ಯಾದಗಿರಿ :- ಯಾದಗಿರಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಹಿಂದುಳಿದ ವರ್ಗದ ಜನಸಂಖ್ಯೆ ಇದ್ದು ಸರಕಾರದ ಯಾವುದೇ ಸೌಲಭ್ಯಗಳು ಹಿಂದುಳಿದ ವರ್ಗದ ಜನರಿಗೆ ತಲುಪುತ್ತಿಲ್ಲ ರಾಜ್ಯ ಸರ್ಕಾರ ಹಿಂದುಳಿದ ವರ್ಗದ ಜನರನ್ನು ಕಡೆಗಣಿಸುತ್ತಿದು ಹಿಂದುಳಿದ ವರ್ಗಗಳಿಗೆ ಸಿಗಬೇಕಾಗಿದ ಸ್ಥಳೀಯ ಸಂಸ್ಥೆ ಅಧಿಕಾರವನ್ನು ಕಸಿದುಕೋಳುತ್ತಿದೆ, ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿದ ತಾಲ್ಲೂಕ ಪಂಚಾಯತ ಮತ್ತು ಜಿಲ್ಲೆ ಪಂಚಾಯತ ಚುನಾವಣೆ ಮುಂದುಡಿ ಮೋಸ ಮಾಡುತ್ತಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಅಹಿಂದ ವರ್ಗದ ಮುಂಚೂಣಿ ನಾಯಕ ವಿಧಾನಸಭೆ ವಿರೋಧ ಪಕ್ಷ ನಾಯಕರಾದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರಾದ ಎಂ ಡಿ ನಾರಾಯಣ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಬಿ ಕೆ ಹರಿಪ್ರಸಾದ ಜೋತೆ ಚರ್ಚೆ ಮಾಡಲಾಯಿತು.
ಹಿಂದುಳಿದ ವರ್ಗವನ್ನು ಕಡೆಗಣಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಯಾದಗಿರಿ ಜಿಲ್ಲೆಯಾದ್ಯಂತ ಪ್ರತಿಭಟನೆಗಳ ಮಾಡಲು ನಿರ್ಧರಿಸಲಾಗಿತ್ತು ಎಂದು ಪ್ರದೇಶ ಕಾಂಗ್ರೆಸ್ ಹಿಂದುಳಿ ವರ್ಗಗಳ ರಾಜ್ಯ ಕಾರ್ಯದರ್ಶಿ ಭಂಡರಪ್ಪ ನಾಟಿಕಾರ ಹೇಳಿದರು
Be the first to comment