ಲಿಂಗಸ್ಗೂರ: ತಾಲೂಕಿನಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (ನರೇಗಾ) ದುರುಪಯೋಗ ಪಡಿಸಿಕೊಳ್ಳುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು ತಾಲೂಕಿನ ರೋಡಲಬಂಡಾ ಯುಕೆಪಿ ಪಿಡಿಓ ಅಂದ ದರ್ಬಾರ್ ಜೋರಾಗಿ ನೆಡಿತ್ತಿದೆ.
ಉದ್ಯೋಗ ಖಾತ್ರಿ ಯೋಜನೆ ಎಂದರೆ ಸೂಚಿಸುವಂತೆ ಕೂಲಿ ಇಲ್ಲದ ಬಡ ಜನರಿಗೆ ಸರ್ಕಾರದಿಂದಲೇ ಕೆಲಸ ಕೊಟ್ಟು ಕೂಲಿ ಕೊಡುವುದು ಈ ಯೋಜನೆಯ ಉದ್ದೇಶ. ಆದರೆ ಗ್ರಾಮೀಣ ಭಾಗಗಳಲ್ಲಿ ಕೃಷಿಗೆ ಸಂಬಂಧಿಸಿದಂತೆ ರೈತರು ತಮ್ಮ ಜಮೀನುಗಳಲ್ಲಿ ಬದು, ಕಾಲುವೆ, ಗೋಗುಂಟೆಗಳು ಸೇರಿದಂತೆ ಕೆರೆಯಲ್ಲಿ ಹುಳು ತೆಗೆಯುವುದು ಕೃಷಿ ಹೊಂಡ ನಿರ್ಮಿಸಿಕೋಳ್ಳುವುದು ಇನ್ನಿತರ ಹಲವು ಕಾಮಗಾರಿಗಳನ್ನು ಈ ಯೋಜನೆಯಡಿ ಮಾಡಿಕೊಳ್ಳುವ ಅವಕಾಶವಿರುತ್ತೆ. ಆದರೆ ಆಗುತ್ತಿರುವುದೇ ಬೇರೆ. ರೋಡಲಬಂಡಾ ಯುಕೆಪಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಜನ ಕೂಲಿ ಇಲ್ಲವೆಂದು ದೂರದ ಗೋವಾ,ಬೆಂಗಳೂರು, ಮಂಗಳೂರು ಮತ್ತು ವಿವಿಧ ನಗರಗಳಿಗೆ ಕೂಲಿಗಾ ಹೋಗುತ್ತಿದ್ದಾರೆ.
ಸುಣಕಲ್ಲ ಗ್ರಾಮದಲ್ಲಿ ನರೇಗಾ ಕಾಮಗಾರಿ ಜೆಸಿಬಿ ಬಳಸಿ ಕೃಷಿ ಹೊಂಡ ಮಾಡಿದ ಕಾಮಗಾರಿ
ಮಾನವ ಕೂಲಿಗೆ ಕತ್ತರಿ: ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ರೋಡಲಬಂಡಾ ಯುಕೆಪಿ ಗ್ರಾಪಂ ವ್ಯಾಪ್ತಿಯ ಸುಣಕಲ್ಲ ಗ್ರಾಮದ ಸರ್ವೆ ನಂ ಹೋಲದಲ್ಲಿ ಕೃಷಿ ಹೊಂಡವನ್ನು ಜೆಸಿಬಿ ಯಂತ್ರದ ಮೂಲ ಕಾಮಗಾರಿ ಮಾಡಿಸಿ,ಹಣ ಲೂಟಿ ಮಾಡಿದ್ದಾರೆ,ಈ ಲೂಟಿಯಲ್ಲಿ ರೋಡಲಬಂಡಾ ಗ್ರಾಮ ಪಂಚಾಯತಿಯ ಪಿಡಿಓ ನೇರವಾಗಿ ಭಾಗಿಯಾಗಿದ್ದಾರೆ,14 ನೇ ಮತ್ತು 15 ನೇ ಹಣಕಾಸು ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿರುವ ಪಿಡಿಓ ರವರನ್ನು ಕೂಡಲೇ ಅಮಾನತು ಮಾಡಬೇಕು ಮತ್ತು ರೋಡಲಬಂಡಾ ಗ್ರಾಮ ಪಂಚಾಯತಿಯಲ್ಲಿ ನೇಡದಿರುವ ಅಕ್ರಮಗಳ ಬಗ್ಗೆ ಸಮಗ್ರ ತನಿಖೆಆಗಬೇಕಾಗಿದೆ. ಮಹಾತ್ಮಾ ಗಾಂದಿ ಉದ್ಯೋಗ ಖಾತರಿ ಯೋಜನೆಯು ಜಾಬ್‌ಕಾರ್ಡ್ ಹೊಂದಿರುವ ಜನರಿಗೆ ಕೆಲಸ ಕೊಟ್ಟು ಗ್ರಾಪಂ ಅಧಿಕಾರಿಗಳು ಖುದ್ದುಸ್ಥಳದಲ್ಲಿದ್ದು ಕೆಲಸ ಮಾಡಿಸಬೇಕು. ಆದರೆ ಗ್ರಾಪಂ ಪಿಡಿಓ ರವರೆ ಲೂಟಿತಕ್ಕೆ ನಿಂತಿರುವದು ವಿಪರ್ಯಾಸ ಕೃಷಿ ಹೊಂಡ ಕಾಮಗಾರಿಯನ್ನು ಜೆಸಿಬಿ ಯಂತ್ರದ ಮೂಲಕ ನಿರ್ವಹಿಸಿ,ಬಿಲ್ಲುಗಳನ್ನು ನೀಡಿದ್ದಾರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗ್ರಾಮದ ಜನರ ಉದ್ಯೋಗ ಖಾತರಿ ಕೂಲಿಕಾರರಿಗೆ ಹಾಕಿದ್ದಾರೆ ಕತ್ತರಿ.
