ಪಟ್ಟಣದ ರಾಷ್ಟ್ರೀಯ ಹೆದ್ದಾರಿಯೇ ಗಬ್ಬು ನಾರುತ್ತಿರುವುದು:ಅಧಿಕಾರಿಗಳೇ ಇತ್ತ ಕಡೆ ಗಮನ ಹರಿಸಿ..!!!

ವರದಿ: ಗ್ಯಾನಪ್ಪ ದೊಡ್ಡಮನಿ, ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ:

CHETAN KENDULI

ಪಟ್ಟಣದ ಮಧ್ಯ ಭಾಗದಲ್ಲಿರುವ ಮುಖ್ಯ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿಯು ದಿನ ನಿತ್ಯ ಹರಿಯುವ ಕೊಳಚೆ ನೀರಿನ ಬಗ್ಗೆ ಯಾರೊಬ್ಬ ಚುನಾಯಿತ ಜನ ಪ್ರತಿನಿಧಿಗಳಾಗಲಿ, ಮತ್ತು ಸಂಬಂಧಪಟ್ಟ ಅಧಿಕಾರಿಗಳಾಗಲಿ ಇದರ ಬಗ್ಗೆ ಸ್ವಲ್ಪವು ಗಮನವೇ ಹರಿಸುತ್ತಿಲ್ಲ. 

ಗಾಂಧೀಜಿಯ ಕನಸು ಸ್ವಚ್ಚಭಾರತ ಅಭಿಯಾನವನ್ನು ಪ್ರಧಾನ ಮಂತ್ರಿ ದೇಶದೆಲ್ಲಡೆ ಜಾರಿಗೆ ತಂದು ಇದೊಂದು ಸರ್ಕಾರಿ ಕಾರ್ಯಕ್ರಮವನ್ನಾಗಿ ಮಾಡಿದರು. ಈ ಕಾರ್ಯಕ್ರಮವನ್ನು ಸಾರ್ವಜನಿಕರಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮದ ಮೂಲಕ ಬೆಳ್ಳಂಬೆಳಿಗ್ಗೆ ಪೊರಕೆ ಮತ್ತು ಸಲಕೆಗಳನ್ನು ಹಿಡಿದು ಸ್ವಚ್ಚಮಾಡಿ ತೋರಿಸಿದರು.ಈ ಪಟ್ಟಣದ ಯಾವೊಬ್ಬ ನಾಗರೀಕನಾಗಲಿ, ಇದರ ಬಗ್ಗೆ ಸ್ವಲ್ಪ ಕೂಡ ಕಾಳಜಿವಹಿಸದೇ ಇರುವುದು ದುರಾದೃಷ್ಟಕರ ಸಂಗತಿಯಾಗಿದೆ.

ರಾಷ್ಟ್ರೀಯ ಹೆದ್ದಾರಿ ಪಟ್ಟಣದ ಮಧ್ಯ ಭಾಗದಲ್ಲಿ ಹಾದು ಹೋಗಿದೆ. ಇದರ ಜೊತೆಗೆ ದೂರದ ನಗರಗಳಿಗೆ ಸಂಚಾರ ಮಾಡುವ ವಾಹನಗಳು ದಿನ ನಿತ್ಯ ಈ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿಯಾಗಿದ್ದು,ಪಟ್ಟಣದ ವಿವಿಧ ಭಾಗಗಳಿಗೆ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಮಸ್ಕಿ ಪಟ್ಟಣಕ್ಕೆ ಮತ್ತು ಹೊರಗಿನಿಂದ ಸಾವಿರಾರು ಜನರು ಈ ರಸ್ತೆಯ ಮೂಲಕವೇ ಸಂಚಾರ ಮಾಡುವರು. ಆದರೆ ರಸ್ತೆ ಯಾವುದೋ ಕೊಳಚೆ ನೀರು ಹೋಗುವ ಚರಂಡಿ ಯಾವುದೋ ಎಂಬುದು ಅರ್ಥವಾಗದ ಸ್ಥಿತಿಯಲ್ಲಿದೆ.

