ರುದ್ರಭೂಮಿ ಮಂಜೂರು ಮಾಡುವಂತೆ: ಕೆಆರ್ ಎಸ್ ಪ್ರತಿಭಟನೆ

ವರದಿ: ಗ್ಯಾನಪ್ಪ, ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ಪಟ್ಟಣದ ಹಳೆ ಬಸ್ ನಿಲ್ದಾಣದ ಹತ್ತಿರವಿರುವ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ವೃತ್ತದ ಮುಂಭಾಗದಲ್ಲಿ ಹೂವಿನಭಾವಿ ಗ್ರಾಮದಲ್ಲಿನ ಸರ್ವೇ ನಂಬರ್ 62 ರಲ್ಲಿ 5-24 ಎ – ಗು ಜಮೀನು ಹಂಪಣ್ಣ ತಂದೆ ಆದಪ್ಪ ಇವರ ಹೆಸರಿನಲ್ಲಿ ಇರುತ್ತದೆ.

CHETAN KENDULI

ಸದರಿ ಜಮೀನಿನ ಪಕ್ಕದ ಜಮೀನು ಸರ್ವೆ ನಂಬರ್ 1 ಸರಕಾರಿ ಜಮೀನು ಇದ್ದು, ಸದರಿ ಜಮೀನಿನಲ್ಲಿ ಮುಸ್ಲಿಂ ಸಮುದಾಯದವರು ಮೂರು ತಲೆಮಾರುಗಳಿಂದ ಸರಕಾರಿ ಜಮೀನಿನಲ್ಲಿ ಅಂತ್ಯಸಂಸ್ಕಾರವನ್ನು ಮಾಡುತ್ತಾ ಬಂದಿರುತ್ತಾರೆ. ಆದರೆ ಈಗ ಪಂಪಣ್ಣ ತಂದೆ ಆದಪ್ಪ ಇವರು ಸರಕಾರಿ ಜಮೀನನ್ನು ಕಬಳಿಸಲು ಮುಂದಾಗಿದ್ದು, ಗ್ರಾಮದ ಮುಸ್ಲಿಂ ಜನಾಂಗಕ್ಕೆ ಅಂತ್ಯಸಂಸ್ಕಾರ ಮಾಡಲು ಬಿಡದೆ ಈ ಜಮೀನು ನನ್ನದು ಇದರಲ್ಲಿ ಯಾವುದೇ ಒಂದು ಶವವನ್ನು ಹೂಳಲು ಬಿಡುವುದಿಲ್ಲ ಎಂದು ಗುಂಡಾಗಿರಿ ಮಾಡುತ್ತಿರುವುದು ಖಂಡನೆ ಯಾಗಿರುತ್ತದೆ.

ಸದರಿ ವಿಷಯದಲ್ಲಿ ಮುಸ್ಲಿಂ ಸಮಾಜದಲ್ಲಿ ಯಾರಾದರೂ ಸತ್ತರೆ ಅಂತ್ಯಸಂಸ್ಕಾರ ಮಾಡಲು ಜಾಗವಿಲ್ಲದೆ ಶವವನ್ನು ಹೊತ್ತು ತಿರುಗುವ ಪರಿಸ್ಥಿತಿ ಬಂದೊದಗಿದೆ. ಕರ್ನಾಟಕ ಸರ್ಕಾರದ ಆದೇಶದಂತೆ ಪ್ರತಿ ಗ್ರಾಮಕ್ಕೆ ರುದ್ರಭೂಮಿಯನ್ನು ತಕ್ಷಣವೇ ಮಂಜೂರಾತಿ ಮಾಡಬೇಕೆನ್ನುವ ಆದೇಶವಿದ್ದರೂ ಕೂಡ ಸ್ಮಶಾನಕ್ಕೆ ಎಂದೇ ಗುರುತಿಸಲ್ಪಟ್ಟಿರುವ ಹೂವಿನಬಾವಿ ಗ್ರಾಮದ ಸರ್ವೆ ನಂಬರ್ 1 ಸರ್ಕಾರಿ ಜಮೀನನ್ನು ಗ್ರಾಮದ ಮುಸ್ಲಿಂ ಸಮಾಜಕ್ಕೆ ಮಂಜೂರು ಮಾಡಬೇಕೆಂದು ಕರ್ನಾಟಕ ರೈತ ಸಂಘದ ವತಿಯಿಂದ ಶಿರಸ್ತೇದಾರರಾದ ಅಖ್ತರ್ ಅಲಿ ಇವರಿಗೆ ಮನವಿ ಮಾಡಿದರು.

ಒಂದು ವೇಳೆ ಸರಕಾರಿ ಜಮೀನಿನಲ್ಲಿ ರುದ್ರಭೂಮಿಯನ್ನು ಮಂಜೂರು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕೆಆರ್ ಎಸ್ ಸಂಘದ ತಾಲೂಕ ಅಧ್ಯಕ್ಷ ಸಂತೋಷ ಹಿರೇದಿನ್ನಿ ಹಾಗೂ ಕೆಆರ್ ಎಸ್ ಸಮಿತಿ ಒತ್ತಾಯಿಸಿದೆ.

ಇದೇ ಸಂದರ್ಭದಲ್ಲಿ ಸಂತೋಷ್ ಹಿರೇದಿನ್ನಿ ತಾಲೂಕ ಅಧ್ಯಕ್ಷರು, ಮಾರುತಿ ಜಿನ್ನಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ, ಅಮರೇಶ್ ಪಾಮನಕಲ್ಲೂರು ಉಪಾಧ್ಯಕ್ಷರು, ತಿರುಪತಿ ಮಸ್ಕಿ ಸಂಘಟನಾ ಕಾರ್ಯದರ್ಶಿ, ಚಿಟ್ಟಿಬಾಬು ಸಿಂಧನೂರು ತಾಲೂಕು ಉಪಾಧ್ಯಕ್ಷರು,ಬಾಲಸ್ವಾಮಿ ಹೂವಿನಬಾವಿ ಸದಸ್ಯರು, ಬಡ್ನೆಸಾಬ್ ಸದಸ್ಯರು, ಹುಸೇನ್ ಸಾಬ್ ಸದಸ್ಯರು ಸೇರಿದಂತೆ ಸಾರ್ವಜನಿಕರಿದ್ದರು.

Be the first to comment

Leave a Reply

Your email address will not be published.


*