40 ಲಕ್ಷ ರೂ.ವೆಚ್ಚದ ಕಾಮಗಾರಿ ದುರುಪಯೋಗ: ತಾಲೂಕಿನ ರೋಡಲಬಂಡಾ ಗ್ರಾಪಂ ವ್ಯಾಪ್ತಿಯ ರೋಡಲಬಂಡಾ, ರೋಡಲಬಂಡಾ ಯುಕೆಪಿ,ಜಂಗಿರಾಂಪುರ,ಜಂಗಿರಾಂಪುರ ತಾಂಡ,ಚಿಕ್ಕ ಉಪ್ಪೇರಿ, ಸುಣಕಲ್ಲ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಮಾಡುತ್ತಿರುವ 40 ಲಕ್ಷ ಮೌಲ್ಯದ ಕಾಲುವೆಗಳ ಸಿಲ್ಟ್ ಜೆಂಗಲ್ ಕಟ್ಟಿಂಗ್ (ಕಾಲುವೆ ಸ್ವಚ್ಚಗೋಳಿಸಿವ ಕಾಮಗಾರಿ) ಕಾಮಗಾರಿಯು ಸಂಪೂರ್ಣ ಕಳಪೆ ಮತ್ತು ಕಾಮಗಾರಿ ಮಾಡದೆ ಅನುದಾನ ದುರ್ಬಳಕೆಗೆ ಮಾಡಿಕೊಂಡಿದ್ದಾರೆ.ಈ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿದೆ
ಕಾನೂನು ಕ್ರಮ: ಈ ಕುರಿತು ಪ್ರತಿಕ್ರಿಯಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ , ಉದ್ಯೋಗ ಖಾತ್ರಿ ಯೋಜನೆಯಡಿಯ ಕಾಮಗಾರಿಗಳನ್ನು ಜೆಸಿಬಿ ಯಂತ್ರ ಬಳಕೆ ಮಾಡಿ ಕೆಲಸ ಮಾಡುವುದು ಕಾನೂನು ಬಾಹಿರ. ಆದ್ದರಿಂದ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ದೇಶದಲ್ಲಿ ಗ್ರಾಮೀಣ ಭಾಗದ ಜನರು ಪ್ರತಿದಿನ ಕೂಲಿಗಾಗಿ ಪರಿತಪಿಸುವುದನ್ನು ತಡೆಯುವ ಮತ್ತು ಕೂಲಿಗಾಗಿ ಗುಳ್ಳೆ ಹೋಗುದನ್ನು ತಡೆಯುವ ದೃಷ್ಟಿಯಿಂದ ವರ್ಷಕ್ಕೆ 150 ದಿನಗಳ ಕಾಲ ಬಡವರಿಗೆ ಕೂಲಿ ದೊರೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ನರೇಗಾ ಯೋಜನೆಯನ್ನು ಜಾರಿಗೆ ತಂದು ಪಂಚಾಯಿತಿ ವತಿಯಿಂದ ಹಲವು ರೀತಿಯ ಕಾಮಗಾರಿಗಳು ಮಾಡಲು ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಆದರೆ ತಾಪಂ ಅಧಿಕಾರಿಗಳ ನಿರ್ಲಕ್ಷದಿಂದ ಖಾತ್ರಿ ಯೋಜನೆಯನ್ನು ಗ್ರಾಮ ಪಂಚಾಯತಿ ಪಿಡಿಓಗಳು ಮತ್ತು ಜೆ ಇ ದುರುಪಯೋಗ ಪಡಿಸಿಕೊಂಡು ಬಡವರಿಗೆ ಅನ್ಯಾಯ ಮಾಡುತ್ತಿರುವುದು ತಾಲೂಕಿನ ಹಲವು ಗ್ರಾಪಂಗಳಲ್ಲಿ ಕಂಡುಬರುತ್ತಿರುವುದು ಖೇಧಕರ ಸಂಗತಿ.
ಮುಂದುವರಿದ ಕಾಮಗಾರಿ: ಗ್ರಾಮದಲ್ಲಿ ನರೇಗಾ ಯೋಜನೆ ದುರುಪಯೋಗದ ಬಗ್ಗೆ ಪಿಡಿಒ ಅಣತಿ ಎಂತೆ ನೇಡೆಯುತ್ತಿದು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.ಕ್ರಮ ಕೈಗೋಳಬೇಕಾ ಅಧಿಕಾರಿಗಳು ಕಣ್ಣ ಮುಚ್ಚಿ ಕುಳಿತಿರುವದರಿಂದ ಕಾಮಗಾರಿಗಳು ಮಾತ್ರ ನಡೆಯುತ್ತಲೇ ಇವೆ ರಾಯಚೂರು ಜಿಲ್ಲೆಯ ಪಂಚಾಯತಿ ರಾಜ್ಯ ಇಲಾಖೆಯ ಅಧಿಕಾರಗಳು ಗ್ರಾಮ ಪಂಚಾಯತಿಗಳಲ್ಲಿ ನೇಡೆಯುತ್ತಿರು ಅಕ್ರಮಗಳಿಗೆ ಕಡಿವಾಣ ಹಾಕಿ ಮಹಾತ್ಮ ಗಾಂದಿ ಕಂಡತಾ ಗ್ರಾಮ ಸ್ವರಾಜ್ಯ ಸಹಕಾರ ಗೋಳಿಸಬೇಕಾಗಿದೆ.
Be the first to comment