ಜಿಲ್ಲಾ ಸುದ್ದಿಗಳು
ಹೊನ್ನಾವರ
ರೋಟರಿ ಪಾರ್ಕ ಹೌಸ್ ಸಭಾಭವನ ಹೊನ್ನಾವರದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಂಗಳವಾರ ನಡೆಯಿತು.ಎಸ್. ಎಸ್. ಎಲ್.ಸಿ ಯಲ್ಲಿ ಸಾಧನೆ ಮಾಡಿದ ಹೊನ್ನಾವರದ 10 ವಿದ್ಯಾರ್ಥಿಗಳಿಗೆ ಹಾಗೂ ಸಿ.ಬಿ.ಎಸ್. ಇ ಯಲ್ಲಿ ಸಾಧನೆ ಮಾಡಿದ 3 ವಿದ್ಯಾರ್ಥಿಗಳಿಗೆ ಸನ್ಮಾನಮಾಡಿಗೌರವಿಸಲಾಯಿತು.ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹೊನ್ನಾವರ ರೋಟರಿ ಪಾರ್ಕ್ ಹೌಸ್ ನ ಅಧ್ಯಕ್ಷರಾದ ಸ್ಟೀಫನ್ ರೋಟ್ರಗೀಸ್ ಕಳೆದ 51 ವರ್ಷಗಳಿಂದ ನಮ್ಮ ರೋಟರಿ ಸಂಸ್ಥೆಯು ಎಸ್.ಎಸ್. ಎಲ್.ಸಿ ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಿದೆ. ಶೈಕ್ಷಣಿಕ ಕೊಡುಗಯ ಮೂಲಕ ಮುಂಚೂನಿಯ ರೋಟರಿ ಸಂಸ್ಥೆ ಕರೊನಾ ಭಯದ ನಡುವೆಯೂ ವಿಚಲಿತರಾಗದೆ ಎಸ್.ಎಸ್.ಎಲ್.ಸಿ ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯ ಮಾಡುತ್ತಿದೆ. ನಿಮ್ಮ ಈ ಸಾಧನೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ನಿವ್ರತ್ತ ಮುಖ್ಯೋಪಾಧ್ಯಾಯರಾದ ಎಚ್.ಎನ್.ಪೈ ಯವರು ಈ ಕಾರ್ಯಕ್ರಮವನ್ನು ಉದ್ದೇಶಿಸಿ ವಿದ್ಯಾರ್ಥಿ ಜೀವನ ಅಮೂಲ್ಯವಾದುದು , ಪ್ರತಿಯೊಬ್ಬರಲ್ಲೂ ವಿವಿಧ ರೀತಿಯ ಪ್ರತಿಭೆಗಳಿವೆ. ಪ್ರತಿಭೆಗೆ ತಕ್ಕ ಪ್ರೋತ್ಸಾಹ ಅಗತ್ಯ. ನಿಮ್ಮ ಶ್ರಮದಿಂದಲೇ ನೀವು ಅತ್ಯಂತ ಅಂಕ ಗಳಿಸಿದ್ದರೂ ಸಹ ಈ ಸಾಧನೆಯ ಹಿಂದೆ ಪಾಲಕರು ಹಾಗೂ ಶಿಕ್ಷಕರ ಮಾರ್ಗದರ್ಶನವು ಮೂಲ ಕಾರಣವಾಗಿರುತ್ತದೆ. ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಹೊನ್ನಾವರ ಪಟ್ಟಣ ಪಂಚಾಯತದ ಅಧ್ಯಕ್ಷರಾದ ಶಿವರಾಜ್ ಮೇಸ್ತ ಮಾತನಾಡಿ ಅನೇಕ ವರ್ಷಗಳ ಹಿಂದಿನಿಂದಲೂ ರೋಟರಿ ಸಂಸ್ಥೆ ಯು ಸಾಧನೆ ಮಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಾ ಬಂದಿದೆ. ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಾಗ ವಿವಿಧ ರೀತಿಯ ನಿಯಮಗಳ ಬಂಧನಕ್ಕೆ ಒಳಗಾಗಿ ಅಚಲವಾಗಿ ನಿಂತು ನಿಮ್ಮ ಗುರಿಯನ್ನು ತಲುಪಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ನೀವೂ ಕೂಡ ಇನ್ನೊಬ್ಬರನ್ನು ಗೌರವಿಸುವಂತಾಗಲಿ ಎಂದರು.
ಈ ವೇದಿಕೆಯಲ್ಲಿ ಉಪಸ್ತಿತರಿದ್ದ ಹೊನ್ನಾವರ ರೋಟರಿ ಸಂಸ್ಥೆಯ ಕಾರ್ಯದರ್ಶಿ ಮಹೇಶ್ ಕಲ್ಯಾಣಪುರ್ ಕಜಾಂಚಿ, ಡಿ.ಜೆ.ನಾಯ್ಕ, ಪ್ರಕಾಶ್ ರೋಟ್ರಗೀಸ್, ದಿನೇಶ್ ಕಾಮತ್, ಸೂರ್ಯಕಾಂತ ಸಾರಂಗ್, ಮಂಜುಳಾ ಗುರುರಾಜ್,ಜಿ.ಟಿ.ಹೆಬ್ಬಾರ್, ಡಿ.ಜೆ.ನಾಯ್ಕ, ಎಸ್.ಎಮ್. ಭಟ್, ನಸರುಲ್ಲಾ ಸಿದ್ಧಿಕ್ ಮತ್ತಿತರರು ಉಪಸ್ತಿತರಿದ್ದರು.
Be the first to comment