ದೀಪಾವಳಿ ಹಬ್ಬಕ್ಕೆ ಖಾಸಗಿ ಬಸ್​ಗಳಿಂದ ಬೇಕಾಬಿಟ್ಟಿ ದರ ವಸೂಲಿ..! ಕುಟುಂಬ ಸಮೇತ ಊರಿಗೆ ಹೋಗೋಕೆ ಬೇಕು ತಿಂಗಳ ಸ್ಯಾಲರಿ…!

ವರದಿ ಆಕಾಶ್ ಚಲವಾದಿ ಬೆಂಗಳೂರು ಹೆಡ್

ರಾಜ್ಯ ಸುದ್ದಿಗಳು 

 

ಬೆಂಗಳೂರು

CHETAN KENDULI

ಖಾಸಗಿ ಬಸ್​​ಗಳು ಹಬ್ಬದ ಸೀಸನ್​ನಲ್ಲಿ ಮತ್ತೆ ವಸೂಲಿಗಿಳಿದಿದ್ದು, ಕುಟುಂಬ ಸಮೇತ ಊರಿಗೆ ಹೋಗೋಕ್ಕೆ ತಿಂಗಳ ಸ್ಯಾಲರಿ ಬೇಕು. ದೀಪಾವಳಿ ಹಬ್ಬಕ್ಕೆ ಖಾಸಗಿ ಬಸ್​ಗಳಿಂದ ಬೇಕಾಬಿಟ್ಟಿ ದರ ವಸೂಲಿ ಮಾಡುತ್ತಿದ್ಧಾರೆ. ಖಾಸಗಿ ಬಸ್ ಟಿಕೆಟ್ ದರ ನಾಲ್ಕೈದು ಪಟ್ಟು ಹೆಚ್ಚಾಗಿದೆ.ಹಬ್ಬದ ರಜೆ ಹಿನ್ನೆಲೆ ಊರಿಗೆ ಹೊರಟಿರುವ ಜನರಿಂದ ಸುಲಿಗೆ ಮಾಡುತ್ತಿದ್ಧಾರೆ. ಶನಿವಾರದಿಂದ – ಗುರುವಾರದ ತನಕ ನಿರಂತರ ರಜೆಯಿದೆ. ವಿಮಾನ ದರಕ್ಕೆ ಸರಿಸಮನಾಗಿ ಖಾಸಗಿ ಬಸ್ ಟಿಕೆಟ್ ದರವಿದೆ. ಬೆಂಗಳೂರಿನಿಂದ – ಹುಬ್ಬಳ್ಳಿಗೆ ಸಾಮಾನ್ಯ ದರ 650-700 ರೂ, ಇದೀಗ ಹಬ್ಬಕ್ಕೆ 1700 – 2500 ರೂಪಾಯಿ ಹೆಚ್ಚಳ ಮಾಡಿದ್ಧಾರೆ. ಬೆಂಗಳೂರು – ಬೆಳಗಾವಿ- ಸಾಮಾನ್ಯ ದರ – 750-850 ರೂ.ಬೆಂಗಳೂರು – ಬೆಳಗಾವಿಗೆ 2100-3500 ರೂ. ಏರಿಕೆಯಾಗಿದೆ.

Be the first to comment

Leave a Reply

Your email address will not be published.


*