ಸತತ ಏಳು ವರ್ಷಗಳಿಂದ ಜಿಲ್ಲೆಯ ಅತ್ಯುತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹೆಗ್ಗಳಿಕೆಗೆ ಮಾತ್ರವಾದ ಕೇಸಾಪುರ ಶ್ರೀ ಸಂಗಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ…!!! ಡಿ.23 ರಂದು ಸಂಘದ ಮಹಾಸಭೆ

ವರದಿ: ಕಾಶೀನಾಥ ಬಿರಾದಾರ

ಶ್ರೀ ಸಂಗಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕೇಸಾಪುರ

ರಾಜ್ಯ ಸುದ್ದಿಗಳು

CHETAN KENDULI, NEWS EDITOR

ನಾಲತವಾಡ:

ನಾಲತವಾಡ ಗ್ರಾಮ ಸಮೀಪದ ಕೇಸಾಪೂರ ಗ್ರಾಮದ  ಶ್ರೀ ಸಂಗಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯನ್ನು ಡಿ.23 ರಂದು ಹಮ್ಮಿಕೊಳ್ಳಲಾಗಿದ್ದು ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಬಿ.ಬಿ. ತಳವಾರ ವಹಿಸಲಿದ್ದು ಪ್ರತಿಯೊಬ್ಬ ಸದಸ್ಯರು ಕಡ್ಡಾಯವಾಗಿ ಮಾಸ್ಕ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆರ್.ಬಿ. ಖಾನಾಪುರ ತಿಳಿಸಿದ್ದಾರೆ. 

                                                                    ಶ್ರೀ ಸಂಗಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕೇಸಾಪುರ

ಹೆಗ್ಗಳಿಕೆಗೆ ಪಾತ್ರವಾದ ಸಹಕಾರಿ ಸಂಘ:

ಇಪ್ಪತ್ತು ವರ್ಷಗಳ ಹಿಂದೆ ಪ್ರಾರಂಭಗೊಂಡು ಸತತ ಏಳು ವರ್ಷಗಳ ವರಿಗೆ ಜಿಲ್ಲೆಯ ಅತ್ಯುತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಂತಾ ಹೆಗ್ಗಳಿಕೆಗೆ ಕೇಸಾಪೂರ ಗ್ರಾಮದ ಸಂಗಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪಾತ್ರವಾಗಿದೆ.  ಕರೋನ ಸಂಕಷ್ಟದ ನಡುವೆಯೂ ಕೂಡಾ 2019-20 ನೇ ಆರ್ಥಿಕ ಸಾಲಿನಲ್ಲಿ 8.92 ಲಕ್ಷ ರು ಗಳು ನಿವ್ವಳ ಲಾಭವನ್ನು ಗಳಿಸಿದೆ.



 

ರೈತರ ಬಾಳಿಗೆ ದೀಪವಾಗಿರುವ ಸಂಘ:

ಕೇಸಾಪೂರ ಗ್ರಾಮದಲ್ಲಿ ಹುಟ್ಟಿಕೊಂಡಿರುವ ಸಹಕಾರಿ ಸಂಘವು ಕೇಸಾಪೂರ ಗ್ರಾಮ ಮಾತ್ರವಲ್ಲದೇ ಆಲೂರ ಗ್ರಾಮ ಪಂಚಾಯತ ಸೇರಿದಂತೆ ವಿವಿಧ ಗ್ರಾಮೀಣ ರೈತರಿಗೆ ಆರ್ಥಿಕವಾಗಿ ಸಹಾಯ ಹಸ್ತ ನೀಡಿದೆ. ಕೇವಲ ಗ್ರಾಮೀಣ ಪ್ರದೇಶವಲ್ಲದೇ ಮುದ್ದೇಬಿಹಾಳ, ನಾಲತವಾಡ ಪಟ್ಟಣದಲ್ಲಿರುವ ಕೆಲ ರೈತರ ಬಾಳಿನ ದೀಪವಾಗಿದ್ದು ಜನ ಮೆಚ್ಚಿನ ಸಹಕಾರಿ ಸಂಘವಾಗಿದೆ.

 

 

“ನಮ್ಮ ಸಂಘದಲ್ಲಿ ಸರಕಾರದಿಂದ ಹಾಗೂ ಸಹಕಾರಿಯಿಂದ ನೇರವಾಗಿ ರೈತರಿಗೆ ಒದಗಿಸಬೇಕಾದ ಯೋಜನೆ ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗುತ್ತಿದೆ. ಸಂಘದ ಸರ್ವ ಸದಸ್ಯರಿಂದ ಪ್ರತಿಯೊಂದು ಯೋಜನೆಯನ್ನು ಹಾಗೂ ಆರ್ಥಿಕ ಸೌಲಭ್ಯವನ್ನು ಚರ್ಚಿಸಿಯೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತಾ ಬರುತ್ತಿದ್ದು ಅತೀ ಹೆಚ್ಚು ಜನರು ನಮ್ಮ ಸಂಘಕ್ಕೆ ಹೆಚ್ಚಿನ ಬೆಂಬಲ ನೀಡಿದ್ದಾರೆ. ಈಗಾಗಲೇ ಸಂಘಕ್ಕೆ ಅತ್ಯುತ್ತಮ ಸಂಘವೆಂದು ಹೆಗ್ಗಳಿಕೆ ಪಾತ್ರವಾಗಿ. ಇದನ್ನು ಹೀಗೆಯೇ ಸರ್ವ ಸದಸ್ಯರ ವಿಶ್ವಾಸದೊಂದಿಗೆ ಮುಂದುವರೆಸಿಕೊಂಡು ಹೋಗಲಾಗುವುದು.”

-ಬಿ.ಬಿ.ತಳವಾರ, ಅಧ್ಯಕ್ಷರು, ಶ್ರೀ ಸಂಗಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕೇಸಾಪೂರ.

Be the first to comment

Leave a Reply

Your email address will not be published.


*