ರಾಜ್ಯ ಸುದ್ದಿಗಳು
ಬೆಂಗಳೂರು
ಚಾಲಕರ ಜೀವನ ನೀರಮೇಲಿನ ಗುಳ್ಳೆ…. ಭಾವಪೂರ್ಣ ಪೂರ್ಣ ಶ್ರದ್ಧಾಂಜಲಿ.. ದಯವಿಟ್ಟು ನಮ್ಮ ಚಾಲಕರಲ್ಲಿ ಮನವಿ ಮಾಡುವುದೇನೆಂದೆರೆ ಹಗಲು ಇರುಳು ಎನ್ನದೆ ಸಂಚಾರಿ ದಟ್ಟಣೆಯಲ್ಲಿ ಕೆಲವು ಗ್ರಾಹಕರ ಹಿಂಸೆ.ಫೈನಾನ್ಸ್ ಕಂಪನಿಗಳ ಹಾವಳಿ ಮನೆ ಬಾಡಿಗೆ ಚಿಂತೆ.. ತಂದೆ ತಾಯಿ ಹೆಂಡತಿ ಮಕ್ಕಳ ಚಿಂತೆ.
ಅಕ್ಕ ತಂಗಿಯರ ಚಿಂತೆ… ಹಗಲು ಇರುಳು ದುಡಿದರು ಸರಿಯಾದ ದುಡಿಮೆ ಇಲ್ಲದ ಚಿಂತೆ… ಈ ಚಿಂತೆಗಳ ಮಧ್ಯೆ ನಮ್ಮ ಚಾಲಕರ ಜೀವನ.. ಪಾರ್ಕಿಂಗ್ ಗಳಲ್ಲಿ ಸ್ವಲ್ಪ ಸಮಯ ಸಿಕ್ಕಿದರು ಧಣಿದ ಚಾಲಕ ತನ್ನ ಕಾರಿನ ಸೀಟ್ ಬೆಂಡ್ ಮಾಡಿದರೆ ಸಾಕು ಘಾಡವಾದ ನಿದ್ರೆಗೆ ಜಾರುತ್ತೇವೆ… ಈ ವೇಳೆಗೆ ನಾವುಗಳು ಮಾಡುವ ತಪ್ಪೆಂದರೆ..
ಕಾರಿನ ಎಲ್ಲಾ ಬಾಗಿಲು ಕಾರಿನ ಎಲ್ಲಾ ವಿಂಡೊ ಗ್ಲಾಸ್ ಗಳನ್ನು ಸಂಪೂರ್ಣವಾಗಿ ಮುಚ್ಚಿ ನಿದ್ರೆಗೆ ಜಾರಿಬಿಡುತ್ತೆವೇ ಇದರಿಂದ ನಾವು ಉಸಿರಾಡುವ ನಮ್ಮ ಕಾರಿನ ಒಳಗೆ ತುಂಬಿಕೊಂಡು ಸರಿಯಾದ ಗಾಳಿ ಸಿಗದೆ ಆಕ್ಸಿಜನ್ ಕೊರತೆಯಿಂದ ಸರಿಯಾಗಿ ಉಸಿರಾಡಲು ಸಾದ್ಯವಾಗದೆ ಸಾವುಗಳು ಸಂಭವಿಸುತ್ತದೆ..
ದಯವಿಟ್ಟು ಈ ರೀತಿ ಮಾಡದೆ ನಿಮ್ಮ ಕಾರಿನ ಬಾಗಿಲನ್ನು ಸಂಪೂರ್ಣವಾಗಿ ಲಾಕ್ ಮಾಡಿ ಕಾರಿನ ವಿಂಡೋ ಗ್ಲಾಸ್ ಗಳನ್ನ 1 ಇಂಚು ಅಥವಾ ½ ಇಂಚಿನಷ್ಟಾದರು ಗ್ಲಾಸ್ ಗಳನ್ನು ಕೆಳಗೆ ಇಳಿಸಿ ಮಲಗಿ… ಹಾಗೇಯೇ ನೀವೂ ಎಲ್ಲಾದರು ಕಾರಿನಲ್ಲಿ ರಾತ್ರಿಯಿಡಿ ಮಲಗುವ ಸಮಯದಲ್ಲಿ ನೀವೂ ಇರುವ ಸ್ಥಳದ ಸಂಪೂರ್ಣ ಮಾಹಿತಿ ಮತ್ತು ಲೊಕೆಶನ್ ನಿಮ್ಮ ಗೆಳೆಯರಿಗೆ ಅಥವಾ ನಿಮ್ಮ ಅಣ್ಣ ತಮ್ಮ ಯಾರಿಗಾದರು ಮಾಹಿತಿ ಕೊಟ್ಟು ನಂತರ ನೀವುಗಳು ಕಾರಿನಲ್ಲಿ ಮಲಗಿ…
ಇಂತಿ ನಿಮ್ಮ ಟ್ಯಾಕ್ಸಿ ಮಿತ್ರ ಮೂರ್ತಿ ಗಿರಿನಗರ ಕರ್ನಾಟಕ ಚಾಲಕರ ಒಕ್ಕೂಟ
Be the first to comment