ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರು ನೆನೆಯಬೇಕು

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಸಮಾಜದ ಬದಲಾವಣೆ ಮಾಡಲು ಎಲ್ಲಾ ಸಮುದಾಯದವರನ್ನು ಗಮನದಲ್ಲಿಸಿರಿಕೊಂಡು ಸಂವಿಧಾನ ರಚಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರು ನೆನೆಯುವಂತಾಗಬೆಕೆಂದು ನರೇಂದ್ರ ಮೋದಿಯವರು ಸಂವಿಧಾನ ಸಮರ್ಪಣ ದಿನವನ್ನು ದೇಶಾದ್ಯಂತ ಆಚರಿಸುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ಬಿಜೆಪಿ ಹಿರಿಯ ಮುಖಂಡ ಹಾಗು ಮಾಜಿ ಶಾಸಕ ಜಿ.ಚಂದ್ರಣ್ಣ ತಿಳಿಸಿದರು. ದೇವನಹಳ್ಳಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ತಾಲ್ಲೂಕು ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಸಮರ್ಪಣದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂಬೇಡ್ಕರ್ ಅವರು ಕೇವಲ ಎಸ್ಸಿ.ಎಸ್ಟಿ ಸಮುದಾಯವಲ್ಲದೆ ಎಲ್ಲಾ ಸಮುದಾಯದ ಏಳ್ಗೆಗಾಗಿ ಸಂವಿಧಾನ ರಚಿಸಿದರು ಅವರ ಹಾಕಿಕೊಟ್ಟಂತಹ ಸಂವಿಧಾನದ ಭದ್ರಭೂನಾದಿಯಲ್ಲಿ ನಾವೆಲ್ಲರು ಬದುಕುತ್ತಿದ್ದೇವೆ ಅಂತಹ ಮಾಹಾನ್ ವ್ಯಕ್ತಿಯನ್ನು ಪ್ರತಿಯೊಬ್ಬರು ನೆನೆಯಬೇಕೆಂದು ಕೇಂದ್ರ ಸರಕಾರ ಸಂವಿಧಾನ ಸಮರ್ಪಣ ದಿನವನ್ನು ಜಾರಿಗೆ ತಂದಿದೆ ಎಂದರು.ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ನಾರಾಯಣಗೌಡ ಮಾತನಾಡಿ ನರೇಂದ್ರ ಮೋದಿಯವರು ಅಂಬೇಡ್ಕರ್ ಅವರಿಗೆ ಗೌರವ ನೀಡುವ ಉದ್ದೇಶದಿಂದ ಸಂವಿಧಾನ ಸಮರ್ಪಣ ದಿನವನ್ನು ಜಾರಿಗೆ ತಂದಿದ್ದಾರೆ. ಎಲ್ಲಾ ವರ್ಗಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂವಿಧಾನವನ್ನು ರಚಿಸಿದ್ದಾರೆ. ಭಾರತ ದೇಶ ಪ್ರಜಾಪ್ರಭುತ್ವ ದೇಶ ಪ್ರಪಂಚಕ್ಕೆ ಮಾದರಿಯಾಗುವ ಸಂವಿಧಾನ ರಚಿಸಿದ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಜಾರಿಗೆ ತಂದ ದಿನವನ್ನು ಯಾವುದೇ ಸರಕಾರ ನೆನೆಯುತ್ತಿಲ್ಲ ಆದರೆ ಬಿಜೆಪಿ ಸರಕಾರ ಈ ಕಾರ್ಯಕ್ರಮ ಜಾರಿಗೆ ತಂದು ಪ್ರತಿಯೊಬ್ಬರು ಅವರನ್ನು ನೆನೆಯುವ ಕೆಲಸಮಾಡುತ್ತಿದೆ ಎಂದರು. ಬಿಜೆಪಿ ಎಸ್ಸಿಮೋರ್ಚ ರಾಜ್ಯ ಉಪಾಧ್ಯಕ್ಷ ಹನಮಂತಪ್ಪ ಮಾತನಾಡಿ 70 ವರ್ಷಗಳ ಕಾಲ ದೇಶವಾಳಿದ ಕಾಂಗ್ರೇಸ್ ಹೀನಯಾವಾಗಿ ನಡೆದುಕೊಂಡಿದೆ. ಸಂವಿಧಾನದಲ್ಲಿ ಯಾವುದೇ ಒಂದು ಸಮಾಜಕ್ಕೆ ಅನುಕೂಲವಾಗುವಂತೆ ಮಾಡದೆ ಎಲ್ಲಾ ಸಮುದಾಯಕ್ಕೆ ಸಮಾನ ಆಧ್ಯತೆ ನೀಡಿದ್ದಾರೆ.

