ಜಿಲ್ಲಾ ಸುದ್ದಿಗಳು
ಶಿರಸಿ:
ಕುಮಟಾ ರಸ್ತೆ ಅಗಲೀಕರಣ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಪರಿಸರವಾದಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸಬೇಕು. ಸಮಾನ ಮನಸ್ಕ ನಾಗರಿಕರು ಸ್ವಯಂ ಪ್ರೇರಿತವಾಗಿ ಬರುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು. ಸಾಗರಮಾಲಾ ಯೋಜನೆ ಅಡಿಯಲ್ಲಿ ಅನುದಾನ ಬಿಡುಗಡೆ ಯಾಗಿ ಅರ್ಧಂಬರ್ಧ ಕಾಮಗಾರಿ ಸಹ ನಡೆದಿದೆ. ಈಗ ಸ್ಥಗಿತಗೊಳಿಸುವಂತೆ ಒತ್ತಡ ಹೇರುವುದು ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ ಹೇಳಿದರು.
ಜನರಲ್ಲಿ ಸುಳ್ಳು ಸುದ್ದಿಗಳನ್ನು ನಕಲಿ ಪರಿಸರ ವಾದಿಗಳು ಬಿತ್ತುತ್ತಿದ್ದಾರೆ. ನಕಲಿ ಪರಿಸರ ವಾದಿಗಳ ವಿರುದ್ಧ ನಾವು ಧ್ವನಿ ಎತ್ತಬೇಕಿದೆ.
ಪರಿಸರದ ಬಗ್ಗೆ ಜ್ಞಾನ ವಿಲ್ಲದವರು ಪರಿಸರದ ಬಗ್ಗೆ ಮಾತನಾಡುತ್ತಿದ್ದಾರೆ. ಇವರು ಶಿರಸಿ ನಗರ ಹಾಗೂ ಶಿರಸಿಯ ಅಭಿವೃದ್ಧಿಗೆ ಹಿಂದಿನಿಂದಲೂ ಹಲವು ತೊಡಕುಗಳನ್ನು ಕೊಡುತ್ತಲೇ ಇದ್ದಾರೆ. ಸ್ಥಳೀಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಶಿರಸಿ ಕುಮಟಾ ಕಾಮಗಾರಿ ಕುರಿತು ಸಾಮಾಜಿಕ ಜಾಲತಾಣ ಗಳಲ್ಲಿ ಹಲವು ನಕಲಿ ಪರಿಸರ ವಾದಿಗಳು ಹಣ ಕೇಳುತ್ತಿದ್ದಾರೆ ಎಂದು ದೂರಿದರು.
ಸಭೆಯಲ್ಲಿ ಉದ್ಯಮಿ ಉಪೇಂದ್ರ ಪೈ, ಅಭಿವೃದ್ಧಿ ಚಿಂತಕರಾದ ಎಮ್. ಎಮ್ ಭಟ್, ರಾಜೇಶ್ ಶೆಟ್ಟಿ, ಜಿ.ಎನ್. ಭಟ್ಟ, ಅನಿಲ್ ನಾಯ್ಕ ಇದ್ದರು.
Be the first to comment