ಜಿಲ್ಲಾ ಸುದ್ದಿಗಳು
ಪ್ರಸಕ್ತ ಮುಂಗಾರಿನ ಆರಂಭದಲ್ಲಿ ಕೃತಿಕಾ ಮಳೆ ಆರ್ಭಟಿಸಿದ್ದು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಪೂರ್ವ ಮುಂಗಾರು ಹಂಗಾಮಿನ ಕೃಷಿ ಬೆಳೆಗಳಿಗೆ ಉತ್ತಮವಾಗಿದೆ. ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರುವ ಸಾಧ್ಯತೆಗಳು ಕಂಡುಬರುತ್ತಿವೆ. ಪ್ರಸ್ತುತ ಇದುವರೆಗೆ ಜಿಲ್ಲೆಯಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು ಜಿಲ್ಲೆಯ ರೈತರು ಹರ್ಷದಿಂದಿದ್ದಾರೆ.
ಬಾಗಲಕೋಟೆ:ಜಿಲ್ಲೆಯಾದ್ಯಂತ ಈಗಾಗಲೆ ಪೂರ್ವ ಮುಂಗಾರು ಹಂಗಾಮಿನ ಬೆಳೆಗಳನ್ನು ರೈತರು ಬಿತ್ತನೆ ಮಾಡುತ್ತಿದ್ದು,ಎಲ್ಲಾ ಬೆಳೆಗಳು ಹುಲುಸಾಗಿ ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ.ಮುಂಗಾರು ಹಂಗಾಮಿನ ಕೃಷಿ ಬೆಳೆಗಳನ್ನು ಬಿತ್ತನೆ ಮಾಡಲು ರೈತರು ಭೂಮಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಶುರುವಾದ ಬೇಸಿಗೆ ಮಳೆಯ ಹಿಂದೆಯೇ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ,ತೇವಾಂಶಭರಿತ ಮೋಡಗಳ ಪರಿಣಾಮ ನಿರಂತರ ಮಳೆ ಸುರಿಯುತ್ತಿದೆ. ಮೇ ೧೮ರಿಂದ ಮತ್ತಷ್ಟೂ ಚುರುಕಾಗುವ ಸೂಚನೆ ಇತ್ತಾದರೂ ಒಂದುದಿನ ಮುಂಚಿತವಾಗಿ ಮಳೆಯ ಸ್ವರೂಪ ಹೆಚ್ಚಾಗಿದೆ.ಮೇ 18, 19 ರಂದು ಜಿಲ್ಲೆಯಲ್ಲಿ ಮಳೆಯ ಸ್ವರೂಪ ಮತ್ತಷ್ಟೂ ತೀವ್ರವಾಗುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
Be the first to comment