ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಬ್ಯಾಂಕ್ ವತಿಯಿಂದ ಕೊಡಮಾಡಿದ ವಿದ್ಯಾರಥ ಹಸ್ತಾಂತರ

ವರದಿ : ಇಬ್ರಾಹಿಂ ಕೋಟ ಕುಂದಾಪುರ

ಜಿಲ್ಲಾ ಸುದ್ದಿಗಳು 

ಕೋಟ

ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಹೊಸ ಹಿರಿಯ ಪಾರ್ಥಮಿಕ ಶಾಲೆಗೆ ಕರ್ನಾಟಕ ಬ್ಯಾಂಕ್ ಮಂಗಳೂರು ವತಿಯಿಂದ ಕೊಡುಗೆಯಾಗಿ ನೀಡಿದ ಶಾಲಾ ವಾಹನವನ್ನು ಡಿ. 26 ರಂದು ಭಾನುವಾರ ಕರ್ನಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಬಲೇಶ್ವರ ಎಮ್. ಎಸ್ ಇವರು ಹಸ್ತಾಂತರಿಸಿದರು.ಅವರು ಮಾತನಾಡಿ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯು 95ನೇ ವರ್ಷವನ್ನು ಪೂರೈಸಿ ಶತಮಾನೋತ್ಸವ ಆಚರಿಸಲು ದಾಪುಗಾಲು ಹಾಕುತಿದೆ. ಇನ್ನು ಮುಂದೆ ಸುತ್ತ ಮುತ್ತಲಿನವರು ಹಾಗೂ ಗ್ರಾಮಸ್ಥರು ಸೇರಿ ಶಾಲೆಯ ದಾಖಲಾತಿ, ಪ್ರಗತಿಯನ್ನು ಹೆಚ್ಚಿಸಬೇಕು. ಅಲ್ಲದೆ ಈ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸಿ ಮುಂದೆ ಒಳ್ಳೆಯ ಹೆಸರು ಬರುವಾಗೆ ಇಲ್ಲಿರುವ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರು ಒಂದು ಪ್ರತಿಜ್ಞೆ ಮಾಡಿ ಕೊಳ್ಳಬೇಕು. ಅದಕ್ಕೆ ಪೂರ್ವಿಕವಾಗಿ ಸಮಾಜ ಸ್ಪಂದಿಸಬೇಕು, ಎಲ್ಲಾ ಒಂದು ನಿಟ್ಟಿನಲ್ಲಿ ಎಲ್ಲರೂ ಸಹ ಏಕ ಮನಸ್ಕರಾಗಿ ಮುಂದೆ ಕೆಲಸ ಮಾಡಬೇಕು ಅಲ್ಲದೆ ಶಾಲೆಯ ಅಭಿವೃದ್ಧಿಗಾಗಿ ಹಾಗೂ ರಾಷ್ಟ್ರವನ್ನು ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಮಹಬಲೇಶ್ವರ್ ಎಮ್ ಎಸ್ ಹೇಳಿದರು. ವಿದ್ಯಾರ್ಥಿಗಳಲ್ಲಿ ವಿಶ್ವದಾದ್ಯಂತಹ ಹೆಸರುಗಳಿಸುವ ಕನಸು ಇಟ್ಟುಕೊಳ್ಳಬೇಕು. ಅದು ಯಾವುದೇ ಕ್ಷೇತ್ರವಾಗಲಿ, ಮಕ್ಕಳು ಒಂದು ಕನಸನ್ನು ಕಾಣಬೇಕು. ಮಕ್ಕಳು ಚನ್ನಾಗಿ ಓದಿದರೆ ಮುಂದೆ ಆ ಕನಸು ನನಸಾಗ ಬಹುದು ಎಂದು ಮಕ್ಕಳನ್ನು ಹುರಿದುಂಬಿಸಿದರು.

