ರಾಜ್ಯ ಸುದ್ದಿಗಳು
ಕಾರವಾರ
ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಕರಾವಳಿಯ ಸಮಾಚಾರ ವೆಬ್ ಪೋರ್ಟಲ್ ಸಂಪಾದಕ , ಪತ್ರಕರ್ತ ಅರ್ಜುನ ಮಲ್ಯ ಮೇಲೆ ಮುಸುಕುದಾರಿಗಳ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯನ್ನು ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯ ಉಪಾಧ್ಯಕ್ಸ ಡಾ.ಎಸ್.ಎಸ್ ಪಾಟೀಲ್ ಅವರು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಪತ್ರಕರ್ತ ಅರ್ಜುನ್ ಮಲ್ಯ ಮೇಲೇ ಹಲ್ಲೆ ಮಾಡಿದ ದುಸ್ಕರ್ಮಿಗಳನ್ನು ಬಂಧಿಸಿ ಅವರ ಮೇಲೆ ಗುಂಡಾ ಖಾಯಿದೆಯನ್ನು ಹಾಕಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಹಮಂತ್ರಿ ಅರಗ ಜ್ಞಾನೇದ್ರ ಅವರನ್ನು ಆಗ್ರಹಿಸಿದ್ದಾರೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆಯಲ್ಲಿ ಗುರುವಾರ ಸಂಜೆ 7 ಗಂಟೆಗೆ ನಡೆದಿದೆ. ಕರಾವಳಿ ಸಮಾಚಾರ್ ಎಂಬ ವೆಬ್ ಪೋರ್ಟಲ್ ಸಂಪಾದಕ ಅರ್ಜುನ್ ಮಲ್ಯ ಎಂಬಾತನೇ ಹಲ್ಲೆಗೊಳಗಾದವನಾಗಿದ್ದು, ಭಟ್ಕಳದ ಪುರಸಭೆಯ ಕಟ್ಟಡದಲ್ಲಿರುವ ತನ್ನ ಕಚೇರಿ ಮುಚ್ಚಿ ಮನೆಗೆ ತೆರಳುತ್ತಿದ್ದಾಗ ಬೆಳಕೆ ಬಳಿ ಆರು ಜನರ ಮುಸುಕುದಾರಿಗಳು ರಾಡ್ ಮತ್ತು ಕಟ್ಟಿಗೆ ತುಂಡುಗಳಿಂದ ದಾಳಿ ನಡೆಸಿದ್ದು ಅರ್ಜುನ ಮಲ್ಯ ಮೇಲೆ ಮಾರಣಾಂತಿಕ ಹಲ್ಲೆ ಸ್ಥಳೀಯರು ಆಗಮಿಸುತಿದ್ದಂತೆ ಹಲ್ಲೆಕೋರರು ಓಡಿಹೋಗಿದ್ದಾರೆ.ಹಲ್ಲೆಯಿಂದ ಅರ್ಜುನ್ ಮಲ್ಯ ರವರ ಕೈ ಮುರಿದಿದ್ದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲಿಸರು ಆಗಮಿಸಿದ್ದು ದೂರು ದಾಖಲಾಗಿದೆ.
ಭಟ್ಕಳ ಗ್ರಾಮೀಣ ಠಾಣೆ ಪಿ.ಎಸ್.ಐ ಸ್ಥಳಕ್ಕೆ ಆಗಮಿಸಿ ತನಿಖೆ ಕೈ ಕೊಂಡಿದ್ದಾರೆ. ಈ ಘಟನೆಯನ್ನು ನೋಡಿದ್ದರೆ ಜಿಲ್ಲೆಯಲ್ಲಿ ಪತ್ರಕರ್ತರು ನಿರ್ಭಿತಿಯಿಂದ ವರದಿ ಮಾಡದಂತೆ , ಪತ್ರಕರ್ತರಲ್ಲಿ ಭಯ ಹುಟ್ಟಿಸಲು ಪೂರ್ವ ಯೋಚಿತ ಕಾರ್ಯದಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು , ಉತ್ತರ ಕನ್ನಡ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಭಟ್ಕಳ್ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ 6 ಹಲ್ಲೆಕೊರರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Be the first to comment