ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ತಾಲೂಕಿನ ಬಸರಕೋಡ ಗ್ರಾಮದ ಶಾಂತಗೌಡ ಯಮನಪ್ಪ ಮೇಟಿ(52) ಮಂಗಳವಾರ ನಿಧನರಾದರು. ಮೃತರರಿಗೆ ಪತ್ನಿ, ಓರ್ವ ಗಂಡು ಹಾಗೂ ಒರ್ವ ಹೆಣ್ಣು ಮಕ್ಕಳು ಹಾಗೂ ಮೂರು ಜನ ಸಹೋದರರು ಇದ್ದಾರೆ.
260 ಮತಗಳ ಅಂತರದ ಗೆಲವು ಪಡೆದಿದ್ದ ಶಾಂತಗೌಡ:
ಮುದ್ದೇಬಿಹಾಳ ತಾಲೂಕಿನಲ್ಲಿಯೇ ಜಿದ್ದಾಜಿದ್ದಿಯ ಕಣವಾಗಿದ್ದ ಬಸರಕೋಡ ಗ್ರಾಮ ಪಂಚಾಯತಿಯ 4ನೇ ವಾರ್ಡಿಗೆ ಸ್ಪರ್ಧಿಸಿ 260 ಮತಗಳ ಅಂತರ ಗೆಲುವನ್ನು ಪಡೆದಿದ್ದು ತಾಲೂಕಿನಲ್ಲಿಯೇ ಇವರೇ ಅತೀ ಹೆಚ್ಚಿನ ಮತಗಳಿಂದ ಗೆಲವು ಸಾಧಿಸಿದ ಸಾಧನೆಯಾಗಿದೆ.
ಸಂತಾಪ ಸೂಚನೆ:
ಮೃತರರ ನಿಧನಕ್ಕೆ ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರದೇವರು, ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ(ಮಡಿಕೇಶ್ವರ), ಮಾಜಿ ಸಚಿವ ಸಿ.ಎಸ್.ನಾಡಗೌಡ(ಅಪ್ಪಾಜಿ), ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ನಾಡಗೌಡ, ವರುಣರಾಜ ನಾಡಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಪಾಟೀಲ, ಮಾಜಿ ಜಿಪಂ ಸದಸ್ಯ ಹೇಮರಡ್ಡಿ ಮೇಟಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಸಂತಾಪ ಸೂಚಿಸಿದ್ದಾರೆ.
ಪಂಚಾಯತಿಯ ಮರು ಚುನಾವಣೆ…?
ಈಗಾಗಲೇ ಗ್ರಾಮ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣಗೆ ಮೀಸಲಾಯಿತಿ ಪ್ರಕಟಗೊಂಡಿದ್ದು ಬಸರಕೋಡ ಗ್ರಾಮ ಪಂಚಾಯತಿ ಸದಸ್ಯ ಶಾಂತಗೌಡ ಪಾಟೀಲ ಅವರ ಅಕಾಲಿಕ ನಿಧನದಿಂದ ವಾರ್ಡ 4ರ ಕ್ಷೇತ್ರಕ್ಕೆ ಮರು ಚುನಾವಣೆಯಾಗಲಿದೆ…? ಇದರಿಂದ ಪಂಚಾಯತಿಯಲ್ಲಿ ನಡೆಯಬೇಕಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯನ್ನು ಮುಂದೋಡಲಾಗುತ್ತದೆ…?
Be the first to comment