ಕೆಲೂರ:ಯಶಸ್ವಿಯಾದ ಪ್ರಥಮ ಗ್ರಾಪಂ ಕೆಡಿಪಿ ಸಭೆ:ಶಿಕ್ಷಕರ ಮೆಚ್ವುಗೆಗೆ ಪಾತ್ರರಾದ ಪಿಡಿಓ ಮತ್ತು ಅಧ್ಯಕ್ಷ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಸಂವಿಧಾನದ 73ನೇ ತಿದ್ದುಪಡಿಯ ಆಶೋತ್ತರಗಳಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಾನಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ. ಅದರಂತೆ ಪಂಚಾಯಿತಿಗಳು ನಾನಾ ಅಭಿವೃದ್ಧಿ ಯೋಜನೆಯಡಿ ಬಿಡುಗಡೆ ಮಾಡುವ ಅನುದಾನಗಳನ್ನು ಬಳಸಿಕೊಂಡು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿವೆ.

ಬಾಗಲಕೋಟೆ:ಕೆಲೂರ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಗ್ರಾಮ ಪಂಚಾಯತ್‌ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ಗ್ರಾ.ಪಂ ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸರಕಾರದ ಹೊಸ ಯೋಜನೆ ಹಾಗೂ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯವ ಕೆಡಿಪಿ ಸಭೆಯಂತೆ ಗ್ರಾಮ ಮಟ್ಟದಲ್ಲೂ ಪ್ರಗತಿ ಪರಿಶೀಲನೆ ನಡೆಯಬೇಕು ಎಂಬ ಸರಕಾರ ಆದೇಶದಂತೆ ಕೆಲೂರ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಪ್ರಥಮ ಸಭೆ ನಡೆಯಿತು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹೊಸ ಕಾರ್ಯಕ್ರಮದ ಮಾಹಿತಿ ನೀಡಿದರು. ಹೋಬಳಿ ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಮಟ್ಟದ ಎಲ್ಲಾ ಅಧಿಕಾರಿಗಳು ಒಳಗೊಂಡಂತೆ ನಡೆಯುವ ಈ ಸಭೆಯು ಗ್ರಾಮದ ಪ್ರಗತಿಗೆ ಪೂರಕವಾಗಲಿದೆ ಎಂದು ಅವರು ನುಡಿದರು.

 

ಶಿಕ್ಷಕರ ಮೆಚ್ಚುಗೆ

ಕೆಲೂರ,ತಳ್ಳಿಕೇರಿ,ಕುಣಿಬೆಂಚಿ ಗ್ರಾಮಗಳ ಪ್ರಾಥಮಿಕ ಶಾಲೆಗಳಿಗೆ ಕಳೆದ ವರ್ಷ ಡಿಜಿಟಲ್ ಕಲಿಕೆಗಾಗಿ ಲ್ಯಾಪ್‌ಟಾಪ್, ಪ್ರೋಜೆಕ್ಟರ್ ಗಳನ್ನು ನೀಡಲಾಗಿದ್ದು ಸಭೆಗೆ ಹಾಜರಿದ್ದ ಶಿಕ್ಷಕರು ಈ ಸಾಧನಗಳು ನಮ್ಮ ಮಕ್ಕಳಿಗೆ ಕಲಿಯಲು ತುಂಬಾ ಉಪಯುಕ್ತವಾಗಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ  ಪಿಡಿಓ ಪಿ.ಬಿ.ಮುಳ್ಳೂರ ಮತ್ತು ಅಧ್ಯಕ್ಷ ಮಹಾಲಿಂಗೇಶ ನಾಡಗೌಡರಿಗೆ ಶಿಕ್ಷಕರು ಅಭಿನಂದನೆಗಳನ್ನು ಸಲ್ಲಿಸಿದರು.

ಕೃಷಿ ಇಲಾಖೆ:
ಕೀಟನಾಶಕ,ರಾಶಿಷಿನ್,ತಾಡಪಾಲ ವಿತರಣೆ,90%ರಿಯಾಯತಿಯಲ್ಲಿ ಪೈಪ್ ಸ್ಪೀಂಕ್ಲರ್ ವಿತರಣೆ,ಕೃಷಿ ಯಾಂತ್ರೀಕರಣ ಯೋಜನೆ, ರಾಷ್ಟ್ರೀಯ ಆಹಾರ ಸುರಕ್ಷಣೆ ಮಿಶನ್,ಕೃಷಿ ಭಾಗ್ಯ – ಕೃಷಿ ಹೊಂಡ, ನೀರಾವರಿ ಘಟಕ, ಶೇಡ್ ನೆಟ್ ಇತ್ಯಾದಿ,ಕೃಷಿ ಪರಿಕರಗಳು,ಸಾವಯವ ಕೃಷಿ.