ಪಟ್ಟಣದ ಎಲ್ಲಾ ವಾರ್ಡುಗಳಿಂದ ದಿನ ನಿತ್ಯ ಹರಿದು ಬರುವ ಕೊಳಚೆ ಚರಂಡಿ ನೀರು ರಸ್ತೆಯಲ್ಲೇ ಹೋಗಬೇಕು. ಮಳೆಗಾಲದಲ್ಲಿ ಚರಂಡಿ ಯಾವುದು ರಸ್ತೆ ಯಾವುದು ಎಂಬುದು ವಾಹನ ಸವಾರರಿಗೆ ಪಾದಚಾರಿಗಳಿಗೆ ಗೊತ್ತೆ ಆಗುವುದಿಲ್ಲ. ರಸ್ತೆಯ ತುಂಬಾ ಪಟ್ಟಣದಲ್ಲಿ ಕೊಳಚೆ ನೀರು ದುರ್ವಾಸನೆ ಬರುತ್ತಿದ್ದರು ಪಟ್ಟಣದ ನಾಗರೀಕರು ಅಲ್ಲಿಯೇ ಆಜು ಬಾಜು ಹೋಟೆಲ್ ಟೀ, ಕಾಫಿ, ತಿಂಡಿ ತಿನಿಸುಗಳನ್ನು ಯಾವುದೇ ಚಿಂತೆ ಇಲ್ಲದೆ ಉಪಯೋಗಿಸಿ ತಿಂದ ಪ್ಲಾಸ್ಟಿಕ್ ಲೋಟಗಳು ಕಾಗದಗಳನ್ನು ಅಲ್ಲಿಯೇ ಬಿಸಾಡುತ್ತಾರೆ.

ಈ ಎಲ್ಲಾ ಘನ ತಾಜ್ಯ ಕೊಳಚೆ ವಸ್ತುಗಳು ರಸ್ತೆಯಲ್ಲಿ ಹಾದು ಹೋಗಿರುವ ಕೊಳಚೆ ಚರಂಡಿ ನೀರು ಅಸಹ್ಯವಾಗಿ ಹರಿಯುತ್ತಿದ್ದರು, ಇಲ್ಲಿ ನಾಗರೀಕರು ಅಧಿಕಾರಿಗಳ ಗಮನಕ್ಕೆ ತಂದರು, ಏನು ಗೊತ್ತಿಲ್ಲದಂತೆ ವರ್ತಿಸುತ್ತಾರೆ. ಪಟ್ಟಣದ ಇಡೀ ಪ್ರದೇಶ ಸುಮಾರು 2 ರಿಂದ 3 ಕಿ.ಮೀ… ದೂರ ರಸ್ತೆ ಅಂಬೇಡ್ಕರ ವೃತ್ತ, ವಾಲ್ಮೀಕಿ ವೃತ್ತ, ಗಾಂಧಿಜಿ ವೃತ್ತ ಇನ್ನು ಮುಂತಾದ ಕಡೆ ಕೊಳಚೆ ನೀರಿನಿಂದ ಗೊಬ್ಬು ವಾಸನೆಯನ್ನು ಅಲ್ಲಿ ಹಾದು ಹೋಗುವ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಅಧಿಕಾರಿಗಳಿಗೆ ಶಾಪ ಹಾಕುವುದು ಮಾಮೂಲಿಯಾಗಿಬ್ಬಿಟ್ಟಿದೆ.

ತಾಲೂಕಿನಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಿದರೂ. ಈ ಅಶುಚಿತ್ವ ಬಗ್ಗೆ ಯಾವುದೇ ಕಾಳಜಿ ವಹಿಸುತ್ತಿಲ್ಲ ಎನ್ನುವುದು ಆ ಸ್ಥಳದಲ್ಲಿರುವ ಆ ದೃಶ್ಯಗಳನ್ನು ನೋಡಿದರೆ ಗೊತ್ತಾಗುತ್ತದೆ. ಈ ದುರ್ವಾಸನೆ ಚರಂಡಿ ಮುಂದೆ ಹೊಸದಾಗಿ ನಿರ್ಮಿಸುತ್ತಿರುವ ಪುರಸಭೆ ಹಾಗೂ ಕಾಲೇಜ್ ಅಂಚೆ ಕಚೇರಿ , ಇದೇ ರಸ್ತೆಯಲ್ಲಿಯೇ ಶಾಲಾ-ಕಾಲೇಜುಗಳಿಗೆ ಶಾಲೆಯಲ್ಲಿರುವ ನೂರಾರು ಮಕ್ಕಳು ಆ ಕೊಳಚೆ ನೀರಿನಲ್ಲಿ ಓಡಾಡುವ ಸ್ಥಿತಿ ಒದಗಿ ಬಂದಿದೆ. ಚುನಾಯಿತರಾಗಿರುವ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಿಗೆ ಸ್ವಲ್ಪವು ಗಮನಹರಿಸುತ್ತಿಲ್ಲ.

