ಯಾರ ಪಾಲಗಲಿದೆ 2023 ರ ಭಟ್ಕಳ-ಹೊನ್ನಾವರ ವಿಧಾನಸಭಾ ಬಿ.ಜೆ.ಪಿ ಟಿಕೆಟ್

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಭಟ್ಕಳ

CHETAN KENDULI

ಭಟ್ಕಳ- ವಿಧಾನಸಭಾ ಕ್ಷೇತ್ರದ 2023 ರ ಬಿ.ಜೆ.ಪಿ ಟೀಕೆಟಗಾಗಿ ಈಗಾಗಲೇ 2 ತಾಲೂಕಿನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಶುರುವಾಗಿದೆ.ತಾಲೂಕಿನ ಬಿಜೆಪಿ ಪಕ್ಷದಲ್ಲಿ ಈಗಾಗಲೇ ಹಾಲಿ ಶಾಸಕ ಸುನೀಲ್ ನಾಯ್ಕ ಅವರು ಕ್ಷೇತ್ರದಲ್ಲಿ ಕಳೆದ 4 ವರ್ಷಗಳಲ್ಲಿ ತಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು , ಮತ್ತೊಮ್ಮೆ ತಾನು ಬಿಜೆಪಿ ಟಿಕೆಟ್ ಪಡೆಯಲು ಬಿ.ಜೆ.ಪಿ ವರಿಷ್ಠರ ಗಮನ ಸೆಳೆಯಲು ಮುಂದಾಗಿದ್ದಾರೆ. ಮತ್ತೊಮ್ಮೆ ಬಿ.ಜೆ.ಪಿ ಹೈಕಮಾಂಡ್ ತನಗೆ ಆಶೀರ್ವದಿಸಿ ಟಿಕೆಟ್ ನೀಡುತ್ತಾರೆ ಎಂಬ ಭರವಸೆಯೊಂದಿಗೆ ತನ್ನದೆ ಆದ ಕಾರ್ಯಕರ್ತರ ಪಡೆಯೊಂದಿಗೆ ಹುಮ್ಮಸ್ಸಿನಿಂದ ಕ್ಷೇತ್ರದಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆಯಲ್ಲಿ ಓಡಾಡಿಕೊಂಡಿದ್ದಾರೆ.ಆದರೆ ಈಗಾಗಲೇ ಬಿ.ಜೆ.ಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜಿ ಅವರು ಈ ಬಾರಿ ಹಲವು ಹೊಸ ಮುಖಗಳಿಗೆ ಪಕ್ಷದಲ್ಲಿ ಟಿಕೆಟ್ ನೀಡಿ ಅವಕಾಶ ಮಾಡಿ ಕೊಡಲಾಗುವುದು ಎಂದು ಹೇಳಿಕೆ ನೀಡಿರುವುದು ಭಟ್ಕಳ ಬಿ.ಜೆ.ಪಿ ಪಕ್ಷದಲ್ಲಿ ಹಲವರಿಗೆ ಆಸೆ ಚಿಗುರಿದೆ.

      ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಟಿಕೆಟಗಾಗಿ ಹಾಲಿ ಶಾಸಕರಿಗೆ ಇನ್ನೊಬ್ಬ ಪ್ರಬಲ ಪ್ರತಿಸ್ಪರ್ದಿಯಾಗಿರುವವರು ಕಾಸ್ಕಾರ್ಡ್ ಬ್ಯಾಂಕಿನ ಮಾಜಿ ರಾಜ್ಯ ಉಪಾಧ್ಯಕ್ಷರು , ಹಾಲಿ ಉತ್ತರಕನ್ನಡ ಬಿ.ಜೆ.ಪಿ ಬಿ.ಸಿ.ಎಂ ಮೋರ್ಚಾದ ಪ್ರಭಾರ ಜವಾಬ್ದಾರಿ ವಹಿಸಿರುವ ಉದ್ಯಮಿ ಈಶ್ವರ್ ನಾಯ್ಕ ಮುರುಡೇಶ್ವರ.ಇವರು ಕಳೆದ ಬಾರಿ 2018 ರಲ್ಲಿ ಕೂಡ ಬಿ.ಜೆ.ಪಿ ಟಿಕೇಟ್ ಗಾಗಿ ಬಹಳವಾಗಿ ಪ್ರಯತಿಸಿದರು.ಕೊನೆ ಗಳಿಗೆಯಲ್ಲಿ ಇವರಿಗೆ ಕೈ ತಪ್ಪಿತು. ಈಶ್ವರ್ ನಾಯ್ಕ ಅವರು ಈ ಹಿಂದೆ ಎರಡು ಬಾರಿ ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿ ಆಗಿದ್ದರು.ಆಗಲೂ ಕೂಡ ಟಿಕೆಟ್ ಇವರಿಗೆ ಸಿಕ್ಕಿರಲಿಲ್ಲ. ಆದರು ಕೂಡ ಬೇಸರ ಮಾಡಿಕೊಳ್ಳದೆ ಈಶ್ವರ ನಾಯ್ಕ ಪಕ್ಷದ ಕಾರ್ಯಕರ್ತರೊಂದಿಗೆ ಸದಾ ಸಂಪರ್ಕದಲ್ಲಿ ಇದ್ದು ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಈ ಭಾರಿ ಕೂಡ ಈಶ್ವರ್ ನಾಯ್ಕ ತಮ್ಮದೇ ಆದ ಕಾರ್ಯಕರ್ತರ ಪಡೆಯೊಂದಿಗೆ ತನಗೆ ಬಿ.ಜೆ.ಪಿ ವರಿಷ್ಠರು ಟಿಕೆಟ್ ನೀಡುತ್ತಾರೆ ಎಂಬ ಭರವಸೆಯೊಂದಿಗೆ ಕ್ಷೇತ್ರದಾದ್ಯಂತ ಪಕ್ಷದ ಚಟುವಟಿಕೆಯಲ್ಲಿ, ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.

