ಜಿಲ್ಲಾ ಸುದ್ದಿಗಳು
ಕಾರವಾರ
ಕೋವಿಡ್-೧೯ ಸಾಂಕ್ರಾಮಿಕ ಸಂದರ್ಭದಲ್ಲಿ ಜಿಲ್ಲೆಯ ಗುತ್ತಿಗೆದಾರರೆಲ್ಲರು ಕೆಲಸವಿಲ್ಲದೇ ಬಹಳ ತೊಂದರೆಯನ್ನು ಅನುಭವಿಸುತಿದ್ದು ಈಗ ಕೆಲವು ಇಲಾಖೆಗಳ ಕಾಮಗಾರಿಗಳ ಟೆಂಡರ್ ಆಹ್ವಾನಿಸಲಾಗುತ್ತಿದ್ದು, ಗುತ್ತಿಗೆದಾರರ ಸಮಸ್ಯೆ ಪರಿಹಾರಕ್ಕಾಗಿ ಗುತ್ತಿಗಾರ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಲಾಯಿತು.
ಈ ವೇಳೆ ಕೆಲಸವಿಲ್ಲದೆ ಗುತ್ತಿಗೆದಾರರು ಬಹಳ ತೊಂದರೆಯನ್ನು ಅನುಭವಿಸುತಿದ್ದು ಜಿಲ್ಲೆಯ ಗುತ್ತಿಗೆದಾರರೆಲ್ಲರು ಟೆಂಡರ್ ಪ್ಯಾಕೇಜ್ ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ಸಹ ನಡೆಸಿದ್ದರು. ಸರಕಾರದ ಕಾರ್ಯದರ್ಶಿಗಳು,ಲೋಕೋಪಯೋಗಿ ಇಲಾಖೆ ಪ್ಯಾಕೇಜ್ ಟೆಂಡರ್ ಮಾಡುವುದನ್ನು ಹಿಂಪಡೆಯಲಾಗುವುದೆಂದಿಂದು ನವೆಂಬರ್ ನಲ್ಲಿ ನಡೆದ ಗುತ್ತಿಗೆದಾರರ ಸಭೆಯಲ್ಲಿ ಗುತ್ತಿಗೆದಾರರಿಗೆ ಭರವಸೆ ನೀಡಲಾಗಿತ್ತು.ಆದರೆ ಈಗ ಕಾರವಾರ ನಗರಸಭೆಯಡಿಯಲ್ಲಿ ನಗರೋತ್ಥಾನ ಹಂತ-3 ಯೋಜನೆಯಡಿಯಲ್ಲಿ ಕಾರವಾರ ನಗರ ಸಭೆಯಡಿಯಲ್ಲಿ ೧೨೯೪.೯೨ ಲಕ್ಷ ಅನುದಾನ ಬಿಡುಗಡೆಯಾಗಿದ್ದು ಸರಿ ಸುಮಾರು ೩೯ ಸಂಖ್ಯೆಯ ಕಾಮಗಾರಿಗಳಿಗೆ ಮುಂಜೂರಾತಿ ಸಿಕ್ಕಿದ್ದು ಇಷ್ಟು ಮೊತ್ತದ ಒಟ್ಟು ಕಾಮಗಾರಿಗಳನ್ನು ಒಟ್ಟುಗೂಡಿಸಿ ಪ್ಯಾಕೇಜ್ ಮಾಡಿ ಒಂದೇ ಟೆಂಡರ್ ಕರೆಯಲು ಪೌರಾಡಳಿತ ನಿರ್ದೇಶಕರ ಕಛೇರಿಯ ನಡುವಳಿಕೆಯಲ್ಲಿ ಮಂಜುರಾಗಿದೆ. ಈ ಬಗ್ಗೆ ನಮ್ಮ ಗುತ್ತಿಗೆದಾರ ಸಂಘದಿಂದ ವಿರೋಧವಿದೆ.
ಕಾರಣ ೩೯ ಸಂಖ್ಯೆಯ ಕಾಮಗಾರಿಗಳ ಪ್ರತ್ಯೇಕ ಟೆಂಡರ್ ಆಹ್ವಾನಿಸಿದ್ದಲ್ಲಿ ೩೯ ಜನ ಗುತ್ತಿಗೆದಾರರಿಗೆ ಕೆಲಸ ಸಿಗುವಂತಾಗುವುದು ಅಲ್ಲದೆ ಕಾಮಗಾರಿಗಳನ್ನು ಕೈಗೊಳ್ಳುವಿಕೆಯಲ್ಲಿ ಶೀಘ್ರ ಪ್ರಗತಿ ಸಹ ಸಿಗುವುದು. ಅದೇ ಸದರ ಕಾಮಗಾರಿಗಳನ್ನು ಒಟ್ಟುಗೂಡಿಸಿ ಒಂದೇ ಟೆಂಡರ್ ಆಹ್ವಾನಿಸಿದ್ದಲ್ಲಿ ೩೯ ಜನ ಗುತ್ತಿಗೆದಾರರಿಗೆ ಅನ್ಯಾಯವಾಗುವುದಲ್ಲದೇ ಕಾಮಗಾರಿಗಳನ್ನು ಕೈಗೊಳ್ಳಲು ಹಾಗೂ ಕಾಮಗಾರಿಗಳ ಪ್ರಗತಿ ಕುಂಠಿತಗೊಳ್ಳುವುದರಿಂದ ಕಾರಣಗಳಿಂದ ಹಾಗೂ ಜಿಲ್ಲೆಯ ಗುತ್ತಿಗೆದಾರರಿಗೆ ಕೋವಿಡ್-೧೯ ರ ಸಾಂಕ್ರಾಮಿಕ ರೋಗದ ಸಮಯದಲ್ಲಿ ನಗರಸಭೆಯ ಕಾಮಗಾರಿಗಳ ಟೆಂಡರ್ ಪ್ರತ್ಯೇಕವಾಗಿ ಆಹ್ವಾನಿಸಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿಸಲಾಗಿದೆ.
Be the first to comment