ಮಾನವ ಹಕ್ಕುಗಳ ಪ್ರಚಾರ ವೇದಿಕೆ ಮಹಿಳಾ ಪ್ರತಿನಿಧಿಗಳ ಸಭೆ

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

ಮಾನವಹಕ್ಕುಗಳಿಗಾಗಿ ಹೋರಾಟ ನಡೆಸುವ ಮಾನವ ಹಕ್ಕುಗಳ ಪ್ರಚಾರ ವೇದಿಕೆಯ ರಾಜ್ಯಾಧ್ಯಕ್ಷರಾದ ಪಾಲ್ ಮುನಿರಾಜುರವರ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಭಾಗಗಳ ಮಹಿಳಾ ಪ್ರತಿನಿಧಿಗಳು ಸಂಘಟನೆಯ ಮುಂದಿನ ರೂಪುರೇಷೆಯನ್ನು ಕುರಿತು ಚರ್ಚಿಸಲು ಸಭೆ ಏರ್ಪಡಿಸಿದ್ದರು .

CHETAN KENDULI

ಕಳೆದ ಹಲವು ವರ್ಷಗಳಿಂದ ಮಾನವಹಕ್ಕುಗಳಿಗಾಗಿ ಹಾಗೂ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಹತ್ತು-ಹಲವು ಕಾರ್ಯಕ್ರಮಗಳನ್ನು ಮಾನವ ಹಕ್ಕುಗಳ ಪ್ರಚಾರ ವೇದಿಕೆ ಹಮ್ಮಿಕೊಂಡಿದ್ದು .21/3/2022ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಮಹಿಳಾ ಘಟಕದ ಪ್ರತಿನಿಧಿಗಳ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಸಂಘಟನೆಯ ಮುಂದಿನ ರೂಪು ರೇಷೆಗಳು ಹಾಗೂ ವಿಶೇಷ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ನೂತನ ಸದಸ್ಯರ ಸೇರ್ಪಡೆ ಕುರಿತು ಚರ್ಚಿಸಲಾಯಿತು.

ಮಾನವ ಹಕ್ಕುಗಳ ಪ್ರಚಾರ ವೇದಿಕೆಯರಾಜ್ಯಾಧ್ಯಕ್ಷರಾದ ಪಾಲ್ ಮುನಿರಾಜು ರವರು ಮಾತನಾಡಿ ನಮ್ಮ ಸಂಘಟನೆಯ ಮುಖ್ಯ ಉದ್ದೇಶ ಮಾನವ ಹಕ್ಕುಗಳ ಪ್ರಚಾರ ಹಾಗೂ ಸಮಾಜದಲ್ಲಿನ ಭ್ರಷ್ಟಾಚಾರದ ನಿರ್ಮೂಲನೆಗಾಗಿ ಶ್ರಮಿಸುವುದಾಗಿದೆ. ಸಮಾಜದ ಯಾವುದೇ ವ್ಯಕ್ತಿಗೆ ಅನ್ಯಾಯವಾದ ಸಂದರ್ಭದಲ್ಲಿ ಜಾತಿ ಮತ ಭೇದ ಭಾವಗಳಿಲ್ಲದೆ ನಮ್ಮ ಸಂಘಟನೆಯೂ ಮುಂದೆ ನಿಂತು ಹೋರಾಟ ಮಾಡಿ ನ್ಯಾಯ ದೊರಕಿಸುವಲ್ಲಿ ಶ್ರಮಿಸುತ್ತದೆ . ತಾಲೂಕಿನಾದ್ಯಂತ ಮಹಿಳಾ ಪ್ರತಿನಿಧಿಗಳ ಸೇರ್ಪಡೆ ಹಾಗೂ ಪದಾಧಿಕಾರಿಗಳ ಆಯ್ಕೆ ಕುರಿತು ಇಂದಿನ ಸಭೆಯಲ್ಲಿ ತಾಲ್ಲೂಕಿನ ಮಹಿಳಾಪ್ರತಿನಿಧಿಗಳೊಂದಿಗೆಸಮಾಲೋಚಿಸಲಾಯಿತು ಹಾಗೂ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಯಿತು ಎಂದು ತಿಳಿಸಿದರು.ಸಭೆಯಲ್ಲಿ ಮಾನವ ಹಕ್ಕುಗಳ ಪ್ರಚಾರ ವೇದಿಕೆಯ ರಾಜ್ಯಾಧ್ಯಕ್ಷರಾದ ಪಾಲ್ ಮುನಿರಾಜು, ಬಸವರಾಜು, ಹಾಗು ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಭಾಗಗಳ ಮಹಿಳಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*