ಭಟ್ಕಳ -ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಟಿಕೆಟ್ ಗೆ ಇನ್ನೊಬ್ಬ ಪ್ರಬಲ ಆಕಾಂಕ್ಷಿ ಆಗಿರುವವರು ಹಿಂದುಪರ ಹೋರಾಟಗಾರ ಬಿ.ಜೆ.ಪಿ ಉತ್ತರಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದ ಗೋವಿಂದ ನಾಯ್ಕ ಹನುಮಾನ ನಗರ. ಇವರು ಹಲವು ದಶಕಗಳಿಂದ ಹಿಂದೂ ಪರ ಹೋರಾಟಗಾರರಾಗಿ ಕೆಲಸ ಮಾಡಿ, ಹಿಂದೂಗಳ ಹಿತರಕ್ಷಣಾಕ್ಕಾಗಿ ಹೋರಾಟ ಮಾಡಿ ,ಹಲವು ಬಾರಿ ಜೈಲುವಾಸ ಅನುಭವಿಸಿ, ಉತ್ತರಕನ್ನಡ ಜಿಲ್ಲೆಯಲ್ಲಿ ಬಿ.ಜೆ.ಪಿ ಪಕ್ಷ ಕಟ್ಟಿ ಬೆಳೆಸಿದವರು. ಗೋವಿಂದ ನಾಯ್ಕ ಅವರು ಈ ಹಿಂದೆ 2013 ರಲ್ಲಿ ಭಟ್ಕಳ ವಿಧಾನಸಭಾ ಬಿ.ಜೆ.ಪಿ ಅಭ್ಯರ್ಥಿಯಾಗಿ ಸ್ಪರ್ದಿಸಿ ಸುಮಾರು 15000 ಮತಗಳನ್ನು ಪಡೆದಿದ್ದರು.ಗೋವಿಂದ ನಾಯ್ಕ 2018 ರಲ್ಲೂ ಕೂಡ ಬಿ.ಜೆ.ಪಿ ಟಿಕೆಟ್ ಆಕಾಂಕ್ಷಿಯಾಗಿದ್ದುರು.ಕೊನೆ ಕ್ಷಣದಲ್ಲಿ ಇವರಿಗೆ ಟಿಕೆಟ್ ಕೈ ತಪ್ಪಿತು. ಆದರೂ ಕೂಡ ಬೇಸರ ಪಡೆದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂವರು ಬಿ.ಜೆ.ಪಿ ಮುಖಂಡರು ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಪ್ರಬಲ ನಾಮಧಾರಿ ಜಾತಿಗೆ ಸೇರಿದವರಾಗಿರುತ್ತಾರೆ.

ಸದ್ಯ ಬಿ.ಜೆ.ಪಿ ಜಿಲ್ಲಾ ಕಾರ್ಯದರ್ಶಿ ಮತ್ತು ಕಟ್ಟಡ ಮತ್ತು ಕಾರ್ಮಿಕ ನಿಗಮ ಮಂಡಳಿಯ ರಾಜ್ಯ ಸಮಿತಿಯ ಸದಸ್ಯರು ಆಗಿರುವ ಶ್ರೀಮತಿ ಶಿವಾನಿ ಶಾಂತರಾಂ ಅವರು 2018 ರಲ್ಲಿ ಭಟ್ಕಳ-ಹೊನ್ನಾವರ ಬಿ.ಜೆ.ಪಿ ಟೀಕೆಟ್ ಆಗಿ ಪ್ರಯತ್ನಿಸಿದರು. ಇವರಿಗೂ ಕೂಡ ಟಿಕೆಟ್ ಕೈ ತಪ್ಪಿತು. ಆದರೂ ಕೂಡ ಬೇಸರ ಪಡದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.ಒಂದೊಮ್ಮೆ ಈ ಬಾರಿ ಸಾಮಾನ್ಯ ಮತ್ತು ಮಹಿಳಾ ಮೀಸಲಾತಿ ಕೋಟಾದಲ್ಲಿ ಏನಾದರೂ ಪರಿಗಣಿಸಿ ಬಿ.ಜೆ.ಪಿ ಹೈಕಮಾಂಡ್ ಜಿಲ್ಲೆಯಲ್ಲಿ ಟೀಕೆಟ್ ನೀಡುವ ಸಂಭವ ಇದ್ದರೆ ಇವರು ಕೂಡ ಪ್ರಬಲ ಆಕಾಂಕ್ಷಿ ಆಗಿರುತ್ತಾರೆ. ಈ ನಾಲ್ವರಲ್ಲಿ ಯಾರು ಬಿಜೆಪಿ ಹೈಕಮಾಂಡ್ ಮನ ಗೆದ್ದು ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ -ಹೊನ್ನಾವರ ವಿಧಾನಸಭಾ ಬಿ.ಜೆ.ಪಿ ಅಭ್ಯರ್ಥಿ ಆಗುತ್ತಾರೆ ಕಾದುನೋಡಬೇಕು.

Be the first to comment

Leave a Reply

Your email address will not be published.


*