ರಾಜ್ಯ ಸುದ್ದಿಗಳು
ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಮುಂಬಾಗದಲ್ಲಿ ಸರ್ವಜನಿಕರು ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡಿರುವ ಕಾರಣ ತುರ್ತು ಸಂದರ್ಭಗಳಲ್ಲಿ ಬರುವ ಅಂಬುಲೆನ್ಸ್ ಸೇವೆಗೆ ಕಂಟಕ ಎದುರಾಗುವ ಸಮಸ್ಯೆ ಕಾಣುತ್ತಿದೆ ಪಾರ್ಕಿಂಗ್ ಮಾಡಿದ ಸಾರ್ವಜನಿಕರು ಯಾರೊಬ್ಬರೂ ಸಹ ತಮ್ಮ ವಾಹನ ತೆಗೆಯಲು ಮುಂದಾಗುತ್ತಿಲ್ಲ ಈ ಕುರಿತು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಹಾಗೂ ಆಡಳಿತ ವರ್ಗ ಕೂಡ ಗಮನ ಹರಿಸದಿರುವುದು ವಿಪರ್ಯಾಸಕ್ಕೆ ಕಾರಣವಾಗಿದೆ.
ಆಸ್ಪತ್ರೆ ನಿರ್ಮಾಣವಾಗಿ ಇಷ್ಟು ವರ್ಷ ಕಳೆದರೂ ಸಾರ್ವಜನಿಕರ ವಾಹನ ನಿಲುಗಡೆಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡದಿರುವುದು ಇದಕ್ಕೆ ಕಾರಣವಾಗಿದೆ.
ವಾಹನ ನಿಲುಗಡೆಯ ಬಗ್ಗೆ ಪ್ರಶ್ನೆ ಮಾಡಿದರೆ ಸಾರ್ವಜನಿಕರು ವಾಹನ ನಿಲ್ಲಿಸಲು ಜಾಗ ತೋರಿಸಿ ಎಂದು ಕೇಳುತ್ತಾರೆ .ಇನ್ನಾದರೂ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ , ಆಡಳಿತ ವರ್ಗ ಎಚ್ಚೆತ್ತುಕೊಂಡು ಸಾರ್ವಜನಿಕರ ವಾಹನ ನಿಲುಗಡೆಗೆ ಸರಿಯಾದ ವ್ಯವಸ್ಥೆ ಮಾಡಬೇಕು ಆಸ್ಪತ್ರೆ ಮುಂಭಾಗದಲ್ಲಿ ತುರ್ತು ಸೇವೆಗಳಿಗೆ ಮೀಸಲಿಟ್ಟ ವಾಹನಗಳಿಗೆ ಮಾತ್ರ ಪ್ರವೇಶ ಕಲ್ಪಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಅಂಬಿಗ ನ್ಯೂಸ್ ಆಶಿಸುತ್ತದೆ
Be the first to comment