CHETAN KENDULI

ಬಿಜೆಪಿ ಅಧಿಕಾರಕ್ಕೆ ಬಂದನಂತರ ಸಂವಿಧಾನಕ್ಕೆ ನೀಡುತ್ತಿರುವ ಗೌರವವನ್ನು ಕಾರ್ಯಕರ್ತರು ಪ್ರತಿಯೊಬ್ಬರಿಗು ತಿಳಿಸಬೇಕು. ಬಿಜೆಪಿ ರೈತಮೊರ್ಚ ಜಿಲ್ಲಾಧ್ಯಕ್ಷ ಎಚ್.ಎಂ.ರವಿಕುಮಾರ್ ಮಾತನಾಡಿ 70 ವರ್ಷ ಅಧಿಕಾರವಾಳಿದ ಕಾಂಗ್ರೇಸ್ ಪಕ್ಷ ಸಂವಿಧಾನ ಶಿಲ್ಪಿಯನ್ನು ಶಾಸ್ವತವಾಗಿ ನೆನೆಯುವ ಕೆಲಸಮಾಡಿಲ್ಲ ಆದರೆ ಬಿಜೆಪಿ ಸರಕಾರ ಅದನ್ನು ಮಾಡುತ್ತಿದೆ. ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸಬೇಕು. ಇತರೆ ಪಕ್ಷಗಳು ಕೇವಲ ಓಟ್ ಬ್ಯಾಂಕ್‌ಗಾಗಿ ಅಂಬೇಡ್ಕರ್ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಬಿಜೆಪಿ ಸಂವಿಧಾನ ಶಿಲ್ಪಿಯನ್ನು ಪ್ರತಿಯೊಬ್ಬರು ನೆನೆಯುವಂತಹ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಎಂದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುಂದರೇಶ್ (ಸುನಿಲ್) ಮಾತನಾಡಿ ಸಂವಿಧಾನದ ಮಹತ್ವವನ್ನು ಕಟ್ಟಕಡೆಯ ಪ್ರಜೆಗೆ ತಿಳಿಸುವ ಕೆಲಸ ನರೇಂದ್ರ ಮೊದಿಯವರು ಮಾಡುತ್ತಿದ್ದಾರೆ. ಇಂತಹ ಕೆಲಸವನ್ನು ಯಾವುದೇ ಪಕ್ಷದವರು ಇದುವರೆಗೆ ಮಾಡಿಲ್ಲ. ಸಂವಿಧಾನ ರಚಿಸಿದ ಮಹಾಪುರುಷನನ್ನು ಪ್ರತಿಯೊಬ್ಬರು ನೆನೆಯುವಂತೆ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದರು. ಇದೆ ವೇಳೆ ಎಸ್ಸಿಮೋರ್ಚ ಜಿಲ್ಲಾ ಕಾರ್ಯದರ್ಶಿ ಗಣೇಶ್ ಬಾಬು, ಎಸ್ಸಿಮೋರ್ಚ ತಾಲ್ಲೂಕು ಅಧ್ಯಕ್ಷ ಕುಂದಾಣ ಮುನಿರಾಜು, ಟೌನ್ ಅಧ್ಯಕ್ಷ ಸಂದೀಪ್, ಕಾರ್ಯದರ್ಶಿ ರವಿ, ಸಾಗರ್, ಭೂ ನಾಯಮಂಡಳಿ ಸದಸ್ಯ ಮುನಿಕೃಷ್ಣಪ್ಪ, ಕುಂದಾಣ ಮುನಿರಾಜು, ಬೂದಿಗೆರೆ ಮಂಜುನಾಥ್, ಚಂದ್ರಸಾಗರ್ ಸೇರಿದಂತೆ ಅನೇಕರು ಇದರು

Be the first to comment

Leave a Reply

Your email address will not be published.


*