CHETAN KENDULI

ಮುಖ್ಯ ಅಥಿತಿಗಳಾದ ಮಣೂರು ಗೀತಾನಂದ ಫೌಂಡೇಶನ್ ಟ್ರಸ್ಟ್ ನ ಪ್ರವರ್ತಕರಾದ ಆನಂದ್ ಸಿ ಕುಂದರ್ ಮಾತನಾಡಿ ಹಲವು ವರ್ಷದಿಂದ ಶಾಲಾಭಿವೃದ್ಧಿ ಸಮಿತಿಯವರು ಸುತ್ತಮುತ್ತಲು ಅನೇಕ ಶಾಲೆಗಳಿವೆ ಅಲ್ಲದೆ ನಮ್ಮ ಶಾಲೆಗೆ ಬರಲು ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲ, ಇದರಿಂದಾಗಿ ನಮ್ಮ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಆಗಿದೆ. ಅದಕ್ಕಾಗಿ ನಮ್ಮ ಶಾಲೆಗೆ ಒಂದು ಶಾಲಾವಾಹನದ ವ್ಯವಸ್ಥೆ ಹಾಗೂ ಇಂಗ್ಲಿಷ್ ಮೀಡಿಯಂ ವ್ಯವಸ್ಥೆ ಆಗಬೇಕೆಂದು ಪ್ರಸ್ತಾಪ ಮಾಡಿದ್ದರು. ಈ ಸಂದರ್ಭ ಇಂದು ನಮಗೆ ಒದಗಿ ಬಂದಿದೆ. ಶಾಲಾ ವಾಹನದ ವ್ಯವಸ್ಥೆಯನ್ನು ನಮ್ಮ ಕರ್ನಾಟಕ ಬ್ಯಾಂಕಿನವರು ಇಂದು ನೀಡಿದ್ದಾರೆ. ಇದು ಒಂದು ಕರ್ನಾಟಕ ಬ್ಯಾಂಕ್ ನವರ ದೊಡ್ಡ ಮೊತ್ತದ ಕೊಡುಗೆಯಾಗಿದೆ. ಸಿ.ಎಸ್.ಆರ್. ಪಂಡು ಎಲ್ಲಾ ಬ್ಯಾಂಕ್ ಗಳಲ್ಲಿರುತ್ತದೆ. ಆದರೆ ಸಹಾಯ ಮಾಡುವವರು ಬಹಳ ಕಡಿಮೆ, ಆದರೆ ಕರ್ನಾಟಕ ಬ್ಯಾಂಕಿನವರು ಸಿಎಸ್ಆರ್ ಪಂಡನ್ನು ನೀಡಿ ಸಹಕರಿಸಿದ್ದಾರೆ. ಅದಕ್ಕಾಗಿ ಅವರಿಗೆ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಆನಂದ್ ಸಿ ಕುಂದರ್ ಹೇಳಿದರು.ಈ ಶಾಲಾವಾಹನದ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಅನಂತಪದ್ಮನಾಭ ಐತಾಳ ವಹಿಸಿದ್ದರು.ಈ ಸಂದರ್ಭದಲ್ಲಿ ಶಾಲೆಗೆ ವಿದ್ಯಾರಥವನ್ನು ಕೊಡುಗೆಯಾಗಿ ನೀಡಿದ ಕರ್ನಾಟಕ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ್ ಎಮ್ ಎಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ನಿಬಂಧಕ ರಾದ ರಾಜಗೋಪಾಲ್ ಬಿ., ಅರವಿಂದ ಮೋಟರ್ಸ್ ಕುಂದಾಪುರ ಇದರ ಸೀನಿಯರ್ ಮೆನೇಜರ್ ಸತೀಶ್ ಗಾಣಿಗ, ಪಟ್ಟಣ ಪಂಚಾಯಿತಿ ಸದಸ್ಯೆ ಶ್ರೀಮತಿ ಗಿರಿಜಾ ಶೇಖರ್ ಪೂಜಾರಿ, ವಿದ್ಯಾರಥ ಸಮಿತಿ ಅಧ್ಯಕ್ಷ ವಿಶ್ವನಾಥ ಹೊಳ್ಳ, ಸದಸ್ಯರಾದ ಆನಂದ ಆಚಾರ್ಯ, ಕೆ ಪಿ ಶೇಖರ್, ಅಚ್ಚುತ ಪೂಜಾರಿ, ಮಾಧವ ಕಾರ್ಕಡ ಹಾಗೂ ಪಂ. ಪಂಚಾಯತ್ ಸದಸ್ಯರಾದ ಸಂಜೀವ ದೇವಾಡಿಗ, ರಾಜು ಪೂಜಾರಿ, ಗಣೇಶ ಬಿ. ಮೊದಲದವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಪ್ರಭಾಕರ್ ಕಾಮತ್ ಸ್ವಾಗತಿಸಿದರು.ಶಾಲಾ ಅಧ್ಯಾಪಕ ಕೆ. ನಾರಾಯಣ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು.ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷರಾದ ಕೆ. ತಾರಾನಾಥ ಹೊಳ್ಳ ವಂದಿಸಿದರು.

Be the first to comment

Leave a Reply

Your email address will not be published.


*