ಕರೊನಾ ಆರ್ಥಿಕ ಸಂಕಷ್ಟದಿಂದ ವಿವಿಧ ಇಲಾಖೆಗಳಿಗೆ ಬರಬೇಕಾಗಿದ್ದ ಅನುದಾನಕ್ಕೆ ಬ್ರೇಕ್ ; ಹದಗೆಟ್ಟ ಗ್ರಾಮೀಣ ಭಾಗದ ರಸ್ತೆಗಳು 

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಶಿರಸಿ

ಪ್ರತಿ ವರ್ಷವೂ ಗ್ರಾಮೀಣ ಭಾಗದ ರಸ್ತೆಗಳ ನಿರ್ವಹಣೆಗೆ ಬರುತ್ತಿದ್ದ ಹಣ ಈ ವರ್ಷ ಮಳೆಗಾಲ ಆರಂಭವಾದರೂ ಸಹ ಬಾರದಿರುವುದು ಕಚ್ಚಾ ರಸ್ತೆಗಳು ನಿರ್ವಹಣೆ ಇಲ್ಲದೇ ಸಂಚಾರಕ್ಕೆ ತೊಂದರೆಯಾಗುತ್ತಿದೆ.‌ ಆದರೆ ಕೊರೊನಾದಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ವಿವಿಧ ಇಲಾಖೆಗಳಿಗೆ ಬರಬೇಕಾಗಿದ್ದ ಅನುದಾನಕ್ಕೆ ಬ್ರೇಕ್ ಬಿದ್ದಿದೆ. ಕೊರೊನಾ ಕಾರಣದಿಂದ ರಸ್ತೆಗಳ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ. ವಿವಿಧ ಯೋಜನೆಗಳ ಮುಖಾಂತರ ಅಭಿವೃದ್ಧಿ ಹಣ ಬರಬೇಕಾಗಿರುವುದಕ್ಕೆ ಬ್ರೇಕ್ ಬಿದ್ದಿರುವುದು ಸಂಚಾರಕ್ಕೆ ತೊಂದರೆಯಾಗಿದ್ದು, ಶೀಘ್ರದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

CHETAN KENDULI

ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಶಿರಸಿ ವಿಭಾಗ ವ್ಯಾಪ್ತಿಯ 6 ತಾಲೂಕುಗಳಲ್ಲಿ ಒಟ್ಟು 7947.30 ಕಿ.ಮೀ. ಗ್ರಾಮೀಣ ರಸ್ತೆಯಿದೆ. ಇದೆಲ್ಲದಕ್ಕೂ ಅಭಿವೃದ್ಧಿ ಹೊಂದಲು ಕೊರೊನಾ ಅಡ್ಡಿಯಾಗಿದ್ದು, ಅನುದಾನದ ಕೊರತೆ ಉಂಟಾಗಿದೆ. ಪ್ರತಿ ವರ್ಷವೂ ಜಿಲ್ಲಾ ಪಂಚಾಯತ್​ ಅಡಿ ಬರುವ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಸಿಎಂಜಿಎಸ್​ವೈ, ಟಾಸ್ಕ್ ಫೋರ್ಸ್​ ಶಾಸಕರ ವಿಶೇಷ ಅನುದಾನದ ಅಡಿ ಅನುದಾನ ಮಂಜೂರಾಗುತ್ತಿತ್ತು. ಆದರೆ, ಈ ಬಾರಿ ಸಿಎಂಜಿಎಸ್​ವೈ ಅಡಿ ಕೇವಲ 2 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ. ಕರೊನಾ ಸಂಕಷ್ಟದಿಂದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಶೀಘ್ರವಾಗಿ ಟೆಂಡರ್ ಕರೆದು ಶುರು ಮಾಡಲಾಗುವುದು ಎಂದು ತಿಳಿಸಿದ್ದಾರೆ. 

ಅಭಿವೃದ್ಧಿಪಡಿಸಲೂ ಸಹ ತೊಡಕಾಗಿದೆ. ಅದರಲ್ಲೂ ಶಿರಸಿ – ಸಿದ್ದಾಪುರ ಭಾಗದಲ್ಲಿ ಗ್ರಾಮೀಣ ಭಾಗದ ರಸ್ತೆಗಳು ಹೆಚ್ಚಿರುವ ಕಾರಣ ಅದರ ಅಭಿವೃದ್ಧಿ ಸರ್ಕಾರ ಆದಷ್ಟು ಶೀಘ್ರದಲ್ಲಿ ಎಚ್ಚೆತ್ತುಕೊಳ್ಳಬೇಕಿದೆ. ಈ ಬಾರಿ ಹಿಂದೆಂದೂ ಕಾಣದ ರೀತಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿತ್ತು. ಅದರಿಂದ ಗ್ರಾಮೀಣ ಭಾಗದ ಸಾವಿರಾರು ಕಿ.ಮೀ. ರಸ್ತೆಗಳು ಸಂಚಾರಕ್ಕೆ ಯೋಗ್ಯವಲ್ಲದಷ್ಟು ಹಾಳಾಗಿದೆ. ಅಲ್ಲದೇ ಮಳೆ ಮುಂದುವರೆದಿರುವ ಕಾರಣ ಸಣ್ಣ ಪುಟ್ಟ ಅಭಿವೃದ್ಧಿಪಡಿಸಲೂ ಸಹ ತೊಡಕಾಗಿದೆ. ವಿವಿಧ ಯೋಜನೆಗಳ ಮುಖಾಂತರ ಅಭಿವೃದ್ಧಿ ಹಣ ಬರಬೇಕಾಗಿರುವುದಕ್ಕೆ ಬ್ರೇಕ್ ಬಿದ್ದಿರುವುದು ಸಂಚಾರಕ್ಕೆ ತೊಂದರೆಯಾಗಿದೆ. ಕೊರೊನಾ ಕಾರಣದಿಂದ ರಸ್ತೆಗಳ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ. ಶೀಘ್ರದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

Be the first to comment

Leave a Reply

Your email address will not be published.


*