ಕೊಂಕಣ ಎಜುಕೇಶನ್ ಟ್ರಸ್ಟ್‌ನಲ್ಲಿ ವಿಶ್ವ ಯೋಗ ದಿನ ಆಚರಣೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಕುಮಟಾ: ಕೊಂಕಣ ಎಜುಕೇಶನ್ ಟ್ರಸ್ಟ್‌ನ ಎಲ್ಲ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ವಿಶ್ವ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೊರೊನಾ ಕಾರಣದಿಂದ 1 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ದೀಪ ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗದ ಕುರಿತಾಗಿ ಸಂದೇಶ ನೀಡಿದ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಡಾ. ರವೀಂದ್ರ ಭಟ್ಟ ಸೂರಿ, ಭಾರತೀಯರು ಜ್ಞಾನದ ಪ್ರತಿಫಲವಾಗಿ ಬದುಕಿಗೆ ಯೋಗ, ಪ್ರಾಣಾಯಾಮ ಹಾಗೂ ಜೀವನ ಮೌಲ್ಯಗಳನ್ನು ಕಟ್ಟಿಕೊಂಡವರಾಗಿದ್ದು, ನಮ್ಮ ಪೂರ್ವಜರು ನೀಡಿದ ಕೊಡುಗೆಯನ್ನು ನಾವೆಲ್ಲರೂ ಇಂದು ಮರೆಯುತ್ತಿದ್ದೇವೆ. ಮನಸ್ಸು ಹರಿಯುವ ನೀರಾಗಬೇಕೇ ವಿನಃ ನಿಂತ ನೀರಾಗಬಾರದು ಎಂದ ಅವರು, ಯುವ ಪೀಳಿಗೆ ಯೋಗ, ಪ್ರಾಣಾಯಾಮಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತ ಪ್ರಜೆಯಾಗಬೇಕು ಎಂದರು.

ದೈಹಿಕ ಶಿಕ್ಷಕರಾದ ಜಯರಾಜ ಶೇರುಗಾರ, ನಾಗರಾಜ ಭಂಡಾರಿ, ಈಶ್ವರ ಗೌಡ ಹಾಗೂ ಸುಮಂಗಲಾ ನಾಯ್ಕ ಯೋಗಾಸನಗಳ ವಿವಿಧ ಆಸನಗಳನ್ನು ಪ್ರದರ್ಶಿಸಿ, ಮಕ್ಕಳಿಗೂ ಆನ್‌ಲೈನ್ ಮೂಲಕ ಯೋಗ ತರಬೇತಿ ನೀಡಿದರು. ಸುಮಾರು 1000 ಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗ ದಿನದಲ್ಲಿ ಭಾಗವಹಿಸಿದ್ದರು.ವೇದಿಕೆಯಲ್ಲಿ ಶೈಕ್ಷಣಿಕ ಸಲಹೆಗಾರ ಆರ್.ಎಚ್.ದೇಶಭಂಡಾರಿ, ವಿಧಾತ್ರಿ ಅಕಾಡಮಿಯ ಪ್ರಮುಖ ಗುರುರಾಜ ಶೆಟ್ಟಿ, ಸರಸ್ವತಿ ಪಿ.ಯು ಕಾಲೇಜಿನ ಪ್ರಾಂಶುಪಾಲ ಮಹೇಶ ಉಪ್ಪಿನ್, ಸಿ.ವಿ.ಎಸ್.ಕೆ ಮುಖ್ಯಶಿಕ್ಷಕಿ ಸುಮಾ ಪ್ರಭು, ಸರಸ್ವತಿ ವಿದ್ಯಾ ಕೇಂದ್ರದ ಮುಖ್ಯ ಶಿಕ್ಷಕಿ ಸುಜಾತಾ ನಾಯ್ಕ, ಬಾಲಮಂದಿರದ ಮುಖ್ಯ ಶಿಕ್ಷಕಿ ಸಾವಿತ್ರಿ ಹೆಗಡೆ ಉಪಸ್ಥಿತರಿದ್ದರು. ಸಂಗೀತ ಶಿಕ್ಷಕಿ ಲಕ್ಷ್ಮೀ ಹೆಗಡೆ ಪ್ರಾರ್ಥಿಸಿದರು. ಶಿಕ್ಷಕ ಚಿದಾನಂದ ಭಂಡಾರಿ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ಗಣೇಶ ಜೋಶಿ ವಂದಿಸಿದರು.

Be the first to comment

Leave a Reply

Your email address will not be published.


*