ಅರ್ಹ ಬಡಕುಟುಂಬಕ್ಕೆ ದಿನಸಿ ಕಿಟ್ ವಿತರಿಸಿದ ಶಾಸಕ ದಿನಕರ ಶೆಟ್ಟಿ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಕುಮಟಾ: ತಾಲೂಕಿನ ಗುಂದ ಭಾಗದ 100 ಕ್ಕೂ ಅಧಿಕ ಬಡ ಕುಟುಂಬಗಳಿಗೆ ಶಾಸಕ ದಿನಕರ ಶೆಟ್ಟಿ ಸೋಮವಾರ ಅಗತ್ಯ ದಿನಸಿ ಕಿಟ್‍ಗಳನ್ನು ವಿತರಿಸಿದರು.ನಂತರ ಮಾತನಾಡಿದ ಅವರು, ಲಾಕ್‍ಡೌನ್‍ನಿಂದ ಬಡ ಜನತೆ ವಿವಿಧ ರೀತಿಯಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅಂಥ ಅರ್ಹ ಬಡಜನರಿಗೆ ಕೈಲಾಗುವ ಸಹಾಯ ಮಾಡುವ ನಿಟ್ಟಿನಲ್ಲಿ 5 ಸಾವಿರಕ್ಕೂ ಅಧಿಕ ದಿನಸಿ ಕಿಟ್‍ಗಳನ್ನು ವಿತರಿಸಲಾಗಿದೆ. ಅಲ್ಲದೇ, ವಿವಿಧ ರೀತಿಯಲ್ಲಿ ದಾನಿಗಳಿಂದಲೂ ಸಹ ಬಡ ಕುಟುಂಬಕ್ಕೆ ಸಹಕಾರ ಒದಗಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಾ ಶೇಟ್, ಎಸ್.ಸಿ. ಮೋರ್ಚಾ ತಾಲೂಕಾಧ್ಯಕ್ಷ ಮಂಜುನಾಥ ಮುಕ್ರಿ, ಪ್ರಮುಖರಾದ ಪುರಂದರ ಹುಲಸ್ವಾರ, ಶಿವು ಮುಕ್ರಿ, ಗೋವಿಂದ ಮುಕ್ರಿ ಹಾಗೂ ವಿಠ್ಠಲ ಹಳ್ಳೇರ ಸೇರಿದಂತೆ ಇತರರು ಇದ್ದರು.

Be the first to comment

Leave a Reply

Your email address will not be published.


*