ಗೂಗಲ್ ಮೀಟ್ ಮೂಲಕ ವಿಶ್ವ ಯೋಗ ದಿನ ಆಚರಣೆ:ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಅಗತ್ಯ : ಡಿಸಿ ರಾಜೇಂದ್ರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗದೊಂದಿಗೆ ಮನೆಯಲ್ಲಿರಿ ಎಂಬ ಘೋಷವಾಕ್ಯದೊಂದಿಗೆ ಆನ್ ಲೈನ್‍ನಲ್ಲಿ ಮೂಲಕ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು 2015 ರಿಂದ ಪ್ರತಿ ವರ್ಷವು ಜೂನ್-21 ರಂದು ಅಂತರಾಷ್ಟೀಯ ಯೋಗ ದಿನಾಚರಣೆಯನ್ನು ಮಾನ್ಯ ಪ್ರಧಾನ ಮಂತ್ರಿಗಳು ವಿಶ್ವ ಯೋಗ ದಿನವನ್ನಾಗಿ ಭಾರತ ದೇಶವಲ್ಲದೆ ಇಡಿ ಜಗತ್ತಿಗೆ ಯೋಗದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ವಯ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಜಿಲ್ಲಾ ಆಯುಷ ಅಧಿಕಾರಿ ಡಾ.ಮಲ್ಲಣ್ಣ ತೋಟದ ಮಾತನಾಡಿ ಪ್ರತಿ ವರ್ಷದಂತೆ ಜೂನ್-21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆದರೆ ಪ್ರಸಕ್ತ ವರ್ಷ ಕೋವಿಡ್-19 ಮಹಾಮಾರಿ ಕಾರಣದಿಂದ ಸಾರ್ವಜನಿಕ ಸಭೆ ಸಮಾರಂಭ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಸರ್ಕಾರವು ನಿಷೇಧಿಸುವುದರಿಂದ ಭಾರತ ಸರ್ಕಾರದ ಆಯುಷ್ ಮಂತ್ರಾಲಯವು ಸೂಚನೆಯನ್ವಯ ಆನ್‍ಲೈನ್ ಮೂಲಕ ಮನೆಯಲ್ಲಿಯೇ ಯೋಗ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲಾಗಿದೆ ಎಂದು ತಿಳಿಸಿದರು.

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಭಾರತ ಸೇವಾದಳದ ಸಹಯೋಗದೊಂದಿಗೆ ಜೂನ್ 17 ರಿಂದ 21 ವರೆಗೆ 5 ದಿನಗಳ ಕಾಲ ಆನ್‍ಲೈನ್ ಮೂಲಕ ಯೋಗ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಯೋಗ ಎಂಬ ಪದ ಮನಸ್ಸು, ದೇಹ, ಆತ್ಮಗಳನ್ನು ಒಂದುಗೂಡಿಸುದಾಗಿದ್ದು, ಮಾನಸಿಕ ದೃಢÀತೆ, ಸ್ಮರಣಶಕ್ತಿ, ಸಂಕಲ್ಪಶಕ್ತಿ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ದೇಹವನ್ನು ಆರೋಗ್ಯ ಪೂರ್ಣಗೊಳಿಸಿ ಮನಸ್ಸನ್ನು ಪ್ರಶಾಂತ ಮಾಡುತ್ತದೆ, ಯೋಗ, ಧ್ಯಾನ, ಪ್ರಾಣಾಯಾಮದಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸಿ ರೋಗ ಮುಕ್ತ ದೇಹವನ್ನಾಗಿ ಪರಿವರ್ತಿಸಲು ಯೋಗ ಸಹಾಯಕವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ನಂತರ ಜಿಲ್ಲಾ ಸಂಘಟಕರಾದ ಮಹೇಶ ಪತ್ತಾರ ಕಾಮನ್ ಯೋಗಾ ಪ್ರೋಟೊಕಾಲ್ ಪ್ರಕಾರ ಆನ್ ಲೈನ್‍ನಲ್ಲಿ ಭಾಗವಹಿಸಿದ ಎಲ್ಲರಿಗೂ ಯೋಗಾಭ್ಯಾಸ ಮಾಡಿಸಿದರು.


ಮನೆಯಲ್ಲಿಯೇ ಯೋಗಾಬ್ಯಾಸ

ಯೋಗದೊಂದಿಗೆ ಮನೆಯಲ್ಲಿರಿ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗಯತ್ತಿರುವ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆಯುಷ ಅಧಿಕಾರಿ ಡಾ.ಮಲ್ಲಣ್ಣ ತೋಟದ ಹಿರಿಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ ರಕ್ಕಸಗಿ, ವೈದ್ಯಾಧಿಕಾರಿ ಡಾ.ಶಿವಾನಂದ ನಿಡಗುಂದಿ, ಆಯುಷ ಇಲಾಖೇಯ ಅಧೀಕ್ಷಕರು ಗಿರೀಶ ಕಂಬಳಿ, ವಿನಾಯಕ ಅವ್ವಣ್ಣವರ ಸೇರಿದಂತೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಮನೆಯಲ್ಲಿಯೇ ಯೋಗಾಭ್ಯಾಸ ಮಾಡಿದರು.


ವಿಶ್ವಕ್ಕೆ ಯೋಗ ಗುರುವಾದ ಭಾರತ

ವಿಶೇಷವಾಗಿ ಕೋವಿಡ್-19 ಮಹಾಮಾರಿಗೆ ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವಂತಹ ರೋಗ ನಿರೋಧಕ ಶಕ್ತಿ ವೃದ್ದಿಸುವ ಔಷಧೊಪಚಾರ, ಯೋಗ, ಧ್ಯಾನ, ಪ್ರಾಣಾಯಾಮಗಳನ್ನು ಕಡ್ಡಾಯವಾಗಿ ಪಾಲಿಸಿ ಸರ್ಕಾರ ಹೇಳಿದ ಸೂತ್ರಗಳನ್ನು ಪಾಲಿಸಿದಲ್ಲಿ ಈ ಮಹಾಮಾರಿಯಿಂದ ದೂರವಿರಬಹುದಾಗಿದೆ. ಭಾರತ ಸರ್ಕಾರದ ಆಯುಷ್ ಮಂತ್ರಾಲಯವು 2015 ರಿಂದಲೇ ಯೋಗಾಬ್ಯಾಸಕ್ಕಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಾರಂಭಿಸಿ ಹಲವಾರು ರಾಷ್ಟ್ರಗಳು ಈ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ಸ್ವತಃ ಪ್ರಧಾನ ಮಂತ್ರಿಗಳು ವಿಶೇಷ ಮುತುವರ್ಜಿಯಿಂದ ಇಂದು ಭಾರತವು ವಿಶ್ವಕ್ಕೆ ಯೋಗ ಗುರು ಆಗಿ ಹೊರ ಹೊಮ್ಮಿರುವುದಾಗಿ ತಿಳಿಸಿದರು.
ಡಾ.ಮಲ್ಲಣ್ಣ ತೋಟದ, ಜಿಲ್ಲಾ ಆಯುಷ ಅಧಿಕಾರಿ


Be the first to comment

Leave a Reply

Your email address will not be published.


*