ಕಾರವಾರ ಪೊಲೀಸರಿಂದ ಖೋಟಾ ನೋಟು ದಂದೆ ಆರೋಪಿಗಳ ಬಂಧನ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

 

ಕಾರವಾರ

CHETAN KENDULI

15 ದಿನಗಳ ಹಿಂದೆ ಖೋಟಾ ನೋಟು ಗ್ಯಾಂಗ್‌ನ ಮೇಲೆ ಜಿಲ್ಲಾ ಪೊಲೀಸರು ನಡೆಸಿದ್ದ ಕಾರ್ಯಾಚರಣೆಯಲ್ಲಿ ತಲೆಮರೆಸಿಕೊಂಡಿದ್ದವರನ್ನುಪಿ ಬಂಧಿಸಲಾಗಿದ್ದು,500 ರೂ. ಮುಖಬೆಲೆಯ ಖೋಟಾ ನೋಟುಗಳನ್ನು, ಕಲರ್ ಪ್ರಿಂಟರ್, ಲ್ಯಾಪ್‌ಟಾಪ್, ಖೋಟಾ ನೋಟು ಮುದ್ರಣಕ್ಕೆ ಬಳಸುವ ಇತರ ಪರಿಕರಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.ಮೇ.5ರಂದು ನಗರದ ರಾಷ್ಟ್ರೀಯ ಹೆದ್ದಾರಿಯ ಕೋಡಿಬಾಗದ ಹೋಟೆಲ್ ಒಂದರ ಬಳಿ ಖೋಟಾ ನೋಟನ್ನು ಅಸಲಿ ನೋಟಿನೊಂದಿಗೆ ಬದಲಾವಣೆ ಮಾಡಿಕೊಳ್ಳುತ್ತಿರುವ ಖಚಿತ ಮಾಹಿತಿ ಮೇರೆಗೆ ಅಂಕೋಲಾ ಪೊಲೀಸ್ ಠಾಣೆಯ ತಂಡವು ದಾಳಿ ನಡೆಸಿ, ಆರೋಪಿತರಾದ ಕೋಡಿಬಾಗದ ಪ್ರವೀಣ ನಾಯರ್, ಮಡಗಾಂವ್‌ನ ಲೋಯ್ಡ್ ಲಾರೆನ್ಸ್, ಲಾರ್ಸನ್ ಲೂಯಿಸ್ ಸಿಲ್ವಾ, ಪ್ರನೋಯ ಫರ್ನಾಂಡಿಸ್‌ರನ್ನು ವಶಕ್ಕೆ ಪಡೆದು, ನಕಲಿ ಮತ್ತು ಅಸಲಿ ನೋಟುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.ಈ ಬಗ್ಗೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನಾ ಡಿ.ಪೆನ್ನೇಕರ ನಿರ್ದೇಶನದದಲ್ಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ ಎಸ್. ಹಾಗೂ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾರವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ದಪ್ಪ ಬೀಳಗಿ, ಹೊನ್ನಾವರ ಠಾಣೆಯ ನಿರೀಕ್ಷಕ ಶ್ರೀಧರ ಎಸ್.ಆರ್., ಅಂಕೋಲಾ ಪಿಎಸ್‌ಐ ಪ್ರೇಮನಗೌಡ ಪಾಟೀಲ ಹಾಗೂ ಸಿಬ್ಬಂದಿ ಭಗವಾನ ಗಾಂವಕರ, ಮಂಜುನಾಥ ಲಕ್ಮಾಪುರ, ಸಂತೋಷಕುಮಾರ, ಶ್ರೀಕಾಂತ, ಮೊಹಮದ್ ಶಫಿ, ಹನುಮಂತ ರಡ್ಡೇರ ಹಾಗೂ ಜಿಲ್ಲಾ ಸೊಲೀಸ್ ಕಛೇರಿಯ ಸಿ.ಡಿ.ಆರ್ ವಿಭಾಗದ ಸಿಬ್ಬಂದಿಗಳ ತಂಡವನ್ನು ರಚಿಸಿಕೊಂಡು ತಲೆಮರೆಸಿಕೊಂಡಿದ್ದವರ ಪತ್ತೆಗೆ ಜಾಡು ಬೀಸಲಾಗಿತ್ತು.

ಅಂತೂ ಈ ಪ್ರಕರಣದಲ್ಲಿನ ಮುಖ್ಯ ಆರೋಪಿತ ಕೋಡಿಬಾಗದ ಮುಸ್ತಾಕ್ ಹಸನ್ ಬೇಗ್, ಅಫ್ಜಲ್ ಹಸನ್ ಬೇಗ್ ಹಾಗೂ ಇವರಿಗೆ ಸಹಕರಿಸಿದ ಕುಟುಂಬದ ಸದಸ್ಯರಾದ ಸೀಮಾ ಮುಸ್ತಾಕ್ ಮತ್ತು ಆಸ್ಕಾ ಬೇಗ್‌ರನ್ನು ಗೋವಾ ರಾಜ್ಯದ ಮರಗಾಂವ್‌ನಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ.ಜಿಲ್ಲೆಯಲ್ಲಿನ ನಕಲಿ ನೋಟು ಜಾಲವನ್ನು ಪತ್ತೆಮಾಡಿ, ಅವರಿಂದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಎಸ್‌ಪಿ ಡಾ.ಸುಮನಾ ಡಿ.ಪೆನ್ನೇಕರ ಅವರು ಅಭಿನಂದಿಸಿ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.

Be the first to comment

Leave a Reply

Your email address will not be published.


*