ಗುರುಪೂರ್ಣಿಮೆಯಲ್ಲಿ ಹಿರಿಯನ್ನು ಸ್ಮರಿಸೋಣ

ವರದಿ: ಹೈದರ್ ಸಾಬ್, ಕುಂದಾಣ

ಜಿಲ್ಲಾ ಸುದ್ದಿಗಳು 

ದೇವನಹಳ್ಳಿ

ಹಿಂದೂ ಸಂಪ್ರದಾಯದಲ್ಲಿ ಹಿರಿಯರನ್ನು ಗೌರವಿಸುವ ಪದ್ಧತಿ ರೂಢಿಯಲ್ಲಿದ್ದು, ಗುರು ಹಿರಿಯರಿಗೆ ಗೌರವ ನೀಡುವ ಈ ವಿಶೇಷ ಗುರು ಪೂರ್ಣಿಮೆಯ ದಿನದಲ್ಲಿ ಹಿರಿಯನ್ನು ಸ್ಮರಿಸುವ ಕೆಲಸ ಮಾಡಲಾಗುತ್ತಿದೆ ಎಂದು ವಿಶ್ವನಾಥಪುರ ಗ್ರಾಪಂ ಉಪಾಧ್ಯಕ್ಷ ವಿನಯ್‌ಕುಮಾರ್ ತಿಳಿಸಿದರು.ದೇವನಹಳ್ಳಿ ತಾಲೂಕಿನ ಸೀಕಾಯನಹಳ್ಳಿ ಗ್ರಾಮದ ಅವರ ನಿವಾಸದಲ್ಲಿ ಗುರುಪೂರ್ಣಿಮೆ ಅಂಗವಾಗಿ ಅವರ ಜನ್ಮನೀಡಿದ ಮೊದಲ ಗುರು ತಾಯಿ ಮುನಿತಾಯಮ್ಮ ಅವರ ಪಾದಗಳಿಗೆ ಪತ್ನಿಯೊಂದಿಗೆ ನಮನ ಸಲ್ಲಿಸಿ ಅವರು ಮಾತನಾಡಿದರು. ನಮಗೆ ವಿದ್ಯೆ ಹೇಳಿಕೊಟ್ಟ ಗುರುಗಳನ್ನು ನೆನೆಯಬೇಕು. ನಮಗೆ ಅಕ್ಷರ ಕಲಿಸಿದ ಮೊದಲ ಗುರು ಎಂದರೆ ಅದು ತಾಯಿಯಾಗಿದ್ದಾಳೆ. ತಾಯಿಯ ಋಣ ತೀರಿಸಲು ಇದೊಂದು ಅವಕಾಶವಾಗಿದೆ.

CHETAN KENDULI

ಸುಮಾರು ವರ್ಷಗಳಿಂದ ನಾವುಗಳು ಹಿರಿಯರಿಗೆ ಪಾದಪೂಜೆ, ಸಿಹಿ ಹಂಚಿ ಸಂಭ್ರಮಿಸುತ್ತೇವೆ. ಜತೆಗೆ ನಮ್ಮನ್ನು ತಿದ್ದಿ ತೀಡಿದ ಗುರುಗಳನ್ನು ಬೇಟಿ ನೀಡಿ ಅವರ ಆಶೀರ್ವಾದ ಪಡೆದುಕೊಳ್ಳುತ್ತೇವೆ. ಆಷಾಢ ತಿಂಗಳ ಹುಣ್ಣಿಮೆಯ ದಿನದಂದು ಗುರು ಪೂರ್ಣಿಮವನ್ನು ಆಚರಿಸಲಾಗುವುದು. ಇದರಲ್ಲಿ ಹಿರಿಯ ಆಶೀರ್ವಾದ ಪಡೆದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.ಈ ವೇಳೆಯಲ್ಲಿ ಗೃಹಿಣಿ ಮಮತಾ ವಿನಯ್‌ಕುಮಾರ್, ಹಿರಿಯರಾದ ಹನುಮಪ್ಪ, ಸಹೋದರರಾದ ನಂಜೇಗೌಡ ವಾಣಿಶ್ರೀ, ಕುಟುಂಬದವರು ಇದ್ದರು.

Be the first to comment

Leave a Reply

Your email address will not be published.


*