ರಾಜ್ಯ ಸುದ್ದಿಗಳು
ಮಸ್ಕಿ
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಮಸ್ಕಿ ಪಟ್ಟಣಕ್ಕೆ ವಿದ್ಯಾಭ್ಯಾಸ ಮಾಡಲು ಬರುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯವಿಲ್ಲದ ಕಾರಣ ಶಾಲಾ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಮಸ್ಕಿ ಯಿಂದ ಮುದಗಲ್ ಮಾರ್ಗವಾಗಿ ತೆರಳುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಗಳೇ ಬಾರದೇ ಇರುವುದು ಒಂದೆಡೆ ಆದರೆ, ದಿನ ನಿತ್ಯವೂ ಸಾರ್ಜನಿಕರು ಮತ್ತು ವಿಧ್ಯಾರ್ಥಿಗಳು ನಿಂತುಕೊಂಡು ವಿಶ್ರಾಂತಿ ಪಡೆಯಲು ಹಾಗೂ ಮಳೆ & ಸುಡು ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಬಸ್ ನಿಲ್ದಾಣವಿಲ್ಲದೆ ರಸ್ತೆಯಲ್ಲೋ ಅಥವಾ ಖಾಸಗಿ ಅಂಗಡಿ ಮುಂಗಟ್ಟುಗಳ ಮುಂದೆಯೋ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಸಾಯಂಕಾಲದ ಸಮಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಬಸ್ ಗಾಗಿ ಕಾದು ಕಾದು ಸಾಕಾಗಿ ಖಾಸಗಿ ಟಾಟಾ ಎಸಿ ಯೊಂದು ಶಾಮಿಯಾನ ಭಾರದ ವಸ್ತುಗಳ ಸಾಮಗ್ರಿಗಳನ್ನು ತುಂಬಿಕೊಂಡ ವಾಹನದಲ್ಲಿಯೇ ಕುಳಿತು ತಮ್ಮ ತಮ್ಮ ಗ್ರಾಮಗಳಿಗೆ ತೆರಳುವ ಸಂದರ್ಭ ಬಂದೊದಗಿದೆ.
ಈ ವಿದ್ಯಾರ್ಥಿಗಳ ಮೇಲೆ ಭಾರವಾದ ಸಾಮಗ್ರಿ ಬಿದ್ದು, ಏನಾದರೂ ತೊಂದರೆಯಾದರೆ ಇದಕ್ಕೆ ಹೊಣೆ ಯಾರು.? ದಿನನಿತ್ಯವೂ ಈ ಮಾರ್ಗವಾಗಿ ತೆರಳುವ ವಿದ್ಯಾರ್ಥಿಗಳು ಬಸ್ಸಿಗಾಗಿ ಕಾಯುತ್ತಿದ್ದು, ಸಾರಿಗೆ ಇಲಾಖೆಯವರು ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಬೇಕು ಎಂದು ಸಾಮಾಜಿಕ ಕಳಕಳಿಯುಳ್ಳ ದಲಿತ ಯುವ ಹೋರಾಟಗಾರ ಮಲ್ಲಿಕ್ ಮುರಾರಿ ಆಕ್ರೋಶ ವ್ಯಕ್ತಪಡಿಸಿದರು.
Be the first to comment