ಜಿಲ್ಲಾ ಸುದ್ದಿಗಳು
ಕುಂದಾಪುರ
ಕುಂದಾಪುರ ಪುರಸಭೆಯ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಬುಧವಾರ ಕುಂದಾಪುರ ಪುರಸಭೆಯ ಸಾಮಾನ್ಯ ಸಭೆ ಜರುಗಿತು. ಸಾಮಾನ್ಯ ಸಭೆಯಲ್ಲಿ ಪುರಸಭೆ ಅಭಿವೃದ್ಧಿ ಚರ್ಚೆ, ಸಮಸ್ಯೆಗಳ ಪರಿಹಾರಕ್ಕಿಂತ, ಗಲಾಟೆಯಲ್ಲಿ ಕಾಲಹರಣವಾಗಿದೆ.ವಿರೋಧ ಪಕ್ಷದ ಸದಸ್ಯೆ ದೇವಕಿ ಪಿ.ಸಣ್ಣಯ್ಯ ಮಾತನಾಡಿ, ಸ್ಥಾಯಿ ಸಮಿತಿ ಆಯ್ಕೆ, ಟೆಂಡರ್ ಕರೆಯದೆ ಕಾಮಗಾರಿ ನಡೆಸಿರುವ ಬಗ್ಗೆ ಡಿಸಿಗೆ ದೂರು ನೀಡಲಾಗಿದ್ದು, ನಗರಾಭಿವೃದ್ಧಿ ಕೋಶದ ಪಿಡಿ ತನಿಖೆ ಮಾಡಿ ನೀಡಿದ ವರದಿ ಪ್ರತಿಗೆ ಒತ್ತಾಯಿಸಿದ್ದು, ಆಡಳಿತ ವಿರೋಧಿ ಸದಸ್ಯರ ನಡುವೆ ಗಲಾಟಿಗೆ ಕಾರಣವಾಯಿತು. ಸ್ಥಾಯಿ ಸಮಿತಿ ಆಯ್ಕೆ ಹಿನ್ನೆಲೆಯಲ್ಲಿ ಸಣ್ಣಪುಟ್ಟ ದೋಷಗಳಿದ್ದು, ಸರಿಪಡಿಸಿಕೊಂಡು ಹೋಗುವ ನಿರ್ಣಯ ಕೂಡಾ ಆಗಿದ್ದು, ಅದನ್ನು ದೊಡ್ಡ ಸಂಗತಿ ಮಾಡದೆ ಪುರಸಭೆ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಸಹಕಾರ ನೀಡುವಂತೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಮನವಿ ಮಾಡಿದರೂ, ಸದಸ್ಯರ ಗಲಾಟೆ ಶಾಂತವಾಗಲಿಲ್ಲ
ವಿರೋಧ ಪಕ್ಷದ ಸದಸ್ಯ ಚಂದ್ರಶೇಖರ್ ಖಾರ್ವಿ ಪ್ರತಿಕ್ರಿಯಿಸಿ, ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ನನ್ನ ವಿರೋಧವಿಲ್ಲ. ಆದರೆ ಆಗ ಉಳಿದ ವಿಪಕ್ಷ ಸದಸ್ಯರು ಅದಕ್ಕೆ ಧ್ವನಿ ಗುಡಿಸದ್ದೆ ಇದ್ದದ್ದು ವಿಪರ್ಯಾಸವೇ ಸರಿ. ವಿಪಕ್ಷದ ಹಿರಿಯ ಮುಖಂಡರು ನೇಮಕ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು. ಈ ನಡುವೆ ಸದಸ್ಯರಾದ ಶ್ರೀಧರ್, ನಿತ್ಯಾನಂದ ಕೆ.ಜೆ. ಆಡಳಿತ ಸದಸ್ಯರಾದ ಪ್ರಭಾಕರ.ವಿ, ರಾಘವೇಂದ್ರ ಖಾರ್ವಿ, ಆಶ್ವಿನಿ, ವಿನಿತಾ, ಶ್ವೇತಾ, ರೋಹಿಣಿ ವಿಪಕ್ಷ ಸದಸ್ಯರ ಹೇಳಿಕೆ ಖಂಡಿಸಿದರು. ನಾಮನಿರ್ದೇಶಕ ಸದಸ್ಯರಿಗೆ ದೇವಕಿ ಸಣ್ಣಯ್ಯ ಏಕವಚನದಲ್ಲಿ ಮಾತನಾಡಿದ್ದು ಅಲ್ಲದೆ, ಸಭೆಯಲ್ಲಿ ಚರ್ಚಿಸಲಿಕ್ಕೆ ನೀವ್ಯಾರು ಎಂದು ಕೇಳಿದ್ದಾರೆ.
