ಮುದ್ದೇಬಿಹಾಳ ತಾಲೂಕಿನಲ್ಲಿ ಉದ್ಘಾಟನೆಗೊಂಡ ಶ್ರೀ ಸಾಯಿನಾಥ ದಾಲ ಇಂಡಸ್ಟ್ರೀಸ್…!!! ಶರಣು ಸಜ್ಜನ ಅವರ ಕನಸು ವಯಕ್ತಿಕವಲ್ಲ: ಖಾಸ್ಗತೇಶ್ವರ ಸಿದ್ಧಲಿಂಗದೇವರು

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು


ಮುದ್ದೇಬಿಹಾಳ:

ಶೈಕ್ಷಣಿ ತಕ್ಕಂತೆ ಸಿಕ್ಕ ಉದ್ಯೋಗದಲ್ಲಿ ಆರ್ಥಿಕವಾಗಿ ಏಳಿಗೆ ಕಾನುವುದರಲ್ಲಿ ವಿದ್ಯಾವಂತರು ವಿಫಲರಾಗಿ ದುಡಿಯನ್ನೆ ಕೈಬಿಡುವ ದುಸ್ಥಿತಿಯಲ್ಲಿದ್ದಾರೆ. ಆದರೆ ಶಿಕ್ಷಣ ವಿದ್ಯೆಗಾಗಿ ಮಾತ್ರ ಎಂದು ಭಾವಿಸಿ ಸಮಾಜಕ್ಕೆ ಒಂದು ಉಡುಗೊರೆಯನ್ನು ನೀಡುವ ಕನಸು ಕಂಡು ಜಿಲ್ಲೆಯಲ್ಲಿಯೇ ದೊಡ್ಡ ಖಾರ್ಕಾನೆ ಮಾಡಿದ್ದು ಶ್ಲಾಘನೀಯವಾದದ್ದು ಎಂದು  ಬೈಲೂರಿನ ಮುಂಡರಗಿ ಹಾಗೂ ನಿಷ್ಕಲಮಂಟಪ ತೋಂಟದಾರ್ಯಮಠದ ನಿಜಗುಣಪ್ರಭು ಹೇಳಿದರು.
ಅವರು ಬುಧವಾರ ತಾಲೂಕಿನ ಕುಂಟೋಜಿ ರಸ್ತೆಯ ಸಾಯಿನಾಥ ದಾಲ ಇಂಡಸ್ಟ್ರೀಸ್ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.



CHETAN KENDULI

ದೇಶದ ಸಾಲ ಹೆಚ್ಚಾಗುತ್ತದ್ದು ಇದನ್ನು ತಗ್ಗಿಸಲು ಇಂತಹ ಖಾರ್ಕಾನೆಯನ್ನು ತಮ್ಮದೆಂದು ಭಾವಿಸಿ ತಾವು ಬೆಳೆದ ಬೆಳೆಗಳನ್ನು ಸ್ಥಳೀಯ ಖಾರ್ಕಾನೆಗೆ ಒದಗಿಸುವಂತಾಗಬೇಕು. ಅಂದಾಗ ಮಾತ್ರ ಸಾದ್ಯವಾಗುತ್ತದೆ. ಅಲ್ಲದೇ ಶರಣು ಸಜ್ಜನ ಅವರಿಗೆ ಮಾತ್ರವಲ್ಲದೇ ಸಮಾಜದ ನೂರಾರು ಸ್ಥಳೀಯ ಕುಟುಂವಸ್ಥರಿಗೂ ಅನುಕೂಲವಾಗಲಿದೆ ಎಂದು ಅವರು ಹೇಳಿದರು.


ತಾಳಿಕೋಟಿಯ ಖಾಸ್ಗತೇಶ್ವರ ಮಠದ ಸಿದ್ಧಲಿಂಗದೇವರು ಮಾತನಾಡಿ, ಧಾರ್ಮಿಕ ಸ್ಥಳಗಳನ್ನು ಸ್ಥಾಪಿಸಿದರೆ ಆಯಾ ಧಾರ್ಮಿಕ ಸಮಾಜವನ್ನು ಬೆಳೆಸಿದಂತಾಗುತ್ತದೆ. ಆದರೆ ಒಂದು ಖಾರ್ಕಾನೆಯನ್ನು ಸ್ಥಾಪಿಸಿದರೆ ಅದರಿಂದ ಸಾವಿರಾರು ಕುಟುಂಬಗಳನ್ನು ಬೆಳೆಸಿದಂತಾಗುತ್ತದೆ. ಇಂತಹ ಕಾರ್ಯಕ್ಕೆ ಮುದ್ದೇಬಿಹಾಳ ತಾಲೂಕಿನ ಉದ್ಯಮಿಯವರು ಮಾಡಿದ್ದು ಶ್ಲಾಘನೀಯವಾದದ್ದು ಎಂದು ಹೇಳಿದರು.



ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರದೇವರು ಮಾತನಾಡಿದರು. ಅಂಕಲಿಮಠದ ವೀರಭದ್ರ ಸ್ವಾಮಿಗಳು ಖಾರ್ಕಾನೆಯ ಮುಖ್ಯ ವಿದ್ಯುತ್ ಬಟನ್ ಒತ್ತುವ ಮೂಲಕ ಉದ್ಘಾಟಿಸಿದರು. ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್, ಖಾರ್ಕಾನೆ ಮಾಲಿಕರಾದ ಶರಣು ಸಜ್ಜನ, ಪ್ರಕಾಶ ಸಜ್ಜನ ಸೇರಿದಂತೆ ಇತರೆ ಗಣ್ಯರಿದ್ದರು.


             ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ರಸ್ತೆಯಲ್ಲಿನ ಶ್ರೀ ಸಾಯಿನಾಥ ದಾಲ ಇಂಡಸ್ಟ್ರೀಸ್ ಯನ್ನು ಅಂಕಲಿಮಠದ ವೀರಭದ್ರ ಸ್ವಾಮಿಗಳು ಉದ್ಘಾಟಿಸಿದರು

“ಮನುಷ್ಯನಿಗೆ ಮನುಸ್ಸು ಬಹಳ ಮುಖ್ಯವಾದದು. ನಮ್ಮ ನೆಲೆದಲ್ಲಿ ನೂರಾರು ಕುಟುಂಬಕ್ಕೆ ಕೆಲಸ ಕೊಡುವಂತ ಕಾರ್ಯ ಮಾಡಬೇಕು ಎಂದು ಸಜ್ಜನ ಅವರು ಕಂಡ ಕನಸು ನನಸಾಗಿದೆ. ಆದರೆ ಅವರ ಕಂಡ ಕನಸು ವಯಕ್ತಿಕ ಲಾಭದಾಯಕವಾಗಿಲ್ಲಾ ಎಂಬುವುದನ್ನು ಎಲ್ಲರೂ ಅರಿಯಬೇಕಿದೆ. ಈ ಖಾರ್ಕಾನೆಯನ್ನು ಸಾರ್ವಜನಿಕ ಖಾರ್ಕಾನೆಯನ್ನು ತಿಳಿದು ಇದನ್ನು ಮುನ್ನೆಡೆಸುವ ಕೆಲಸಾ ತಾಲೂಕಿನ ಎಲ್ಲ ರೈತರೂ ಮಾಡಬೇಕಿದೆ.”
-ಶ್ರೀ ಸಿದ್ಧಲಿಂಗ ದೇವರು, ಖಾಸ್ಗತೇಶ್ವರಮಠ, ತಾಳಿಕೋಟಿ.

 

 

Be the first to comment

Leave a Reply

Your email address will not be published.


*