ಜಿಲ್ಲಾ ಸುದ್ದಿಗಳು
ಕುಮಟಾ
ಕಳೆದ ಮೂರು ವರ್ಷಗಳಿಂದ ಕುಮಟಾ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸಿದ್ದ ಆನಂದಮೂರ್ತಿ ಅವರು ಹೊನ್ನಾವರ ಠಾಣೆಗೆ ವರ್ಗಾವಣೆಯಾಗಿದ್ದಾರೆ.ಸದಾ ಹಸನ್ಮುಖಿಯಾಗಿದ್ದ ಪಿಎಸ್ಐ ಆನಂದಮೂರ್ತಿ ಅವರು ಕಳೆದ ಮೂರು ವರ್ಷಗಳಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಕುಮಟಾ ಜನತೆಯ ಪ್ರೀತಿ-ವಿಶ್ವಾಸ ಗಳಿಸಿದ್ದರು.
ಏನೇ ಪ್ರತಿಭಟನೆಯಾಗಲಿ, ಅಥವಾ ಕಾರ್ಯಕ್ರಮಗಳಾದರೂ ಸೂಕ್ತ ಬಂದೋಬಸ್ತ್ ಜೊತೆಗೆ ತಾಳ್ಮೆಯಿಂದ ವರ್ತಿಸುವ ಮೂಲಕ ಎಲ್ಲರ ವಿಶ್ವಾಸ ಗಳಿಸಿದ್ದರು. ಹಾಗೆಯೇ ಅನೇಕ ಅಪರಾಧ ಪ್ರಕರಣಗಳನ್ನು ಬೇಧಿಸಿ, ಸೈ ಎನಿಸಿಕೊಂಡಿದ್ದರು. ಅಕ್ರಮ ದಂಧೆಗಳನ್ನು ನಿಯಂತ್ರಣದಲ್ಲಿಡುವ ಜೊತೆಗೆ ಕುಮಟಾದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಇಂಥ ದಕ್ಷ ಅಧಿಕಾರಿ ಈಗ ಹೊನ್ನಾವರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ಗೋಕರ್ಣ ಠಾಣೆ ಪಿಎಸ್ಐ ನವೀನ ನಾಯ್ಕ ಅವರು ನೇಮಿಸಲಾಗಿದೆ.
Be the first to comment