ಉಕ್ರೇನ್ ನಿಂದ ಬೆಂಗಳೂರಿಗೆ ಆಗಮಿಸಿದ 12ಜನ ವಿದ್ಯಾರ್ಥಿಗಳು

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

 

ದೇವನಹಳ್ಳಿ

CHETAN KENDULI

ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ಭೀತಿಯ ಪರಿಣಾಮ ರಾಜ್ಯದ 12 ಜನ ವಿದ್ಯಾರ್ಥಿಗಳು ಇಂದು ಸುರಕ್ಷಿತವಾಗಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಸಚಿವ ಆರ್.ಅಶೋಕ್ ಅವರು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು. ಉಕ್ರೇನ್ ನಿಂದ ಬಾಂಬೆಗೆ ಬಂದು ಅಲ್ಲಿಂದ ಏರ್ ವಿಸ್ತಾರದಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ತಲುಪಿದ 12ಜನ ಬಾಂಬೆಯಿಂದ 7ಗಂಟೆಗೆ ಹೊರಟ ಪ್ಲೈಟ್ ಬೆಳಗ್ಗೆ 8.50ಕ್ಕೆ ಬೆಂಗಳೂರು ತಲುಪಿತು. ಏರ್‌ಪೋರ್ಟ್‌ಗೆ ಬಂದ ಪ್ರಯಾಣಿಕರನ್ನು ಸಚಿವ ಆರ್.ಅಶೋಕ್ ಬರಮಾಡಿಕೊಂಡರು ಈ ವೇಳೆಯಲ್ಲಿ ದೇವನಹಳ್ಳಿಯ ವಿಮಾನ ನಿಲ್ದಾಣಕ್ಕೆಬಂದ ವಿದ್ಯಾರ್ಥಿಗಳು ರಾಷ್ಟ್ರದ್ವಜ ಹಿಡಿದು ಸಂತಸ ವ್ಯಕ್ತಪಡಿಸಿದರು.

ಬೆಂಗಳೂರಿಗೆ ಬಂದವಿದ್ಯಾರ್ಥಿಗಳು: ನಬಾಯಿಸ್ ಹೂಡಾ , ಸೈಯದ್ ಹಬೀಬ್, ಪೂಜಾ ಕುಮಾರಿ ಯಾದವ್, ಸಂಪಂಗಿ ರಾಮರೆಡ್ಡಿ ಮೋನಿಕಾ, ಉದಯ್. ಕೆ.ವಿ, ಮಹಮ್ಮದ್ ಹಬೀದ್ ಆಲಿ ಶೌಕಾತ್ , ಇಂಚರಾರಾಜ್ ಶಿವರಾಜ್ , ತುಷಾರುಮಧು , ವಿಜಯಲಕ್ಷ್ಮಿ ಚಕ್ರವರ್ತಿ, ಶ್ರೇಯಾ ಚಂದ್ರಶೇಖರ್, ರಿಯಾ ಕುಮಾರಿ ಇವರುಗಳನ್ನು ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಏರ್ಪೋರ್ಟ್ ಸಿಬ್ಬಂದಿ, ಪೋಷಕರು ಮತ್ತು ಅಧಿಕಾರಿಗಳು ಸ್ವಾಗತಿಸಿಕೊಂಡರು. ರಾಜ್ಯಕ್ಕೆ, ಬೆಂಗಳೂರಿಗೆ ಬಂದ ಬಗ್ಗೆ ವಿದ್ಯಾರ್ಥಿಗಳು & ಪೋಷಕರು ಪರಸ್ಪರ ಸಂತಸ ವ್ಯಕ್ತಪಡಿಸಿದರು.

Be the first to comment

Leave a Reply

Your email address will not be published.


*