*ಸಮಸ್ಯೆ* 

ಮಳೆ ಬಂದರೆ ಸಾಕು ಹಾಗೂ ಪ್ರತಿನಿತ್ಯ ಇಲ್ಲಿ ನೀರು ನಿಂತು ಗಬ್ಬೆದ್ದು ನಾರುತ್ತಿದೆ ಶಾಲಾ ಕಾಲೇಜಿಗೆ ತೆರಳುವ ಮಕ್ಕಳಿಗೆ ಕೆಸರು ಸಿಡಿಯುತ್ತಿದ್ದು ಪುರಸಭೆಯು ವರಿಗೆ ಹೇಳಿದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಯಾರಾದರೂ ಮಣ್ಣನ್ನು ಹಾಕಿಸಿ ನಮ್ಮ ಸಿಬ್ಬಂದಿಗಳ ಬಂದು ಅದನ್ನು ಸರಿಪಡಿಸುವ ಕೆಲಸ ಮಾಡುತ್ತಾರೆ. ಎಂದು ಪುರಸಭೆ ಸಿಬ್ಬಂದಿ ನಾಗರಾಜ್ ಹೇಳುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ ಎಂದು ಸ್ಥಳೀಯರ ಆಕ್ರೋಶವಾಗಿದೆ.

ಹಲವಾರು ಸರ್ಕಾರಿ ಕಚೇರಿಗಳು ಅಕ್ಕಪಕ್ಕದಲ್ಲಿವೆ, ಅದರಲ್ಲು ಹೊಸದಾಗಿ ನಿರ್ಮಿಸುತ್ತಿರುವ ಪುರಸಭೆ ಸಹ ಪಕ್ಕದಲ್ಲಿದೆ. ಇಷ್ಟೊಂದು ಕೊಳಚೆ ದಿನ ನಿತ್ಯ ಪರಿಸರವನ್ನು ಹಾಳು ಮಾಡುತ್ತಿದ್ದರು ತಾಲೂಕ ಮಟ್ಟದ ಅಧಿಕಾರಿಗಳಿಗೆ ಇದರ ಅರಿವೇ ಇಲ್ಲ. ಈ ರಸ್ತೆ ಮತ್ತು ಚರಂಡಿ ದ್ವಂದ್ವ ನೀತಿಯಾಗಿದೆ. ಕಾರಣ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರುತ್ತಿಲ್ಲ. ಅದರ ಪಕ್ಕದಲ್ಲಿ ಚರಂಡಿ ನಿರ್ಮಿಸಲು ಅವರಿಗೆ ಜಾಗಸೇರುತ್ತಿಲ್ಲ.

ಲೋಕೋಪಯೋಗಿ ಇಲಾಖೆಯು ಸಹ ರಸ್ತೆ ಚರಂಡಿ ನೀರು ಸರಿ ಪಡಿಸುತ್ತಿಲ್ಲ, ಈ ರಸ್ತೆ ಮತ್ತು ಚರಂಡಿ ಪಟ್ಟಣದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸೇರಿದೆ. ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಇದರ ಬಗ್ಗೆ ಉದಾಸೀನ ನಿರ್ಲಕ್ಷೆ ಮನೋಭಾವವನ್ನು ಕಾಣಬಹುದಾಗಿದೆ.ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಇದಕ್ಕೆ ವ್ಯವಸ್ಥಿತ ಕಲ್ಪಿಸಿಕೊಡುತ್ತಾರೆಯೇ ಕಾದುನೋಡಬೇಕಾಗಿದೆ….?

Be the first to comment

Leave a Reply

Your email address will not be published.


*