ಕಾನೂನು ಸೇವಾ ಪ್ರಾಧಿಕಾರದ ನೇತೃತ್ವದಲ್ಲಿ ನ್ಯಾಯದ ಅಡೆತಡೆಗಳನ್ನು ಪರಿಹರಿಸಲು ನಿರ್ಧಾರ  

ಬೆಂಗಳೂರು; ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹ ಭಾಗಿತ್ವದಲ್ಲಿ ‘ನ್ಯಾಯ’ ತಂಡ ರಚನೆಯಾಗಿದ್ದು, ನ್ಯಾಯಾಂಗ, ಪೊಲೀಸ್ ಪಡೆ, ಸರ್ಕಾರ, ಕಾನೂನು ಶಾಲೆಗಳು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ವಕೀಲರ ಪ್ರತಿನಿಧಿಗಳ ಸಮೂಹವನ್ನು ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಒಟ್ಟುಗೂಡಿಸಲಾಯಿತು.

ನ್ಯಾಯದಾನಕ್ಕೆ ಇರುವ ವಿವಿಧ ಅಡೆತಡೆಗಳನ್ನು ಸಾಮೂಹಿಕವಾಗಿ ಅರ್ಥಮಾಡಿಕೊಂಡು ಪರಿಹರಿಸಲು ಮಾರ್ಗಸೂಚಿ ರೂಪಿಸಲು ನಿರ್ಧರಿಸಲಾಗಿದೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಪಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ನಿವೃತ್ತ ಕರ್ನಾಟಕ ಪೊಲೀಸ್ ಡಿಜಿಪಿ (ಸಿಐಡಿ) ಸುನೀಲ್ ಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕರಾದ ಪುಷ್ಪಾ ಮುದ್ದುಲಿಂಗಣ್ಣನವರ್ ನೇತೃತ್ವದಲ್ಲಿ ಕಾನೂನಿನ ಅಡೆತಡೆಗಳನ್ನು ನಿವಾರಿಸಲು ತೀರ್ಮಾನಿಸಲಾಗಿದೆ.

ಬಹುತೇಕ ದುರ್ಬಲ ಸಮುದಾಯದವರು ಪೊಲೀಸರಿಗೆ ದೂರು ನೀಡಲು ಹೆದರುತ್ತಾರೆ, ವಲಸೆ ಕಾರ್ಮಿಕರ ಮಕ್ಕಳು ಗುರುತಿನ ಚೀಟಿಯ ಕೊರತೆಯಿಂದಾಗಿ ಸರ್ಕಾರಿ ಶಾಲೆಗೆ ಪ್ರವೇಶ ಪಡೆಯುತ್ತಿಲ್ಲ, ಮಹಿಳೆಯರಿಗೆ ಕುಟುಂಬಗಳಲ್ಲಿ ಹೆಚ್ಚಿನ ಸ್ವಾತಂತ್ರ್ಯವಿಲ್ಲದ ಕಾರಣ ಕಾನೂನು ಪರಿಹಾರಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಬೇಕು ಎಂಬ ಸಾಮೂಹಿಕ ಇಚ್ಛೆ ಇದ್ದರೂ ಸಹ, ಹಲವಾರು ವ್ಯವಸ್ಥಿತ ಅಡೆತಡೆಗಳನ್ನು ಪರಿಹರಿಸಲು ಒತ್ತು ನೀಡಬೇಕು ಎಂಬ ನಿರ್ಧರಿಸಲಾಗಿದೆ.

ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, ಜನಸಾಮಾನ್ಯರಿಗೆ ನ್ಯಾಯವನ್ನು ಒದಗಿಸಲು ಸಹಾಯ ಮಾಡುವ ಕರ್ನಾಟಕ ರಾಜ್ಯ ಕಾನೂನು ಸೇವಾ ಆಯೋಗ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸಬೇಕು ಎಂದರು.

ಪುಷ್ಪಾ ಮುದ್ದು ಲಿಂಗಣ್ಣನವರ್ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಸಿಬ್ಬಂದಿ ಕೊರತೆ ಇದ್ದು, ಕೇಂದ್ರದಿಂದ ಹಣ ಪಡೆಯುವಲ್ಲಿ ವಿಳಂಬವಾಗುತ್ತಿದೆ. ಇದು ಕೂಡ ನ್ಯಾಯವನ್ನು ಖಚಿತಪಡಿಸವಲ್ಲಿ ಅಡೆತಡೆಯಾಗಿದ್ದು, ಇವುಗಳನ್ನು ನಿವಾರಿಸುವ ಅಗತ್ಯವಿದೆ ಎಂದು ಹೇಳಿದರು.

ನಿವೃತ್ತ ಪೊಲೀಸ್ ಡಿಜಿಪಿ (ಸಿಐಡಿ) ಸುನೀಲ್ ಕುಮಾರ್ ಮಾತನಾಡಿ, ಅವರು ಜನರಿಗೆ ಪೊಲೀಸರನ್ನು ಕಂಡರೆ ತುಂಬಾ ಭಯ ಇದೆ. ಆದಾಗ್ಯೂ, ಧನಾತ್ಮಕ ಬದಲಾವಣೆಯನ್ನು ಖಚಿತಪಡಿಸಲು ಪೊಲೀಸರು ಬಹಳ ದೂರ ಸಾಗಿದ್ದಾರೆ; ಪೊಲೀಸ್ ತರಬೇತಿಯು ಸಹ ಮಹಿಳೆಯರು ಹಕ್ಕುಗಳ ಕುರಿತು ಹಲವಾರು ವಿಷಯಗಳನ್ನು ಹೊಂದಿದ್ದು, ಅವರ ಸಮಸ್ಯೆಗಳ ಬಗ್ಗೆ ಹೆಚ್ಚು ಸಂವೇದನಾಶೀಲರಾಗುವಂತೆ ಪ್ರೋತ್ಸಾಹಿಸುತ್ತದೆ, ಎಂದು ವ್ಯಾಖ್ಯಾನಿಸಿದರು.

 

ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್‌, ಸಿಐಡಿಯ ನಿವೃತ್ತ ಡಿಜಿಪಿ ಸುನೀಲ್‌ ಕುಮಾರ್‌, ಕಾನೂನು ಮತ್ತು ದತ್ತಿ ಸಂಸ್ಥೆಗಳ ಸದಸ್ಯರು, ಬೆಸ್ಟ್‌ ಪ್ರಾಕ್ಟೀಸ್‌ ಫೌಂಡೇಶನ್‌, ಸಿಚ್ರೆಮ್‌, ಸಾಲಿಡಾರಿಟಿ ಫೌಂಡೇಶನ್‌, ಹಸಿರು ದಳ, ಎನೇಬಲ್‌ ಇಂಡಿಯಾ, ವಿಮೋಚನಾ, ಶ್ರೀ ಜಾಗೃತಿ ಸಮಿತಿ, ಸಿವಿಕ್‌ ಮತ್ತು ನ್ಯಾಯ ತಂಡದ ಜಿಲ್ಲಾ ಮಟ್ಟದ ವಕೀಲರು ಭಾಗವಹಿಸಿದ್ದರು

Be the first to comment

Leave a Reply

Your email address will not be published.


*