ಜಿಲ್ಲಾ ಸುದ್ದಿಗಳು
ಕೋಟ
ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುನ ಕೊರಗ ಕಾಲೋನಿಯದಲ್ಲಿ ಡಿ. 27 ರಂದು ಕೊರಗ ಸಮುದಾಯದ ರಾಜೇಶ್ ಅವರ ಮೆಹಂದಿ ಕಾರ್ಯಕ್ರಮದಲ್ಲಿ ನಡೆದ ಪೊಲೀಸ್ ಹಲ್ಲೆ ಪ್ರಕರಣದಲ್ಲಿ ಬಾರಿಕೆರೆ ನಾಗರಾಜ್ ಪುತ್ರನ್ ನಾದ ನಾನು ಅಂದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದೇನೆ ಎಂದು ಉಲ್ಲೇಖವಾಗಿದೆ. ಇದು ಸತ್ಯಕ್ಕೆ ದೂರವಾದ ಮಾತು. ನಾನು ಆ ದಿನ ರಾತ್ರೆ 8 ಗಂಟೆಗೆ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ ಮದುಮಗನಿಗೆ ಶುಭ ಹಾರೈಸಿ ಮನೆಗೆ ಹೋಗಿರುತ್ತೇನೆ. ಇದೊಂದು ನನ್ನ ಬಗ್ಗೆ ಕಾಣದ ಕೈಗಳಿಂದ ನಡೆಸಿದ ಷಡ್ಯಂತ್ರವಾಗಿದೆ.
ನಾನು ಒಬ್ಬ ಬಡ ಕುಟುಂಬದವನು ಕಷ್ಟದಿಂದ ಮೇಲೆ ಬಂದವನು. ಎರಡು ಆಂಬುಲೆನ್ಸ್ ನ್ನು ಇಟ್ಟುಕೊಂಡು ದುಡಿಮೆ ಮಾಡಿಕೊಂಡಿದ್ದೇನೆ. ಅಲ್ಲದೆ ನಾನು ಒಬ್ಬ ಸಮಾಜಸೇವೆ ಮಾಡುವವನು ಎಷ್ಟೋ ಅಮಾಯಕರ ಜೀವ ಉಳಿಸಿದ್ದೇನೆ, ಅಲ್ಲದೆ ಅಪಘಾತವಾಗಲಿ, ಆತ್ಮಹತ್ಯೆ ಆಗಲಿ ನಾನು ತಕ್ಷಣ ಹೋಗಿ ಪೊಲೀಸರಿಗೆ ಸಹಾಯಕನಾಗಿ ನಿಂತವನು. ಅಷ್ಟೆಅಲ್ಲದೆ ಹಲವು ಬಾರಿ ಅಪಘಾತ ವಿಚಾರದಲ್ಲಿ ಪೊಲೀಸ್ ಸ್ಟೇಷನ್ ನಲ್ಲಿ ನಾನು ಸಾಕ್ಷಿ ಸಹಿ ಹಾಕಿದವನು. ಪೊಲೀಸರ ಮೇಲೆ ನಾನು ಅಷ್ಟೊಂದು ಗೌರವ, ಅಭಿಮಾನ ಇಟ್ಟವನು.ನಾನು ಪೊಲೀಸರ ಮೇಲೆ ಹಲ್ಲೆ ಮಾಡಿದ್ದೇನೆ ಎಂದು ಪೊಲೀಸರು ಆತ್ಮಸಾಕ್ಷಿಯಾಗಿ ಹೇಳಲಿ ನಾನು ಯಾವ ಶಿಕ್ಷೆಯೂ ಅನುಭವಿಸಲು ಸಿದ್ದನಿದ್ದೇನೆ. ಮಾಡದ ತಪ್ಪಿಗೆ ನನ್ನನ್ನು ಹಾಗೂ ನನ್ನ ತಮ್ಮನನ್ನು ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ ಸೇರಿಸಿದ್ದು ಇದು ಅನ್ಯಾಯ ಎಂದರು.
ಅಲ್ಲದೆ ಕಳೆದ ಬಾರಿ ನನಗೆ ಒದಗಿಬಂದ ಜಿಲ್ಲಾ ಪ್ರಶಸ್ತಿಯನ್ನು ತಪ್ಪಿಸಿದ ಅದೇ ಕಾಣದ ಕೈಗಳಿಂದ ಈ ಷಡ್ಯಂತ್ರ ನಡೆದಿರಬಹುದು. ಆದ್ದರಿಂದ ಈ ಪ್ರಕರಣಕ್ಕೆ ನನ್ನ ಹೆಸರು ಸೇರಿಸಿ ನನ್ನನ್ನು ತೇಜೋವದೆ ಮಾಡಲಾಗಿದೆ, ನಿರಪರಾಧಿಯಾದ ನನ್ನ ಹೆಸರು ಕೇಸಿನಿಂದ ತೆಗೆಯದಿದ್ದರೆ. ಮುಂದಿನ ದಿನಗಳಲ್ಲಿ ನಾನು ಪೊಲೀಸ್ ಸ್ಟೇಷನ್ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುದಾಗಿ ಜೀವನ್ ಮಿತ್ರ ನಾಗರಾಜ್ ಪುತ್ರನ್ ಮಾಧ್ಯಮದ ಮುಂದೆ ಹೇಳಿದರು.
Be the first to comment