ಜಿಲ್ಲಾ ಸುದ್ದಿಗಳು
ಕೊರೋನಾ ಸೊಂಕಿನ ನಡುವೆಯೂ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶವು ಅತ್ಯುತ್ತಮವಾಗಿ ಪ್ರಕಟಗೊಂಡಿದ್ದು,ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ ಶ್ರೀ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ಅಕ್ಷತಾ ಆಸಂಗಿ ಶೇ.91.04 ಅಂಕಗಳಿಸಿ ಶಾಲೆಗೆ ಪ್ರಥಮಸ್ಥಾನ ಪಡೆದಿದ್ದಾಳೆ.
ಶಾಲೆಯ ಫಲಿತಾಂಶ ಶೇ.95.65 ಬಂದಿದ್ದು, ನೀಲಪ್ಪ ಕೊಡತಿ,ನೀಲಮ್ಮ ಗೋತಗಿ,ಸಿದ್ರಾಮಪ್ಪ ಪರೂತಿ ಶೇ.90.56ಅಂಕ ಪಡೆದು ಶಾಲೆಗೆ ದ್ವಿತೀಯ,ಶೃತಿ ಪತ್ತಾರ ಶೇ.88.32 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ವಿಷಯವಾರು ಪಲಿತಾಂಶದಲ್ಲಿ ಅಕ್ಷತಾ ಆಸಂಗಿ ಕನ್ನಡ-114, ಇಂಗ್ಲೀಷ-86, ಹಿಂದಿ-99, ಗಣಿತ-89, ವಿಜ್ಞಾನ-81, ಸಮಾಜವಿಜ್ಣಾನ-100 ಒಟ್ಟು 625 ಕ್ಕೆ 569 ಅಂಕಗಳನ್ನು ಪಡೆದಿದ್ದು,ಹಿಂದಿ ವಿಷಯದಲ್ಲಿ 4 ವಿದ್ಯಾರ್ಥಿಗಳು,ಸಮಾಜ ವಿಜ್ಞಾನ ವಿಷಯದಲ್ಲಿ 7 ವಿದ್ಯಾರ್ಥಿಗಳು100ಕ್ಕೆ 100 ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶ್ರೀಗಳಾದ ಡಾ.ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ,ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಮಹಾಂತೇಶ ಶೆಟ್ಟರ ಹಾಗೂ ಎಲ್ಲ ಆಡಳಿತ ಮಂಡಳಿಯ ಸದಸ್ಯರು,ಗ್ರಾಮದ ಹಿರಿಯರು,ಶಾಲೆಯ ಹಿತೈಸಿಗಳು, ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
Be the first to comment