ರೇಷ್ಮೆ ಇಲಾಖೆ:
ಬೆಳೆಗಾರರಿಗೆ ಸಹಾಯ,ರೇಷ್ಮೆ ಹುಳು ಪಾಲನೆಗಾಗಿ ಉಪಕರಣಗಳನ್ನು ಪಡೆಯಲು ಸಹಾಯ,ರೇಷ್ಮೆ ಹುಳು ಪಾಲನೆ ಶೆಡ್‌ಗಳ ನಿರ್ಮಾಣ,

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ:
ಭಾಗ್ಯಲಕ್ಷಿ,ದೇವದಾಸಿ ಮಹಿಳೆಯರ ಪುನರ್ವಸತಿ, ಸ್ತ್ರೀ ಶಕ್ತಿ ಯೋಜನೆ,ಅಂಗನವಾಡಿ ಕಟ್ಟಡಗಳು, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ,ಮಾತೃ ಪೂರ್ಣ ಯೋಜನೆ.

ಅರಣ್ಯ ಇಲಾಖೆ:
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಎಲ್.ಪಿ.ಜಿ ಸಂಪರ್ಕ ಮತ್ತು ರೀಫಿಲಿಂಗ್,ಕೃಷಿ ಅರಣ್ಯಿಕರಣ,ಚೆಕ್ ಡ್ಯಾಮಗಳ ನಿರ್ಮಾಣ,ರೈತರಿಗೆ ಸಸಿಗಳ ಹಂಚಿಕೆ.

ಆರೋಗ್ಯ ಇಲಾಖೆ:
1478 ಜನರಿಗೆ ಒಂದನೆ ಲಸಿಕೆ,528 ಜನರಿಗೆ 2ನೇ ಲಸಿಕೆ ಹಾಕಿದ್ದು ನಮ್ಮ ಗ್ರಾಮಕ್ಕೆ ಒಟ್ಟು 3000 ಲಸಿಕೆ ಗುರಿ ನಿಗದಿಪಡಿಸಲಾಗಿದೆ.ಲಸಿಕೆ ನೀಡುವುದರ ಜೊತೆಗೆ ಮಕ್ಕಳಿಗೆ,ಬಾನಂತಿಯರಿಗೆ,ಗರ್ಭಿಣಿಯರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ ಮಾತಾನಾಡಿ, ಇಂತಹ ಸಭೆಯು ಗ್ರಾಮ ಪಂಚಾಯತಿ ಮಟ್ಟದಲ್ಲಿ ನಡೆಯುವುದರಿಂದ ಗ್ರಾಮ ಸಮಸ್ಯೆಗಳನ್ನು ಅರಿತು ಅವುಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಅನುಕೂಲವಾಗಲಿದೆ. ಈ ಸಭೆಗೆ ಹೋಬಳಿ ಮಟ್ಟದ ಮತ್ತು ಗ್ರಾಮದ ಎಲ್ಲಾ ಇಲಾಖೆಯ ಅಧಿಕಾರಿಗಳು ಬರಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಶ್ರೀಮತಿ ಮಲ್ಲವ್ವ ಗೌಡರ, ಕಾರ್ಯದರ್ಶಿ ಹಿರೇಮಠ ರೇಷ್ಮೆ ಇಲಾಖೆ,ಕೃಷಿ ಇಲಾಖೆ,ಶಿಕ್ಷಣ ಇಲಾಖೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಪಿಕೆಪಿಎಸ್,ಪಶುವೈದ್ಯಕೀಯ ಇಲಾಖೆ,ಆರೋಗ್ಯ ಇಲಾಖೆ,ಅರಣ್ಯ ಇಲಾಖೆ, ಹೆಸ್ಕಾಂ,ಪೋಲಿಸ್ ಇಲಾಖೆ ಹೀಗೆ ಎಲ್ಲ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು ಪ್ರತಿ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ಪ್ರಗತಿಯನ್ನು ಹಂಚಿಕೊಂಡರು.

Be the first to comment

Leave a Reply

Your email address will not be published.


*