ರಾಜ್ಯ ಸುದ್ದಿಗಳು
ದೇವನಹಳ್ಳಿ
ಸಮಾಜದಲ್ಲಿ ಗುರ್ತಿಸಿಕೊಂಡ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎ೦ದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರರ್ಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸರ್ವ ಧರ್ಮಗಳ ಪರಿಪಾಲಕ ಸಂತ ಇಬ್ರಾಹಿಂ ಸುತಾರ ಹಾಗೂ ಭಾರತ ರತ್ನ ಪುರಸ್ಕೃತ ಗಾನಕೋಗಿಲೆ ಲತಾಮಂಗೇಶ್ವರ್ ನಿಧನಕ್ಕೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಸರ್ವ ಧರ್ಮಗಳ ಪರಿಪಾಲಕ ಸಂತ ಇಬ್ರಾಹಿಂ ಸುತಾರ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದರು. ಇವರ ಹಲವಾರು ಭಾಷಣಗಳು ಜನರ ಮನಸ್ಸಿಗೆ ನಾಟುವಂತಿತ್ತು. ಯಾವುದೇ ಧರ್ಮವಾದರೇನು ನಾವೆಲ್ಲರೂ ಒಂದೇ ಭಾವನೆ ಹುಟ್ಟು ಹಾಕುವಲ್ಲಿ ಇವರ ಪಾತ್ರ ಅಪಾರವಾಗಿತ್ತು. ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮಹನೀಯ ಸಂತ ಇಬ್ರಾಹಿಂ ಸುತಾರ ಎ೦ದು ಹೇಳಿದರು.
ಗಾನಕೋಗಿಲೆ ಲತಾಮಂಗೇಶ್ವರ್ ಅವರು ಭಾರತ ರತ್ನ ಪುರಸ್ಕೃತರು. ಕೋಗಿಲೆ ಕಂಠದಲ್ಲಿ ಜನ ಮಾನಸ ಗೆದ್ದಂತಹ ಅಭೂತಪೂರ್ವ ಮಹಿಳೆ ಇವರ ಅಗಲಿಕೆ ಇಡೀ ರಾಷ್ಟ್ರ ಮತ್ತು ರಾಜ್ಯಕ್ಕೆ ತುಂಬಲಾರದ ನಷ್ಯವಾಗಿದೆ. ಇವರ ಅಗಲಿಕೆ ತುಂಬ ನೋವುಂಟು ಮಾಡಿದೆ ಎಂದರು.ಈ ವೇಳೆ ಜೆಡಿಎಸ್ ಪಕ್ಷದ ಮುಖಂಡರು ಮತ್ತು ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಪುಷ್ಪನಮನ ಸಲ್ಲಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ತಾಪಂ ಮಾಜಿ ಸದಸ್ಯ ಮಹೇಶ್, ಹೋಬಳಿ ಅಧ್ಯಕ್ಷ ಚಂದ್ರೇಗೌಡ, ಅಣ್ಣೇಶ್ವರ ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವಣ್ಣ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಮುಖಂಡ ವೆಂಕಟೇಶ್‌ಮೂರ್ತಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಕೃಷ್ಣ, ಪ್ರ.ಕಾರ್ಯದರ್ಶಿ ಪಿ.ಹರ್ಷ, ಖಜಾಂಚಿ ಮಧುಚಂದ್ರ, ಕಾರ್‍ಯದರ್ಶಿ ಹೈದರ್‌ಸಾಬ್, ನಿರ್ದೇಶಕರಾದ ಮಹೇಶ್, ಶ್ರೀನಿವಾಸ್ ಗಾಂಧಿ, ರಾಜು ಅಗಸ್ತ್ಯ, ಜಿಲ್ಲಾ ಘಟಕ ನಿರ್ದೇಶಕರಾದ ನರಸಿಂಹಮೂರ್ತಿ, ಪತ್ರಕರ್ತ ಗುರುಮೂರ್ತಿ, ಮಂಜುನಾಥ್, ಇತರರು ಇದ್ದರು.
Be the first to comment