ರಾಜ್ಯ ಸುದ್ದಿಗಳು
ಮಸ್ಕಿ
ತಾಲೂಕಿನಾದ್ಯಂತ ಅಕ್ರಮ ಮರಳು, ಇಸ್ಪೀಟ್, ಮಟ್ಕಾ ದಂಧೆಗಳಿಗೆ ಕಡಿವಾಣ ಹಾಕಲು ತಾಲೂಕಾ ಆಡಳಿತ ಮತ್ತು ಪೋಲೀಸ್ ಇಲಾಖೆ ವಿಫಲವಾಗಿದ್ದರಿಂದ ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಕೂಡಲೇ ಶೇಖರಣೆಯಾಗಿರುವ ಅಕ್ರಮ ಮರಳನ್ನು ಜಪ್ತಿ ಮಾಡಬೇಕು ಎಂದು ದಲಿತ ಸಂರಕ್ಷ ಸಮಿತಿ ಕರ್ನಾಟಕ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ಜೋರಾಗಿಯೇ ನಡೆದಿದೆ. ಸುಮಾರು ನಲವತ್ತು ನಾಲ್ಕು ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಮಸ್ಕಿ ನಾಲಾ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಯನ್ನು ನಿರ್ವಹಿಸುವವರು ಕಾಮಗಾರಿಯನ್ನು ಕಳಪೆ ಮಟ್ಟದಲ್ಲಿ ಕಾಮಗಾರಿನು ಮಾಡುತ್ತಿದ್ದು ಅಂದಾಜು ಪಟ್ಟಿಯಂತೆ ಮಾಡದೆ ಅವಸರದಲ್ಲಿ ಕಾಮಗಾರಿಯನ್ನು ಮಾಡುತ್ತಿದ್ದಾರೆ. ಹಾಗೂ ಈ ಕಾಮಗಾರಿಗೆ ಮರಳನ್ನು ಅಕ್ರಮವಾಗಿ ಶೇಖರಣೆ ಮಾಡಿದ್ದು ಈ ಮರಳು ರಾಜಧಾನಿ ಕಟ್ಟದೆ ಶೇಖರಣೆ ಮಾಡಿದ್ದರಿಂದ ಮರಳನ್ನು ಜಪ್ತಿ ಮಾಡಬೇಕು. ಈ ಕಾಮಗಾರಿಗೆ ಸಿಂಧನೂರು ಮತ್ತು ಮಾನ್ವಿ ತಾಲೂಕಿನ ಮರಳು ಪಾಯಿಂಟ್ ನಿಂದ ಒಂದು ರಾಜಧನ ತೆಗೆದುಕೊಂಡು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮರಳನ್ನು ತುಂಬಿ ಟಿಪ್ಪರ್ ಗಳಿಂದ ಮರಳದಿನ್ನಿ ನಾಲಕ್ಕ ಕಾಮಗಾರಿಗೆ ಅಕ್ರಮವಾಗಿ ಮರಳನ್ನು ಹೊಡೆಯುತ್ತಿದ್ದಾರೆ. ಅದು ರಾತ್ರಿ ಸಮಯದಲ್ಲಿ ರಾಜಧನ ಇಲ್ಲದೆ ಅಳತೆ ಪ್ರಮಾಣ ಮೀರಿ ಹೆಚ್ಚಿನ ಮರಳನ್ನು ಹಾಕಿಕೊಂಡು ರಾಜಾರೋಷವಾಗಿ ಚಲಿಸುವುದರಿಂದ ಅಪಘಾತಗಳು ಸಂಭವಿಸುತ್ತವೆ ಹಾಗೂ ರಸ್ತೆಗಳು ಹಾಳಾಗುತ್ತಿವೆ. ಇದರಿಂದ ಸರಕಾರದ ಬೊಕ್ಕಸಕ್ಕೆ ತುಂಬಾ ನಷ್ಟವಾಗುತ್ತಿದೆ. ಟಿಪ್ಪರ್ ಚಾಲಕರ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಅತಿ ವೇಗವಾಗಿ ಅಡ್ಡಾದಿಡ್ಡಿ ಚಾಲನೆ ಮಾಡುತ್ತಾ ಮಾರಲದಿನ್ನಿ ನಾಲಾ ಕಾಮಗಾರಿಗೆ ತಲುಪಿಸುತ್ತಿದ್ದಾರೆ. ಅದು ಅಲ್ಲದೇ ಮರುಳು ವಾಹನಗಳು ಮಸ್ಕಿ ಮತ್ತು ಕವಿತಾಳ ಪೊಲೀಸ್ ಠಾಣೆಯ ಮುಂದೆಯೇ ರಸ್ತೆ ಮಾರ್ಗವಾಗಿ ರಾಜಾರೋಷವಾಗಿ ಮರಳನ್ನು ಆಕ್ರಮವಾಗಿ ನಡೆಯುತ್ತಿದ್ದಾರೆ. ಆದ್ದರಿಂದ ಅಕ್ರಮದಲ್ಲಿ ಸರಕಾರಿ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯವರು ಭಾಗಿಯಾಗಿದ್ದಾರೆ. ಹಾಗೂ ಮಾರಲ್ದಿನ್ನಿ ನಾಳೆ ಯೋಜನೆಯ ಸ್ಥಳದಲ್ಲಿ ಶೇಖರಣೆ ಮಾಡಿದ ಮರಳನ್ನು ಜಪ್ತಿ ಮಾಡಬೇಕು ಹಾಗೂ ಗುತ್ತಿಗೆದಾರರ ಮೇಲೆ ಮತ್ತು ಅಕ್ರಮ ಮರಳು ಸಾಗಣೆ ಮಾಡುವ ಟಿಪ್ಪರ್ ಗಳ ಮೇಲೆ ಕೇಸ್ ದಾಖಲಿಸಬೇಕು.
ಅಕ್ರಮ ಇಸ್ಪೀಟ್ ದಂದೆ ರಾಜಾರೋಷವಾಗಿ ಹೊಲಗಳಲ್ಲಿ, ಕೆರೆ ದಂಡೆ ಹತ್ತಿರ,ಹಳ್ಳಗಳಲ್ಲಿ ಮತ್ತು ತೋಟಗದ್ದೆಗಳಲ್ಲಿ ಸೂಕ್ಷ್ಮ ಜಾಗದಲ್ಲಿ ಅಕ್ರಮವಾಗಿ ಇಸ್ಪೀಟ್ ಆಡಿಸುತ್ತಿದ್ದಾರೆ. ಇದರಿಂದ ಸಾಮಾನ್ಯ ಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅವರ ಕುಟುಂಬಗಳು ಬೀದಿ ಪಾಲಾಗುತ್ತಿದ್ದಾವೆ. ಈ ಸ್ವೀಟ್ ದಂದೇ ಪೊಲೀಸ್ ಇಲಾಖೆಗೆ ಗೊತ್ತಿದ್ದರೂ ಏನು ಗೊತ್ತಿಲ್ಲದ ತರ ನಾಟಕವಾಡುತ್ತಿದ್ದಾರೆ. ಪ್ರತಿ ಹಳ್ಳಿಗಳಲ್ಲಿ ಮಟ್ಕಾವನ್ನು ನಾಲ್ಕು ಜನರಂತೆ ಮಟ್ಕಾ ಪಟ್ಟಿ ತೆಗೆದುಕೊಳ್ಳುತ್ತಾರೆ. ಮಟ್ಕಾ ಹಳ್ಳಿಗಳಲ್ಲಿ ಬೇರೂರಿದೆ. ಇದರಿಂದ ಅಮಾಯಕ ಜನಗಳು ಈ ಚಟಕ್ಕೆ ಬಲಿಯಾಗಿ ಕುಟುಂಬಗಳು ಹಾಳಾಗುತ್ತಿವೆ. ಸಮಾಜದಲ್ಲಿ ಜನರನ್ನು ದೃಶ್ಚಟ ಗಳಿಗೆ ಬಲಿಯಾಗಲಿಕ್ಕೆ ತಾಲೂಕು ಆಡಳಿತ ಪೊಲೀಸ್ ಇಲಾಖೆ ಕುಮಕ್ಕು ನೀಡುವ ಹಾಗೆ ಅನಿಸುತ್ತಿದೆ.