ಸಭೆಯಲ್ಲಿ ನಮಗೆ ಚರ್ಚಿಸಲು ಅವಕಾಶ ಇದೆಯಾ ಇಲ್ಲವಾ? ನಾವು ಸುಮ್ಮನೆ ಚಾ ಕುಡಿಯುವುದಕ್ಕೆ ಬರಬೇಕಾ. ನಮ್ಮನ್ನು ಏಕವಚನದಲ್ಲಿ ಸಂಬೋಧನೆ ಮಾಡಿದ್ದು ಹಿಂದಕ್ಕೆ ಪಡೆದು ಕ್ಷಮೆ ಕೇಳಬೇಕು. ಅಲ್ಲಿಯ ತನಕ ಸಭೆಯಲ್ಲಿ ನಿಂತು ಪ್ರತಿಭಟನೆ ಮಾಡುತ್ತೇವೆ ಎಂದು ನಾಮನಿರ್ದೇಶಕ ಸದಸ್ಯರಾದ ಪುಷ್ಪಾ ಶೇಟ್, ದಿವಾಕರ ಕಡ್ಗಿ , ನಾಗರಾಜ ಕಾಂಚನ್, ಪ್ರಕಾಶ್ ಖಾರ್ವಿ, ರತ್ನಾಕರ ಶೇರೆಗಾರ್ ಪ್ರತಿಭಟನೆ ನಡೆಸಿದ ನಂತರ ನಾಮನಿರ್ದೇಶಕ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಸಣ್ಣಪುಟ್ಟ ಲೋಪದೇಷಗಳ ಸರಿಪಡಿಸಿಕೊಂಡು ಪುರಸಭೆ ಅಭಿವೃದ್ಧಿಗೆ ಒತ್ತುಕೊಡೋಣ. ಎಲ್ಲರೂ ಸಹಕಾರ ನೀಡಿದರೆ ಮಾತ್ರ ಕೆಲಸ ಮಾಡಲು ಸಾಧ್ಯ ಎಂದು ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಸಲಹೆ ನಂತರ ಸಭೆ ಮುಂದುರಿಯಿತು. ವಿರೋಧ ಸದಸ್ಯೆ 50 ಲಕ್ಷ ರೂ ಕಾಮಗಾರಿ ಟೆಂಡರ್ ಕರೆಯದ ನಡೆಸಲಾಗಿದೆ ಎಂಬ ಪತ್ರಿಕಾ ಹೇಳಿಕೆ ಮತ್ತೊಮ್ಮೆಗಲಾಟೆಗೆ ವೇದಿಕೆ ಆಗಿದ್ದು, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ದೇವಾಡಿಗ ವೇದಿಕೆಯಿಂದ ಇಳಿದು ಹೇಳಿಕೆ ಖಂಡಿಸಿದರು.
ಇನ್ನೇನು ಸಾಮಾನ್ಯ ಸಭೆ ಮುಗಿದ್ದು ಮಾಧ್ಯಮ ಮಿತ್ರರಲ್ಲಿ ತೆರಳಿದ ನಂತರ, ಪುರಸಭೆ ಸದಸ್ಯರಾದ ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಪುರಸಭೆ ಸದಸ್ಯರೊಬ್ಬರ ಕಣ್ಸನ್ನೆ ಮೇರೆಗೆ ಚಂದ್ರಶೇಖರ್ ಖಾರ್ವಿ ನಮ್ಮ ಪುರಸಭೆಯ ಸತ್ಯ ಎನ್ನುವ ಸಿಬ್ಬಂದಿ ಅಧ್ಯಕ್ಷರಿಗೆ ದೂರು ನೀಡಿದ್ದಾರೆ ಅವರಿಗೆ ನಾವೆಲ್ಲ ಬೆಂಬಲ ಸೂಚಿಸಬೇಕು ಎನ್ನುವ ಮಾತಿನೊಂದಿಗೆ ಶುರುಮಾಡಿ ಪತ್ರಕರ್ತ ಕಿರಣ್ ಪೂಜಾರಿಯ ವೈಯಕ್ತಿಕ ವಿಷಯವನ್ನು ಮತ್ತು ಪತ್ರಕರ್ತನ ಬಗ್ಗೆ ಅಲ್ಲ ಸಲ್ಲದ ಮಾತುಗಳನ್ನು ಆಡಿದಲ್ಲದೆ, ಕಟ್ಟುಕತೆಗಳನ್ನು ಹೇಳಿದ್ದಲ್ಲದೇ ಪ್ರಭಾಕರ್ ವಿ ಅವರು ಇತ್ತೀಚಿಗೆ ಕುಂದಾಪುರ ಸ್ಟೇಷನ್ನಿಂದ ಕಿರಣ್ ಪೂಜಾರಿ ಅವರನ್ನು ಡಾಕ್ಟರ್ ಕೇಸ್ ನಿಂದ ಬಿಡಿಸಿಕೊಂಡು ಬಂದಿದ್ದಾರೆ ಎಂದಿದ್ದು ಹಾಸ್ಯಸ್ಪದ ಎನಿಸಿದೆ, ಸತ್ಯಾಂಶ ಏನೂ ತಿಳಿಯದೆ ಬೇಕಾಬಿಟ್ಟಿ ಮಾತನಾಡಿದ್ದು ಪುರಸಭೆ ಸದಸ್ಯರನ್ನು ಮುಜುಗರಕ್ಕೆ ಒಳಪಡಿಸಿದೆ ಎಂದಿದ್ದಾರೆ ಸದಸ್ಯರು. ಬೇಕಾಬಿಟ್ಟಿ ಮಾತನಾಡುವ ಚಂದ್ರಶೇಖರ್ ಖಾರ್ವಿ ಈತನ ಎಷ್ಟು ಸಾಚಾ ಅನ್ನೋದು ಪ್ರಶ್ನಿಸಿಕೊಳ್ಳಬೇಕು ಸಾಮಾನ್ಯ ಸಭೆಯಲ್ಲಿ ಸ ಬಗ್ಗೆ ಸಂಬಂಧಪಟ್ಟ ವಿಷಯವನ್ನು ಬಿಟ್ಟು ಪತ್ರಕರ್ತ ಕಿರಣ ಪೂಜಾರಿ ಭವಿಷ್ಯವನ್ನು ಮಾತನಾಡಿದ್ದು ಈತನೊಬ್ಬ ಪುರಸಭೆ ಸದಸ್ಯರ ಆರನೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಗಿರೀಶ್ ದೇವಾಡಿಗ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹಾಜರಿದ್ದರು.
Be the first to comment