ರಾಷ್ಟ್ರೀಯ ಸುದ್ದಿಗಳು
ಗೋವಾ:
ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲಾ ಸುರಪುರ ತಾಲೂಕಿನ ಆಯ್.ಬಿ.ತಾಂಡಾದ ಅಂತರಾಷ್ಟ್ರೀಯ ಕರಾಟೆ ತರಬೇತುದಾರ ಗಂಗಾಧರ ಲಮಾಣಿ ಅವರಲ್ಲಿ ಕರಾಟೆ ತರಬೇತಿ ಪಡೆದ 17 ಜನ ಕರಾಟೆ ವಿದ್ಯಾರ್ಥಿಗಳಿಗೆ ಗೋವಾ ರಾಜ್ಯದ ಕಲಂಗುಂಡ ಬೀಚನಲ್ಲಿ ಬೇಲ್ಟ್ ವಿತರಣಾ ಪರೀಕ್ಷೆಯನ್ನು ಕರ್ನಾಟಕ ರಾಜ್ಯದ ಕರಾಟೆ ಶಿಕ್ಷಕರ ಸಂಘದ ರಾಜ್ಯ ವಕ್ತಾರ ಶಿವಕುಮಾರ ಶಾರದಳ್ಳಿ ಅವರು ತೆಗೆದುಕೊಂಡರು.
ಉಚಿತ ತರಬೇತಿ ನೀಡಿದ ಗಂಗಾಧರ:
ಕೊರೊನಾ ಹೆಮ್ಮಾರಿಯಿಂದ ದೇಶವೇ ಸಂಪೂರ್ಣ ಲಾಕ್ ಡೌನ್ ಆದ ಸಂದರ್ಭದಲ್ಲಿ ಉನ್ನತ ಮಟ್ಟದ ಕರಾಟೆ ತರಬೇತುದಾರ ಗಂಗಾಧರ ಲಮಾಣಿ ಅವರು ತಮ್ಮ ಸುತ್ತಮುತ್ತಲಿನ ಸುಮಾರು 80 ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಒಗ್ಗೂಡಿಸಿ ಅವರಿಗೆ ಉಚಿತವಾಗಿ ಕರಾಟೆ ತರಬೇತಿಯನ್ನು ನೀಡಿದ್ದರು. ಇದರ ಫಲವಾಗಿ 17 ವಿದ್ಯಾರ್ಥಿಗಳು ಕರಾಟೆ ಪಟುಗಳಾಗಿ ಹೊರಹೊಮ್ಮಿದ್ದಾರೆ.
ಕರ್ನಾಟಕ ರಾಜ್ಯದಲ್ಲಿಯೂ ಕರಾಟೆಗೆ ಮಹತ್ವ ನೀಡುವಂತಾಗಲಿ:
ಕರ್ನಾಟಕ ರಾಜ್ಯದಲ್ಲಿ ಹಿಂದೆ ದೆಹಲಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯದ ಪ್ರತಿಯೊಂದು ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿಯನ್ನು ಕಡ್ಡಾಯವನ್ನಾಗಿಸಲಾಗಿತ್ತು. ಆದರೆ ಕಳೆದ ೆರಡು ವರ್ಷಗಳಿಂದ ಸರಕಾರಿ ಶಾಲೆಗಳಲ್ಲಿ ಕರಾಟೆ ನಶಿಸಿ ಹೋಗುವಂತಾಗಿದ್ದು ಕೂಡಲೇ ಕರ್ನಾಟಕ ರಾಜ್ಯದ ಶಿಕ್ಷಣ ಸಚಿವರು ಇದರ ಬಗ್ಗೆ ಗಮನ ಹರಿಸಿ ಮತ್ತೆ ಸರಕಾರಿ ಶಾಲೆಗಳಲ್ಲಿ ಕರಾಟೆ ತರಬೇತಿಯನ್ನು ಪ್ರಾರಂಭಿಸಿ ರಾಜ್ಯದ ಕಡು ಬಡತನದಲ್ಲಿ ಜೀವನ ನಡೆಸುತ್ತಿರುವ ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಡಿಯಲ್ಲಿನ ಕರಾಟೆ ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕರಾಟೆ ಶಿಕ್ಷಕರು ರಾಜ್ಯ ಸಚಿವರಿಗೆ ಮನವಿ ಮಾಡಿದ್ದಾರೆ.
ಕರಾಟೆ ಪಟುಗಳು:
ಗಂಗಾಧರ ಲಮಾಣಿ ಕರಾಟೆ ತರಬೇತುದಾರರಿಂದ ತರಬೇತಿ ಪಡೆದ ಕರಾಟೆ ವಿದ್ಯಾರ್ಥಿಗಳಾದ ಪೂರ್ಣಿಮಾ ಜಿ. ರಾಠೋಡ, ಪೂಜಾ ಎಸ್. ಪವಾರ, ಜೈರಾಮ್ ಲಂಬಾಣಿ, ಸಚಿನ್ ಕೆ. ರಾಠೋಡ, ಬಸವರಾಜ ಎಂ. ಚವ್ಹಾಣ, ಅಮರೇಶ ಟಿ. ರಾಠೋಡ, ಕುಮಾರನಾಯಕ ಎನ್. ರಾಠೋಡ, ರಾಜು ಎಸ್. ಪವಾರ, ವೀರೇಶ ಎಚ್. ರಾಠೋಡ, ರವಿ ಟಿ. ಚವ್ಹಾಣ, ಆಕಾಶ ಪಿ. ಚವ್ಹಾಣ, ಪ್ರೇಮ ಎ. ಚವ್ಹಾಣ, ಗಣೇಶ ಬಿ. ಚವ್ಹಾಣ, ನಾಗರಾಜ ಪಿ. ರಾಠೋಡ, ಶಿವರಾಜ ಪಿ. ರಾಠೋಡ, ಸೂರಜ ಎನ್. ಜಾಧವ, ಉಮೇಶ ಜೆ. ಡಿಂದವಾರ ಕರಾಟೆ ಬೇಲ್ಟ ಪರೀಕ್ಷೆಯಲ್ಲಿ ಉತ್ತೀರ್ನ ಹೊಂದಿ ಕರಾಟೆ ಶಿಕ್ಷಕರಾಗಿದ್ದಾರೆ.
Be the first to comment