ಸಿದ್ದಾಪುರದ ಹಿಂದೂ ಸಂಘಟನೆ ಮುಂಖಂಡ ಮಂಗೇಶ್ ಕೈಸರೆ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸಿ.ಬಿ.ಐ ತನಿಖೆಗೆ ವಹಿಸಿ – ಸರಕಾರಕ್ಕೆ ನಾಗರಾಜ್ ನಾಯ್ಕ ಆಗ್ರಹ

ವರದಿ-ಸ್ಪೂರ್ತಿ ಎನ್ ಶೇಟ್

ಜಿಲ್ಲಾ ಸುದ್ದಿಗಳು 

ಸಿದ್ದಾಪುರ

ನಿನ್ನೆ ಸಿದ್ದಾಪುರದಲ್ಲಿ ಸಮಾಜವಾದಿ ಪಕ್ಷದಿಂದ ನಡೆಸಿದ ಮಾದ್ಯಮ ಗೋಷ್ಠಿಯಲ್ಲಿ ಸಮಾಜವಾದಿ ಪಕ್ಷದ ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷ ನಾಗರಾಜ್ ನಾಯ್ಕ ಮಾತನಾಡಿ

CHETAN KENDULI

 

*ಹಿಂದು ಸಂಘಟನೆಯ ಮುಖಂಡ, ಮಾಹಿತಿ ಹಕ್ಕು ಕಾರ್ಯಕರ್ತ ಮಂಗೇಶ ಕೈಸರೆ ಅನುಮಾನಾಸ್ಪದ ಅಪಘಾತ ಮತ್ತು ಸಾವಿನ ಪ್ರಕರಣ ಸಿಬಿಐ ತನಿಖೆಯಾಗಬೇಕು.*

ಈ ಹಿಂದೆ ಬಜರಂಗದಳದ ಜಿಲ್ಲಾ ಸಂಚಾಲಕರು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರು ಆಗಿದ್ದ ಯಲ್ಲಾಪುರದ ಮಂಗೇಶ ಕೈಸರೆಯವರಿಗೆ ಕಳೆದ ವರ್ಷದ ಕಟ್ಟುನಿಟ್ಟಿನ ಲಾಕ್ ಡೌನ್ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಅಪಘಾತವಾಗಿ ಸಾವನಪ್ಪಿರುವ ಘಟನೆ ಇದು ವ್ಯವಸ್ಥಿತ ಕೊಲೆಯಾಗಿರಬಹುದೆನ್ನುವ ಅನುಮಾನ ಮೂಡುತ್ತಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ ಯಲ್ಲಾಪುರದ ಇಬ್ಬರು ಸಾಮಾಜಿಕ ಕಾರ್ಯಕರ್ತರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಮೂರು ತಿಂಗಳು ಜೈಲಿನಲ್ಲಿ ಇಟ್ಟಿರುವುದು ಅನುಮಾನ ಮೂಡಿಸುತ್ತಿದೆ.

ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರ ಆಪ್ತರಾಗಿರುವ ಈ ಹಿಂದೆ ಶಿರಸಿಯಲ್ಲಿ ಪೋಲಿಸ್ ಅಧಿಕಾರಿ ಆಗಿದ್ದವರ ಮೇಲೆ ಕೂಡ ಮಂಗೇಶ ಕೈಸೆರೆ ಅವರು ಪ್ರಕರಣ ದಾಖಲಿಸಿದ್ದರು ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರಾಗಿ ಅನೇಕ ಪ್ರಭಾವಿ ವ್ಯಕ್ತಿಗಳ ಪ್ರಕರಣಗಳ ಬೆನ್ನುಹತ್ತಿದ್ದರು, ಅನೇಕ ಪ್ರಕರಣಗಳಲ್ಲಿ ಸರಕಾರದ ಆಸ್ತಿ ಪಾಸ್ತಿಗಳನ್ನು ಸರಕಾರಕ್ಕೆ ವಾಪಸ್ ಸಿಗುವಂತೆ ಮಾಡಿದ್ದರು ಎಂದು ತಿಳಿದು ಬಂದಿದೆ. ಲಾಕ್ ಡೌನ್ ಅವಧಿಯಲ್ಲಿ ಆದ ಈ ಘಟನೆಯನ್ನು ಅಪಘಾತ ಎಂದು ತಿರುಚಿರುವ ವ್ಯವಸ್ಥೆಯ ಹಿಂದೆ ಈ ಜಿಲ್ಲೆಯ ಪ್ರಮುಖ ಜನಪ್ರತಿನಿಧಿ ಹಾಗೂ ಪೋಲಿಸ್ ಅಧಿಕಾರಿಯೊಬ್ಬರ ಕೈವಾಡ ಇರುವುದು ಸ್ಪಷ್ಟವಾಗುತ್ತಿದೆ.
ಈ ಬಗ್ಗೆ ಹಿಂದುತ್ವವಾದಿಗಳೆಂದು ಹೇಳಿಕೊಳ್ಳುವ ಸಂಸದರು, ವಿಧಾನಸಭಾ ಅಧ್ಯಕ್ಷರು, ಶಾಸಕರು ಮಾತನಾಡುತ್ತಿಲ್ಲಾ ಯಾಕೆ? ಹಿಂದೂ ಸಂಘಟನೆಯಲ್ಲಿ, ಪಕ್ಷದಲ್ಲಿ ಯಾವ ಗುರುತೂ ಇಲ್ಲದ ಪರೇಶ್ ಮೇಸ್ತ ಪ್ರಕರಣವನ್ನುರಾಜಕೀಯಗೊಳಿಸಿಲಾಭಮಾಡಿಕೊಂಡಬಿ.ಜೆ.ಪಿ.ಕಟ್ಟಾಹಿಂದುತ್ವವಾದಿಮಂಗೇಶ್ಕೈಸರೆಯವರ ಸಾವಿನಅನುಮಾನಾಶ್ಪದತೆಯಬಗ್ಗೆದಿವ್ಯಮೌನವಹಿಸಿರುವುದೇಕೆ? ಪರೇಶ್ ಮೇಸ್ತ ಪ್ರಕರಣದಲ್ಲಿ ಹನಿ ರಕ್ತದ ಲೆಕ್ಕ ಕೇಳುವ ಸಂಸದ ಅನಂತಕುಮಾರ್ ಹೆಗಡೆಯವರು ಮತ್ತು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಜೀವನಪರ್ಯಂತ ಹಿಂದುತ್ವಕ್ಕಾಗಿ ಹೋರಾಡಿ ಜೀವಕೊಟ್ಟ ಮಂಗೇಶ್ ಕೈಸರೆಯವರ ಪ್ರಕರಣದಲ್ಲಿ ಸುಮ್ಮನಿದ್ದು ಅದರ ಬಗ್ಗೆ ಮಾಹಿತಿ ಕೇಳಿದ ಜನಸಾಮಾನ್ಯರನ್ನು ಸುಳ್ಳುಪ್ರಕರಣದಲ್ಲಿ ಬಂಧಿಸಿ ಹಿಂಸಿಸುತ್ತಿರುವುದೇಕೆ ಎನ್ನುವ ಪ್ರಶ್ನೆಗೆ ಉತ್ತರ ಕೊಡಬೇಕು. ಮಂಗೇಶ್ ಕೈಸರೆಯವರ ಅನುಮಾನಾಷ್ಪದ ಅಪಘಾತ ಮತ್ತು ಸಾವಿನ ಘಟನೆಯ ಬಗ್ಗೆ ಮಾಹಿತಿ ಕೇಳುವ ಜನರಿಗೆ ಸರ್ಕಾರಿ ಯಂತ್ರದಿಂದ ಕಿರುಕುಳ ಕೊಡುತ್ತಿರುವವರ ವಿರುದ್ಧ ಸಮಾಜವಾದಿ ಪಕ್ಷದಿಂದ ಪ್ರತಿಭಟನೆ ಮಾಡಲಿದ್ದೇವೆ. ಮತ್ತು ಈ ಪ್ರಕರಣವನ್ನು ಸರಕಾರ ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಸಮಾಜವಾದಿ ಪಕ್ಷದಿಂದ ಆಗ್ರಹಿಸುತ್ತೇವೆ. ಈಮಾಧ್ಯಮಗೋಷ್ಠಿಯಲ್ಲಿ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರಾದ ಎನ್ ಮಂಜಪ್ಪ, ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಬಿ. ನಾರಾಯಣ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ವಾಸು ನಾಯ್ಕ ಇದ್ದರು.

Be the first to comment

Leave a Reply

Your email address will not be published.


*