಆಚರಿಸುತ್ತಾರೆ. ಎರಡನೇ ದಿನವಾದ ಗುರುವಾರದಂದು ಸ್ಥಳೀಯರು ಹಬ್ಬ ಆಚರಿಸುತ್ತಾರೆ. ಈ ಹಬ್ಬದ ಹೆಸರಿನಲ್ಲಿ ಭಕ್ತರು ಕೋಳಿಯನ್ನು ತಮ್ಮ ಮನೆಯಲ್ಲಿಯೇ ಕತ್ತರಿಸಿ ದೇವಿಗೆ ರಕ್ತ ಸಮರ್ಪಿಸುವ ಆಚರಣೆಯೂ ಉಂಟು.ಮಾರಿರೂಪದಲ್ಲಿ ಕುಳಿತಿರುವ ಈ ದೇವಿಗೆ ಭಕ್ತರು ಊರಿಗೆ ಬರಬಹುದಾದ ಕಣ್ಣು ಬೇನೆ, ಸಿಡುಬು ಹಾಗು ಇನ್ನಿತರ ಸಾಂಕ್ರಾಮಿಕ ರೋಗಗಳನ್ನು ಬಾರದೇ ತಡೆಗಟ್ಟುವಂತೆ ಭಕ್ತಿಯಿಂದ ಹೂವಿನ ಟೋಪಿ, ಎಲೆಯಿಂದ ಮಾಡಿದ ಹೂ ಕಟ್ಟು, ಬೆಳ್ಳಿಯ ಕಣ್ಣುಗಳನ್ನು ಅರ್ಪಿಸಿ ಕಾಪಾಡುವಂತೆ ಮೊರೆ ಇಡುವುದು ಈ ಜಾತ್ರೆಯ ವಿಶೇಷತೆಗಳಲ್ಲಿ ಒಂದಾಗಿದ್ದು, ಜಾತ್ರೆಯಲ್ಲಿ ಬೆಳ್ಳಿ ಕಣ್ಣು, ಹೂವಿನ ಟೋಪಿ ಮುಂತಾದವುಗಳಿಗೆ ಭಾರೀ ಬೇಡಿಕೆ ಇದ್ದು, ಜನರು ಅದನ್ನು ಖರೀದಿಸಿ ದೇವರ ಹುಂಡಿಗೆ ಭಕ್ತಿಪೂರ್ವಕವಾಗಿ ಹಾಕಿ ತಮ್ಮ ಹರಕೆ ತೀರಿಸುತ್ತಾರೆ.


ಜಾತ್ರೆಯ ಇರಡನೇ ದಿನವಾದ ಗುರುವಾರ ಸಂಜೆ ಮಾರಿ ಮೂರ್ತಿಯನ್ನು ವಾಹನದ ಮೇಲೆ ಕೊಂಡೊಯ್ದು ಸಮುದ್ರದಲ್ಲಿ ವಿಸರ್ಜಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ. ಈ ಮಾರಿ ದೇವಿ ಊರಿಗೆ ಬರುವ ರೋಗ- ರುಜಿನಗಳಿಂದ ಗ್ರಾಮವನ್ನು ರಕ್ಷಿಸುತ್ತಾಳೆಂಬ ನಂಬಿಕೆಯಿದ್ದು, ಇದು ಜಾತ್ರಾ ಸಂಭ್ರಮಕ್ಕಿನಂತ ಸಂಪ್ರದಾಯದಂತೆ ವಿಧಿವಿಧಾನಗಳು ನಡೆಸಲೇಬೇಕೆಂಬ ವಾಡಿಕೆಯಿದ್ದ ಹಿನ್ನೆಲೆ ಜಾತ್ರಾ ಕಾರ್ಯಕ್ರಮಗಳು ಮುಂದುವರಿದಿದೆ.ಇಂದು ಸಂಜೆ ಮಾರಿ ದೇವಿಯ ಮೂರ್ತಿಯನ್ನು ಜಾಲಿ ಕರಿಕಲನ ಸಮುದ್ರದಲ್ಲಿ ವಿಸರ್ಜನೆ ಮಾಡಲಾಗುವುದು. ಈ ಜಾತ್ರೆಯಲ್ಲಿ ಕರ್ನಾಟಕ ರಣಧೀರರ ವೇಧಿಕೆ ಜಿಲ್ಲಾ ಅಧ್ಯಕ್ಷ ಈರ ನಾಯ್ಕ ಚೌತನಿ , ಜೀವೋತ್ತಮ್ ಪೈ , ವಿನಾಯಕ್ , ಬಾಬಣ್ಣ , ಆನಂದ್ ಮೊಗೇರ್ ಮುಂಡಲಿ ಮುಂತಾದವರು ಉಪಸ್ಥಿತರಿದ್ದು ಭಕ್ತಾದಿಗಳಿಗೆ ದೇವಿಯ ದರ್ಶನಕ್ಕೆ ಅನುವು ಮಾಡಿಕೊಟ್ಟರು.

Be the first to comment

Leave a Reply

Your email address will not be published.


*