ಅಶೋಕ ವೃತ್ತ ಬಳಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ಆಚರಣೆ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ದೇಶದಾದ್ಯಂತ ರೈತರ ಹೋರಾಟವನ್ನು ತೀವ್ರ ವಿರೋಧಿಸುತ್ತಿದ್ದ ಕೇಂದ್ರ. ಅದೇ ಕೇಂದ್ರ ಸರಕಾರ ರೈತರ ಮೇಲಿನ ಕಾಳಜಿಯೋ ಅಥವಾ ಸತತ ಪಕ್ಷದ ಸೋಲಿನ ಭೀತಿ ಕಾಡುತ್ತಿದ್ದಂತೆಯೇ ಮೂರು ಕೃಷಿ ಕಾನೂನು ಕಾಯ್ದೆ ಹಿಂದಕ್ಕೆ ಪಡೆದಿದೆ. ಮೂರು ಕೃಷಿ ಕಾನೂನು ಕಾಯ್ದೆ ಹಿಂಪಡೆದಿರುವ ಸಂಭ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತ ಪರ ಸಂಘಟನೆಯವರು ಇಂದು ಪಟ್ಟಣದ ಮುದಗಲ್ ಕ್ರಾಸ್ ಬಳಿ ಅಶೋಕ ವೃತ್ತದ ನಾಲ್ಕು ಮುಖದ ಸಿಂಹದ ಲಾಂಚನಕ್ಕೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಆಚರಿಸಿದರು. 

CHETAN KENDULI

ನಮ್ಮ ದೇಶದಲ್ಲಿ ರೈತರಿಗೆ ಅನುಕೂಲವಾಗುವಂತಹ ಕಾನೂನುಗಳನ್ನು ಜಾರಿಗೆ ತರಬೇಕೆ ಹೊರತು ರೈತರಿಗೆ ವಿರುದ್ಧವಾದ ಕಾನೂನುಗಳನ್ನು ಯಾವುದೇ ಕಾರಣಕ್ಕೂ ತರಬಾರದು ನಮ್ಮ ದೇಶದ ರೈತರು ಈ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒಂದು ವರ್ಷದವರೆಗೂ ಸತತವಾಗಿ ಚಳುವಳಿಯನ್ನು ಮಾಡುತ್ತಾ ಬಂದಿರುತ್ತಾರೆ. ಅದರ ಪ್ರತಿಯಾಗಿ ಇಂದು ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಹಸಿರು ಸೇನೆ ತಾಲೂಕಾ ಅಧ್ಯಕ್ಷ ವಿಜಯ ಬಡಿಗೇರ ಹರ್ಷ ವ್ಯಕ್ತ ಪಡಿಸಿದರು. ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನು ಕಾಯ್ದೆಗಳನ್ನು ಹಿಂತೆಗೆದುಕೊಂಡಿದ್ದರಿಂದ ರೈತರಿಗೆ ದೊಡ್ಡ ವಿಜಯವನ್ನು ತಂದಂತಾಗಿದೆ.

ಇದೇ ಸಂದರ್ಭದಲ್ಲಿ  ವಿಜಯ್ ಬಡಿಗೇರ್ ಹಸಿರು ಸೇನೆ ತಾಲೂಕಾಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ಸದಸ್ಯರೂ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*