ಎಲ್ಲಾ ಕ್ರಮಗಳು ಜೋರಾಗಿ ಕಣ್ಮುಂದೆ ನಡೆಯುತ್ತಿದ್ದರು ತಾಲೂಕ್ ಆಡಳಿತ ಮತ್ತು ಪೊಲೀಸ್ ಇಲಾಖೆ ಸುಮ್ಮನೆ ಮೌನವಾಗಿ ಕುಳಿತಿದೆ. ಇದರಿಂದ ಸಮಾಜದಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳು ಸಣ್ಣ ವಯಸ್ಸಿಗೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಯುವಕರು ಈ ದೇಶದ ಸಂಪತ್ತು ಹಾಗಾಗಿ ದುಶ್ಚಟಗಳಿಗೆ ಬಲಿಯಾಗದಂತೆ ಆಕ್ರಮ ದಂಧೆಗಳಿಗೆ ಕಡಿವಾಣ ಹಾಕುವುದು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಅಕ್ರಮ ಮರಳು, ಇಸ್ಪೀಟ್, ಮಟ್ಕಾ ದಂದೆಗಳು ಮಸ್ಕಿ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಹೆಚ್ಚುತ್ತಾ ಇದ್ದರೂ ಯಾವುದೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳದೆ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಸಾರ್ವಜನಿಕರು ತಾಲೂಕ ಆಡಳಿತದ ಮೇಲೆ ಅನುಮಾನ ದೃಷ್ಟಿಯಿಂದ ನೋಡುತ್ತಿದ್ದಾರೆ. ಎಂದು ದಲಿತ ಸಂರಕ್ಷಾ ಸಮಿತಿ ಕರ್ನಾಟಕ ಜಿಲ್ಲಾ ಮತ್ತು ತಾಲೂಕು ಸಮಿತಿಯು ಕಂದಾಯ ಇಲಾಖೆಯ ಶಿರಸ್ತೇದಾರರಾದ ವಿಜಯ್ ಕುಮಾರ್ ಸಜ್ಜನ್ ಇವರ ಮೂಲಕ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿಬಾಲಸ್ವಾಮಿ ಜಿನ್ನಾಪುರ ಜಿಲ್ಲಾಧ್ಯಕ್ಷರು, ಭೀಮರಾಯಪ್ಪ ಬಳಗಾನೂರ, ಮೌನೇಶ್ ಬಳಗಾನೂರ, ಸಿದ್ದಪ್ಪ ಹೂವಿನಬಾವಿ ತಾಲೂಕ ಅಧ್ಯಕ್ಷರು ಮಸ್ಕಿ, ಮರಿಸ್ವಾಮಿ ಬೆನಕನಾಳ, ಕಾಶಿಂ ಮುರಾರಿ, ಲಕ್ಷ್ಮಣ್ ಹಿರೇ ಕಡಬೂರು, ಯೂಸುಫ್ ಖಾನ್ ಮಸ್ಕಿ, ರಾಘವೇಂದ್ರ ಕೂಡ್ಲಿ, ಸುರೇಶ್ ನಾಗರಬೆಂಚಿ, ಹುಲುಗಪ್ಪ ನಂಜಲದಿನ್ನಿ, ಜೀವನ್ ಕುಮಾರ್ ನಾಗರಬೆಂಚಿ, ಜೋಕೆಪ್ಪ ಹಿರೇ ಕಡಬೂರು, ವೀರೇಶ್ ನಾಗರಬೆಂಚಿ, ರವಿ ತೋರಣದಿನ್ನಿ, ಶಂಭುಲಿಂಗ ಇರಕಲ್ ಸೇರಿದಂತೆ ದಲಿತ ಸಂರಕ್ಷ ಸಮಿತಿ ಕರ್ನಾಟಕ ಪದಾಧಿಕಾರಿಗಳು ಇದ್ದರು.
Be the first to comment