ಮೋದಿಯವರೇ ಒಂದಲ್ಲಾ-ಎರಡಲ್ಲಾ ಹತ್ತತ್ತು ವರ್ಷ ಪ್ರಧಾನಿ ಆಗಿದ್ರೂ ಒಂದೇ ಒಂದು ಭರವಸೆಯನ್ನೂ ಈಡೇರಿಸಲಿಲ್ವಲ್ಲಾ ಸ್ವಾಮಿ. ಯಾಕೆ ಸ್ವಾಮಿ? ಇದು ನ್ಯಾಯನಾ ಸ್ವಾಮಿ: ಸಿ.ಎಂ.ಪ್ರಶ್ನೆ
ಪಿರಿಯಾಪಟ್ಟಣ ಏ 13: BJP-JDS ಹೊಂದಾಣಿಕೆ “ಅನ್ನ ಹಳಸಿತ್ತು-ನಾಯಿ ಹಸಿದಿತ್ತು” ಎನ್ನುವಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪಿರಿಯಾಪಟ್ಟಣದಲ್ಲಿ ನಡೆದ ಜನಧ್ವನಿ-2 ಸಮಾವೇಶದಲ್ಲಿ ಮಾತನಾಡಿದರು.
ಸೆಕ್ಯುಲರ್ ಹೆಸರಿಟ್ಟುಕೊಂಡು BJP ಜತೆ ಬೆರೆತಿರುವ JDS ಗೆ ಮಾನ ಮರ್ಯಾದೆ ಇದೆಯಾ? ಕೇವಲ ಕುಟುಂಬದ ಹಿತಾಸಕ್ತಿಗಾಗಿ ಯಾರ ಜತೆಗೆ ಬೇಕಾದರೂ ಹೋಗಲು ಜೆಡಿಎಸ್ ರೆಡಿ ಆಗಿ ಬಿಡ್ತದೆ. ಯಾವುದೇ ಸಿದ್ದಾಂತ ಇಲ್ಲ, ಜನಪರವಾದ ಬದ್ಧತೆ ಇಲ್ಲ ಎಂದು ಟೀಕಿಸಿದರು.
ಒಂದಲ್ಲಾ-ಎರಡಲ್ಲಾ ಹತ್ತತ್ತು ವರ್ಷ ಪ್ರಧಾನಿ ಆಗಿದ್ರೂ ಏನೂ ಮಾಡ್ಲಿಲ್ವಲ್ಲಾ ನ್ಯಾಯನಾ?
ಪ್ರಧಾನಿ ಮೋದಿಯವರೇ ಒಂದಲ್ಲಾ ಎರಡಲ್ಲಾ ಹತ್ತತ್ತು ವರ್ಷ ಪ್ರಧಾನಿ ಆಗಿದ್ರೂ ಒಂದೇ ಒಂದು ಭರವಸೆಯನ್ನೂ ಈಡೇರಿಸಲಿಲ್ವಲ್ಲಾ ಸ್ವಾಮಿ ಯಾಕೆ? ಇದು ನ್ಯಾಯನಾ ಸ್ವಾಮಿ? ನಿಮ್ಮನ್ನು ನಂಬಿದವರಿಗೆ ದ್ರೋಹ ಬಗೆದದ್ದು ಸರಿನಾ ಸ್ವಾಮಿ ಎಂದು ತಮ್ಮದೇ ಶೈಲಿಯಲ್ಲಿ ಪ್ರಶ್ನಿಸಿದರು.
ನೀವು ಕೊಟ್ಟ ಮಾತನ್ನಂತೂ ಉಳಿಸಿಕೊಳ್ಳಲಿಲ್ಲ. ಹೋಗ್ಲಿ, ಈ ದೇಶದ ರೈತರು, ಕಾರ್ಮಿಕರು, ಮಹಿಳೆಯರು, ಶ್ರಮಿಕರು, ಸಣ್ಣ-ಮಧ್ಯಮ ಉದ್ಯಮಿಗಳಿಗೆ, ಯುವ ಜನರ ಭವಿಷ್ಯಕ್ಕೆ ಒಂದೇ ಒಂದು, ಬರೀ ಒಂದೇ ಒಂದು ಕಾರ್ಯಕ್ರಮವನ್ನೂ ಸಮರ್ಪಕವಾಗಿ ಜಾರಿ ಮಾಡಲಿಲ್ವಲ್ಲಾ ಈ ಚಂದಕ್ಕೆ ಹತ್ತತ್ತು ವರ್ಷ ಪ್ರಧಾನಿಯಾಗಬೇಕಿತ್ತಾ ಮೋದಿಯವರೇ ? ಪ್ರಧಾನಿಯಾಗಿ ಸುಳ್ ಹೇಳ್ಕಂಡು ತಿರುಗಿದ್ರೆ ಭಾರತೀಯರಿಗೆ ನಂಬಿಸಿ ಮೋಸ ಮಾಡಿದಂಗಲ್ವಾ ಸ್ವಾಮಿ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಶಿವಕುಮಾರ್, ಸಚಿವರಾದ ಕೆ.ವೆಂಕಟೇಶ್, ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್, ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.
Be the first to comment